25-12-2023

ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಸರಳ ಸಲಹೆಗಳು!

Author: Preeti Bhat Gunavanthe

Pic Credit - Pintrest

ಚಳಿಗಾಲದ ರಜಾ ದಿನಗಳಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಅದರಲ್ಲಿಯೂ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಗಳು ಇರುವುದರಿಂದ ಈ ಋತುವಿನಲ್ಲಿ ನಿಮ್ಮ ಆರೋಗ್ಯ ಹದಗೆಡಬಹುದು.

Pic Credit - Pintrest

ಆಹಾರದಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ನಿಮ್ಮ ಆಹಾರವನ್ನು ಸಮತೋಲನದಲ್ಲಿಡಲು, ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಿ.

Pic Credit - Pintrest

ಹೈಡ್ರೇಟ್ ಆಗಿರಲು ಹಗಲಿನಲ್ಲಿ ಸಾಕಷ್ಟು ನೀರು ಕುಡಿಯುವುದನ್ನು ಮರೆಯದಿರಿ. ಹಬ್ಬಗಳ ಸಮಯದಲ್ಲಿ ಅತಿಯಾಗಿ ಸೇವನೆ ಮಾಡುವುದನ್ನು ತಡೆಯುತ್ತದೆ.

Pic Credit - Pintrest

ಅತಿಯಾಗಿ ಸಿಹಿ ತಿನ್ನುವುದನ್ನು ತಪ್ಪಿಸಿ. ಹೆಚ್ಚಿನ ಕ್ಯಾಲೊರಿ ಇರುವ ತಿಂಡಿ ತಿನ್ನುವುದನ್ನು ಕೂಡ ತಪ್ಪಿಸಿ. 

Pic Credit - Pintrest

ಸ್ಮಾರ್ಟ್ ಆಯ್ಕೆಯನ್ನು ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದಷ್ಟು, ಆರೋಗ್ಯಕರ ಬದಲಿಗಳನ್ನು ಬಳಸಿ.

Pic Credit - Pintrest

ದಿನಚರಿಯಲ್ಲಿ ವ್ಯಾಯಾಮವನ್ನು ಅಳವಡಿಸಿಕೊಳ್ಳಿ. ಯೋಗ, ನೃತ್ಯ, ಚುರುಕಾದ ನಡಿಗೆ ಅಥವಾ ನಿಮಗೆ ಶಕ್ತಿ ನೀಡುತ್ತದೆ. 

Pic Credit - Pintrest

ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಹಬ್ಬಗಳ ಸಮಯದಲ್ಲಿ ಸಕ್ರಿಯವಾಗಿರಲು ಸ್ಟ್ರೆಚ್ ಗಳು ಅಥವಾ ಹತ್ತು ನಿಮಿಷಗಳ ವ್ಯಾಯಾಮಗಳು ನಿಮಗೆ ಸಹಾಯ ಮಾಡುತ್ತದೆ.

Pic Credit - Pintrest

ಹಬ್ಬ, ಮೋಜು,  ಪಾರ್ಟಿಗಳ ನಡುವೆ ಸಾಕಷ್ಟು ನಿದ್ರೆ ಮಾಡುವುದನ್ನು ಮರೆಯಬೇಡಿ.

Pic Credit - Pintrest