30-11-2023

ಮುಖದ ನೈಸರ್ಗಿಕ ಹೊಳಪಿಗೆ ದಾಸವಾಳ ಹೂ ಸಹಕಾರಿ!

Author:  ಗಂಗಾಧರ ಸಾಬೋಜಿ

ದಾಸವಾಳ ಹೂವನ್ನು ಸಾಮಾನ್ಯವಾಗಿ ಪೂಜೆಗೆ ಬಳಸಲಾಗುತ್ತದೆ. ಆದರೆ ಈ ಹೂವಿನಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ.

ನಿಮ್ಮ ಕೂದಲು ಮತ್ತು ತ್ವಚೆಗೆ ದಾಸವಾಳ ಹೂ ತುಂಬಾ ಪ್ರಯೋಜನಕಾರಿ ಆಗಿದೆ.

ದಾಸವಾಳ ಹೂ ಗಳಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ಚರ್ಮಕ್ಕೆ ತುಂಬಾ ಒಳ್ಳೆಯದು.

ದಾಸವಾಳ ಹೂವಿನ ಫೇಸ್ ಪ್ಯಾಕ್ ಮಾಡಿ ಬಳಸುವುದರಿಂದ ತ್ವಚೆಯ ಕಲೆಗಳನ್ನು ಹೋಗಲಾಡಿಸಬಹುದು.

ದಾಸವಾಳ ಹೂ ಮತ್ತು ಗ್ರೀನ್ ಟೀ ಮಿಶ್ರಣ ಮಾಡಿ ಪ್ಯಾಕ್​ ತಯಾರಿಸಿಕೊಂಡು ತ್ವಚೆಗೆ ಹಚ್ಚುವುದರಿಂದ ಕಲೆಗಳನ್ನು ತೆಗೆದುಹಾಕಬಹುದಾಗಿದೆ.

ಇದು ತ್ವಚೆಯ ಫ್ರೀ ರ್ಯಾಡಿಕಲ್ ಡ್ಯಾಮೇಜ್​ನಿಂದ ರಕ್ಷಿಸುವ ಕೆಲಸ ಮಾಡುತ್ತದೆ.

ಅಲೋವೆರಾ ಮತ್ತು ದಾಸವಾಳ ಹೂವಿನ ಪ್ಯಾಕ್​ನ್ನು ವಾರಕ್ಕೆ 2 ಬಾರಿ ಬಳಸುವುದರಿಂದ ಚರ್ಮ ತೇವಗೊಳ್ಳುತ್ತದೆ.  

ದಾಸವಾಳ ಹೂವಿನ ನಿಯಮಿತ ಬಳಕೆ ಯುವಿ ಕಿರಣಗಳಿಂದ ರಕ್ಷಿಸುತ್ತದೆ.