ನೀವು ಒಳ್ಳೆ ತಂದೆಯಾ ಎಂದು ತಿಳಿಯುವುದು ಹೇಗೆ?

11 Dec 2023

Author: Sushma Chakre

ಪಿತೃತ್ವವು ತರುವ ಸಂತೋಷವು ಯಾವುದಕ್ಕೂ ಹೋಲಿಸಲಾಗದು. ಈ ಪಾತ್ರವು ದೊಡ್ಡ ಜವಾಬ್ದಾರಿಗಳನ್ನು ನೀಡುತ್ತದೆ. ತಂದೆಯಾಗುವುದು ಮುಖ್ಯವಲ್ಲ; ಉತ್ತಮ ತಂದೆಯಾಗುವುದು ಬಹಳ ಮುಖ್ಯ.

ಒಳ್ಳೆ ತಂದೆಯಾಗುವುದು ಸುಲಭವಲ್ಲ

ಉತ್ತಮ ತಂದೆಯಾದವನು ಹೇಗಿರಬೇಕು? ಎಂಬ ಬಗ್ಗೆ ಕೆಲವು ಸಂಗತಿಗಳು ಇಲ್ಲಿವೆ.

ಉತ್ತಮ ತಂದೆ ಹೇಗಿರಬೇಕು?

ನಿಮ್ಮ ಸ್ವಂತ ನಿರೀಕ್ಷೆಗಳನ್ನು ಮಕ್ಕಳ ಮೇಲೆ ಹೇರದೆ ನಿಮ್ಮ ಮಕ್ಕಳ ಕನಸುಗಳು, ಆಸಕ್ತಿಗಳು ಮತ್ತು ಆಕಾಂಕ್ಷೆಗಳನ್ನು ಬೆಂಬಲಿಸಬೇಕು.

ಮಕ್ಕಳ ಕನಸಿಗೆ ನೀರೆರೆಯಿರಿ

ನಿಮ್ಮ ಮಕ್ಕಳ ಜೀವನದಲ್ಲಿ ನೀವು ಕೂಡ ತೊಡಗಿಸಿಕೊಳ್ಳಿ. ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ.

ಮಕ್ಕಳೊಂದಿಗೆ ಕಾಲ ಕಳೆಯಿರಿ

ನಿಮ್ಮ ಮಕ್ಕಳ ಕಾಳಜಿ, ಆಲೋಚನೆಗಳು ಮತ್ತು ಭಾವನೆಗಳನ್ನು ನೀವು ಗಮನವಿಟ್ಟು ಕೇಳಬೇಕು. ನಿಮ್ಮ ಮಕ್ಕಳು ಎಲ್ಲ ವಿಷಯವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುವಂತಾಗಬೇಕು.

ಮಕ್ಕಳ ಮಾತನ್ನು ಆಲಿಸಿ

ನಿಮ್ಮ ಮಕ್ಕಳ ಶಿಕ್ಷಣದಲ್ಲಿ ನೀವು ಆಸಕ್ತಿಯನ್ನು ಹೊಂದಬೇಕು. ಅವರ ಹೋಂ ವರ್ಕ್​ಗೆ ಸಹಾಯ ಮಾಡಬೇಕು. ಮಕ್ಕಳ ಶಾಲಾ ಕಾರ್ಯಕ್ರಮಗಳಿಗೆ ಹೋಗಬೇಕು.

ಶಿಕ್ಷಣದಲ್ಲಿ ಸಹಾಯ ಮಾಡಿ

ನೀವು ನಿಯಮಗಳು ಮತ್ತು ಶಿಸ್ತನ್ನು ಮಕ್ಕಳಿಗೆ ಕಲಿಸಬೇಕು. ಆದರೆ, ಅದನ್ನು ಅವರ ಮೇಲೆ ಹೇರಬಾರದು. ಬದಲಾಗಿ ಅವರಿಗೆ ಅರ್ಥ ಮಾಡಿಸಬೇಕು.

ಸಮತೋಲಿತ ಶಿಸ್ತು

ನಿಮ್ಮ ಮಕ್ಕಳ ಆರೋಗ್ಯಕ್ಕೆ ನೀವು ಆದ್ಯತೆ ನೀಡಬೇಕು. ಅವರು ಪೌಷ್ಟಿಕಾಂಶದ ಊಟವನ್ನು ಮಾಡುತ್ತಾರೆಯೇ ಎಂದು ಗಮನಿಸಿ.

ಆರೋಗ್ಯಕ್ಕೆ ಗಮನ ಕೊಡಿ

ಮಕ್ಕಳೊಂದಿಗೆ ಹಂಚಿಕೊಂಡ ಅನುಭವಗಳು, ಪ್ರವಾಸಗಳು ಮತ್ತು ವಿಶೇಷ ಕ್ಷಣಗಳ ಮೂಲಕ ನಿಮ್ಮ ಮಕ್ಕಳೊಂದಿಗೆ ನೀವು ಕಳೆದ ದಿನಗಳ ನೆನಪುಗಳನ್ನು ಕಲೆಹಾಕಬೇಕು.

ನೆನಪುಗಳನ್ನು ರಚಿಸಿ

ನಿಮ್ಮ ಮಕ್ಕಳ ಪ್ರಯತ್ನಗಳು ಮತ್ತು ಯಶಸ್ಸನ್ನು ಗುರುತಿಸಿ ಅದನ್ನು ಸಂಭ್ರಮಿಸಿ. ನಿಮ್ಮ ಮಕ್ಕಳ ದೊಡ್ಡ ಮತ್ತು ಚಿಕ್ಕ ಸಾಧನೆಗಳೆರಡನ್ನೂ ಆಚರಿಸಿ.

ಸಾಧನೆಗಳನ್ನು ಆಚರಿಸಿ