5 september 2024

Pic credit - iStock

ಯಾವ ರಾಜ್ಯಗಳಲ್ಲಿ ಆಲ್ಕೋಹಾಲ್ ಸೇವನೆ ಅತಿ ಹೆಚ್ಚು?

Author: Sushma Chakre

ಮದ್ಯಪಾನವು ಅನೇಕ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಆದರೂ ಜನರಲ್ಲಿ ಮದ್ಯಪಾನ ಮಾಡುವ ಚಟ ಕಡಿಮೆಯಾಗಿಲ್ಲ. ಮದ್ಯವ್ಯಸನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

Pic credit - iStock

ಅತಿ ಹೆಚ್ಚು ಆಲ್ಕೋಹಾಲ್ ಸೇವಿಸುವ ರಾಜ್ಯಗಳ ಬಗ್ಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ ಆ್ಯಂಡ್ ಪಾಲಿಸಿ ಅಧ್ಯಯನ ನಡೆಸಿದೆ. ಈ ಅಧ್ಯಯನವು ಯಾವ ರಾಜ್ಯದ ವ್ಯಕ್ತಿಯು ವರ್ಷಕ್ಕೆ ಎಷ್ಟು ಹಣವನ್ನು ಆಲ್ಕೋಹಾಲ್​ಗಾಗಿ ಖರ್ಚು ಮಾಡುತ್ತಾನೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ತೆಲಂಗಾಣ ರಾಜ್ಯ ಅಗ್ರಸ್ಥಾನದಲ್ಲಿದೆ.

Pic credit - iStock

ತೆಲಂಗಾಣದ ವ್ಯಕ್ತಿಯೊಬ್ಬರು ವರ್ಷಕ್ಕೆ 1,623 ರೂ.ಗಳನ್ನು ಮದ್ಯಪಾನಕ್ಕಾಗಿ ವ್ಯಯಿಸುತ್ತಿದ್ದಾರೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 2022ರಲ್ಲಿ ತೆಲಂಗಾಣದಲ್ಲಿ 1,694 ರೂ., 2023ರಲ್ಲಿ 1,623 ರೂ. ವೆಚ್ಚ ಮಾಡಲಾಗಿದೆ.

Pic credit - iStock

ಉತ್ತರ ಪ್ರದೇಶವು ವಾರ್ಷಿಕವಾಗಿ ಮದ್ಯಕ್ಕಾಗಿ ಅತಿ ಕಡಿಮೆ ಖರ್ಚು ಮಾಡುವ ರಾಜ್ಯವಾಗಿದೆ. ಇಲ್ಲಿ ವ್ಯಕ್ತಿಯೊಬ್ಬರು ವರ್ಷಕ್ಕೆ ರೂ.75 ವರೆಗೆ ಖರ್ಚು ಮಾಡುತ್ತಾರೆ ಎಂದು ವರದಿಯಾಗಿದೆ.

Pic credit - iStock

ತೆಲಂಗಾಣದ ನಂತರ, ಆಂಧ್ರಪ್ರದೇಶವು 2022-23ರಲ್ಲಿ ಮದ್ಯಕ್ಕಾಗಿ ಪ್ರತಿ ವರ್ಷ ತಲಾ 1,306 ರೂ. ವೆಚ್ಚ ಮಾಡುತ್ತಾರೆ. 2022ರಲ್ಲಿ ವ್ಯಕ್ತಿ ವರ್ಷಕ್ಕೆ 1,406 ರೂ.ಗಳನ್ನು ಖರ್ಚು ಮಾಡಿದ್ದಾರೆ.

Pic credit - iStock

ಆಲ್ಕೋಹಾಲ್ ಸೇವನೆಯಲ್ಲಿ ಪಂಜಾಬ್ ರಾಜ್ಯ 3ನೇ ಸ್ಥಾನದಲ್ಲಿದೆ. ಪಂಜಾಬ್‌ನಲ್ಲಿ ಮದ್ಯಕ್ಕಾಗಿ ವ್ಯಕ್ತಿಯೊಬ್ಬರು ವರ್ಷಕ್ಕೆ 1,245 ರೂ. ಖರ್ಚು ಮಾಡುತ್ತಾರೆ ಎಂದು ವರದಿಯಾಗಿದೆ.

Pic credit - iStock

ಭೂಮಿ ಮೇಲೆ ನಮ್ಮ ಸುತ್ತಲೂ ವಾಸ ಮಾಡುತ್ತಿರುವ ಈ ಪ್ರಾಣಿಗಳು ತಮ್ಮ ವಿವಿಧ ಗುಣಲಕ್ಷಣಗಳು ಮತ್ತು ಸಾಮರ್ಥ್ಯಗಳಿಂದಾಗಿ ಮಾನವರು ಮತ್ತು ಇತರ ಜೀವಿಗಳಿಗೆ ಪ್ರಾಣಾಪಾಯವನ್ನು ಉಂಟುಮಾಡುತ್ತವೆ. ಇವು ಹಾವಿಗಿಂತಲೂ ವಿಷಕಾರಿಯಾದ ಜೀವಿಗಳಾಗಿವೆ.

Pic credit - iStock