12 January 2025
Author: Gangadhar Saboji
ಇಕಿಗೈ: ಜೀವನದ ಮಹತ್ವ ಕಂಡುಕೊಳ್ಳಿ. ಇದು ನಕಾರಾತ್ಮಕ ಆಲೋಚನೆಗಳಿಂದ ದೂರವಿರಲು ಮತ್ತು ಅರ್ಥಪೂರ್ಣ ಜೀವನ ನಡೆಸಲು ಸಹಾಯ ಮಾಡುತ್ತದೆ.
ಕೈಜೆನ್: ನಮ್ಮನ್ನು ನಾವು ಪ್ರತಿನಿತ್ಯ ಸುಧಾರಿಸಿಕೊಳ್ಳುವುದು. ನಮ್ಮಿಂದಾಗುವ ಸಣ್ಣ, ಸಣ್ಣ ಕೆಲಸಗಳನ್ನು ಮಾಡುವ ಮೂಲಕ ಆತ್ಮವಿಶ್ವಾಸವನ್ನು ಹಚ್ಚಿಸಿಕೊಳ್ಳುವುದು. ಸಾಧನೆಯ ಭಾವ ಬೆಳೆಸಿಕೊಳ್ಳಬಹುದು.
ಶಿನ್ರಿನ್-ಯೋಕು: ಪ್ರಕೃತಿ ಮಧ್ಯೆ ಕಾಲ ಕಳೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಆ ಮೂಲಕ ಆಯಾಸ, ಒತ್ತಡ ದೂರವಾಗಿ ಹೊಸ ಚೈತನ್ಯ ಬರುವುದು.
ಝಝೆನ್: ಝಝೆನ್ ಎಂಬುದು ಜಪಾನಿಯಲ್ಲಿ ಭಾಷೆಯಲ್ಲಿ ಧ್ಯಾನ ಎಂದರ್ಥ. ಅತಿಯಾಗಿ ಆಲೋಚನೆ ಮಾಡುವವರು ಧ್ಯಾನ ಮಾಡುವುದು ಉತ್ತಮ. ನಿತ್ಯ ಧ್ಯಾನ ಮಾಡುವುದರಿಂದ ಅತಿಯಾದ ಆಲೋಚನೆಗಳಿಂದ ದೂರವಾಗಬಹುದು.
ವಾಬಿ-ಸಾಬಿ: ವಾಬಿ-ಸಾಬಿ ಎಂದರೆ ಜೀವನದಲ್ಲಿ ಯಾವುದು ಶಾಶ್ವತವಲ್ಲ. ಯಾವುದೂ ಪರಿಪೂರ್ಣವಲ್ಲ ಅಥವಾ ಶಾಶ್ವತವಲ್ಲ ಎಂಬುದನ್ನು ತಿಳಿದುಕೊಳ್ಳುವುದಾಗಿದೆ.
ಕಿಂಟ್ಸುಗಿ: ಒಡೆದ ಮಡಿಕೆಯೊಂದನ್ನು ಕುಂಬಾರ ಮತ್ತೆ ಸರಿಪಡಿಸುವಂತೆ, ನಾವುಗಳು ನಮ್ಮ ನ್ಯೂನತೆಗಳು ಮತ್ತು ಸವಾಲುಗಳನ್ನು ಸ್ವೀಕರಿಸಬೇಕು. ಎಲ್ಲವನ್ನೂ ಎದುರಿಸುವುದು.
ಹರಗೇಯ್: ಇದು ಒಂದು ಸಂವಹನ ಪ್ರಕ್ರಿಯೆ ಆಗಿದೆ. ನಮ್ಮೊಂದಿಗೆ ನಾವು ಮಾತನಾಡಿಕೊಳ್ಳುವುದು ಕೂಡ ಅತಿಯಾದ ಆಲೋಚನೆಗಳಿಂದ ಹೊರಬರಲು ಸಹಕಾರಿಯಾಗಿದೆ.
ಗಾಮನ್: ಜೀವನದ ಸವಾಲುಗಳನ್ನು ಎದುರಿಸಲು ತಾಳ್ಮೆ ಅವಶ್ಯಕ. ಪ್ರತಿ ಸಂದರ್ಭದಲ್ಲಿ ತಾಳ್ಮೆ ಕಾಯ್ದುಕೊಳ್ಳುವ ಮೂಲಕ ಅತಿಯಾದ ಆಲೋಚನೆಗಳನು ಕಡಿಮೆ ಮಾಡಬಹುದು.