ಕಡಿಮೆ ಅಪರಾಧ ದರಗಳನ್ನು ಹೊಂದಿರುವ ಟಾಪ್ 9 ದೇಶಗಳಿವು

05-December-2023

Author: Malashree Anchan

ಜಪಾನ್ ಆರ್ಥಿಕವಾಗಿ ಸ್ಥಿರವಾದ ದೇಶ ಮಾತ್ರವಲ್ಲದೆ, ಇದು ವಾಸಿಸಲು ಅತ್ಯಂತ ಸುರಕ್ಷಿತವಾದ ದೇಶವಾಗಿದೆ.  ಈ ದೇಶದ ಜನರು ಮಾನವೀಯ ಮೌಲ್ಯಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಾರೆ. ಹಾಗಾಗಿ ಈ ದೇಶದಲ್ಲಿ  ಅಪರಾಧ ದರ ತೀರಾ ಕಡಿಮೆ. 

ಜಪಾನ್

ಸಿಂಗಾಪುರದಲ್ಲಿ ಒಂದು ಸಣ್ಣ ತಪ್ಪಿಗೂ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಹಾಗೂ ಇಲ್ಲಿ ಪರಿಣಾಮಕಾರಿ ಕಾನೂನು ವ್ಯವಸ್ಥೆಯಿದೆ. ಆದ ಕಾರಣ ಈ ದೇಶದಲ್ಲಿ ಅಪರಾಧ ದರ ತೀರಾ ಕಡಿಮೆಯಿದೆ. ಅಲ್ಲದೆ ಇದು ವಾಸಿಸಲು ಹಾಗೂ ಪ್ರವಾಸ ಹೋಗಲು ಅತ್ಯಂತ ಸುರಕ್ಷಿತ ದೇಶವಾಗಿದೆ.

ಸಿಂಗಾಪುರ

ಸಾಮಾಜಿಕ ಸ್ಥಿರತೆ, ಉನ್ನತಮಟ್ಟದ ಜೀವನಶೈಲಿ, ಪರಿಣಾಮಕಾರಿ ಕಾನೂನು ವ್ಯವಸ್ಥೆಗಳ ಕಾರಣದಿಂದಾಗಿ ಈ ದೇಶದಲ್ಲಿ ಅಪರಾಧ ದರಗಳು ಕಡಿಮೆಯಿದೆ. ಅಲ್ಲದೆ ಆಹಾರ ಭದ್ರತೆಯ ವಿಷಯದಲ್ಲಿ ಸ್ವಿಟ್ಜರ್ಲ್ಯಾಂಡ್ ವಿಶ್ವದ ನಾಲ್ಕನೇ ಸ್ಥಾನದಲ್ಲಿದೆ.  

ಸ್ವಿಟ್ಜರ್ಲೆಂಡ್

ಯುರೋಪ್ ಖಂಡದಲ್ಲಿ ಅತ್ಯಂತ ಕಡಿಮೆ ಅಪರಾಧ ದರಗಳಿರುವ ದೇಶವೆಂದರೆ ಅದು ಪೋರ್ಚುಗಲ್. ಸ್ಥಿರವಾದ ರಾಜಕೀಯ ವ್ಯವಸ್ಥೆ, ಸುವ್ಯಸ್ಥಿತ ಕಾನೂನು ವ್ಯವಸ್ಥೆಯ ಕಾರಣ ಇಲ್ಲಿ ಅಪರಾಧ ಕೃತ್ಯಗಳು ನಡೆಯುವುದು ತೀರಾ ವಿರಳ. 

ಪೋರ್ಚುಗಲ್

ಈ ದೇಶವನ್ನು ವಿಶ್ವದ ಐದನೇ ಸುರಕ್ಷಿತ ರಾಷ್ಟ್ರವೆಂದು ಪರಿಗಣಿಸಿದೆ. ಈ ದೇಶವು ಉತ್ತಮ ಉದ್ಯೋಗ, ವಿದ್ಯಾವಂತ ಜನರು, ಕಡಿಮೆ ಭ್ರಷ್ಟಾಚಾರ, ಉತ್ತಮ ಆರೋಗ್ಯ ಸೌಲಭ್ಯಗಳು ಮತ್ತು ದಕ್ಷ ಭದ್ರತಾ ಪಡೆಗಳು ಮತ್ತು ಸುವ್ಯವಸ್ಥಿತ ಕಾನೂನು ವ್ಯವಸ್ಥೆಗಳನ್ನು ಹೊಂದಿದೆ.

ಡೆನ್ಮಾರ್ಕ್

ಐಸ್ಲ್ಯಾಂಡ್ ವಿಶ್ವದ ಅತ್ಯಂತ ಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಈ ದೇಶದ ಅಪರಾಧಗಳ ಪ್ರಮಾಣ ತೀರಾ ಕಡಿಮೆ. ಈ ದೇಶವು ಧಾರ್ಮಿಕ ಸ್ವಾತಂತ್ರ್ಯ ಮತ್ತು ಪುರುಷ, ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಒದಗಿಸುತ್ತದೆ.

ಐಸ್ಲ್ಯಾಂಡ್

ಕೆನಡಾ ಪರಿಣಾಮಕಾರಿ ಕಾನೂನು ವ್ಯವಸ್ಥೆಯ ಕಾರಣ ಇಲ್ಲಿ ಯಾವುದೇ ರೀತಿಯ ಅಪರಾಧಗಳು ನಡೆಯುವುದು ತೀರಾ ವಿರಳ. ಇದು ಅತ್ಯಂತ ಶಾಂತಿಯುವ ದೇಶವಾಗಿದ್ದು, ಪ್ರವಾಸಿಗರಿಗೆ ಬೇಟಿ ನೀಡಲು ಸೂಕ್ತವಾದ ದೇಶವಾಗಿದೆ.  

ಕೆನಡಾ

ಈ ದೇಶವು ವಾಸಿಸಲು ಹಾಗೂ ಪ್ರವಾಸ ಹೋಗಲು ಅತ್ಯಂತ ಸುರಕ್ಷಿತ ದೇಶವಾಗಿದೆ.  ಪ್ರಬಲ ಪೋಲೀಸ್ ವ್ಯವಸ್ಥೆ, ಪರಿಣಾಮಕಾರಿ ನ್ಯಾಯಾಂಗ ವ್ಯವಸ್ಥೆಯ ಕಾರಣ ಇಲ್ಲಿನ ಅಪರಾಧ ಪ್ರಮಾಣವೂ ತೀರಾ ಕಡಿಮೆ. 

ನ್ಯೂಜಿಲ್ಯಾಂಡ್

ಜೆಕ್ ರಿಪಬ್ಲಿಕ್ ಅತ್ಯಂತ ಸುರಕ್ಷಿತ ದೇಶಗಳಲ್ಲಿ ಒಂದು. ಇಲ್ಲಿ ಯಾವುದೇ ಹಿಂಸಾತ್ಮಕ ಅಪರಾಧಗಳು ನಡೆಯುವುದು ತೀರಾ ಕಡಿಮೆ. ಹಾಗಾಗಿ ಇದು ವಾಸಿಸಲು  ಹಾಗೂ ಪ್ರವಾಸಿಗರು ಭೇಟಿ ನೀಡಲು ಅತ್ಯಂತ ಯೋಗ್ಯವಾದ ದೇಶವಾಗಿದೆ.

ಜೆಕ್ ರಿಪಬ್ಲಿಕ್