ಮಲೈ ಚಹಾ ಮಾಡೋದು ಹೇಗೆ?
14 February 2025
Pic credit - Pintrest
Sainanda
ಕೆಲವರಿಗೆ ಚಹಾ ಇಲ್ಲದೇ ಹೋದರೆ ಆ ದಿನ ಪೂರ್ಣವಾಗುವುದೇ ಇಲ್ಲ. ದಿನಕ್ಕೆ ಎರಡು ಹೊತ್ತಾದರೂ ಟೀ ಸವಿಯಲೇಬೇಕು.
Pic credit - Pintrest
ಅದರಲ್ಲೂ ಕೆಲವರಿಗೆ ಮಲೈ ಚಹಾ ಎಂದರೆ ಅಚ್ಚು ಮೆಚ್ಚು. ಖಡಕ್ ಹಾಗೂ ಗಟ್ಟಿಯಾದ ಮಲೈ ಟೀ ಕೊಟ್ಟರೆ ಬೇಡ ಹೇಳಲು ಮನಸ್ಸೇ ಬರುವುದಿಲ್ಲ.
Pic credit - Pintrest
ಎಲ್ಲರೂ ಇಷ್ಟಪಡುವ ಈ ಮಲೈ ಟೀಯನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಿ ಕುಡಿಯಬಹುದು.
Pic credit - Pintrest
ಮಲೈ ಚಹಾ ತಯಾರಿಸಲು ಬೇಕಾಗುವ ಸಾಮಗ್ರಿಗಳು : 2 ಟೀ ಚಮಚ ಚಹಾ ಪುಡಿ, ಒಂದು ಕಪ್ ಹಾಲು, ಒಂದು ಕಪ್ ನೀರು, ಎರಡು ಲವಂಗ, ಎರಡು ಏಲಕ್ಕಿ, ಸ್ವಲ್ಪ ಶುಂಠಿ, ಸಕ್ಕರೆ.
Pic credit - Pintrest
ಮೊದಲು ನೀರನ್ನು ಕುದಿಸಿಕೊಳ್ಳಿ. ಮಸಾಲೆಗಳನ್ನು ಜಜ್ಜಿ ನೀರಿಗೆ ಹಾಕಿ. ನೀರು ಕುದಿಯಲು ಶುರುವಾಗುತ್ತಿದ್ದಂತೆ ಚಹಾ ಪುಡಿ ಸೇರಿಸಿಕೊಳ್ಳಿ.
Pic credit - Pintrest
ಇದನ್ನು ಕಪ್ ಗೆ ಸೋಸಿ ಪಕ್ಕಕ್ಕೆ ಇರಿಸಿಕೊಳ್ಳಿ. ಇನ್ನೊಂದು ಪಾತ್ರೆ ಹಾಲು ಹಾಗೂ ಸಕ್ಕರೆ ಹಾಕಿ ಕುದಿಸಿಕೊಳ್ಳಿ.
Pic credit - Pintrest
ಗಟ್ಟಿಯಾದ ಹಾಲನ್ನು ಸೋಸಿಟ್ಟ ಚಹಾದೊಂದಿಗೆ ಬೆರೆಸಿಕೊಳ್ಳಿ. ಕ್ರೀಮಿಯರ್ ಆಗಿರಬೇಕೆಂದರೆ ಒಂದು ಚಮಚ ತಾಜಾ ಕ್ರೀಮ್ ಸೇರಿಸಿದರೆ ಮಲೈ ಚಹಾ ಸವಿಯಲು ಸಿದ್ಧ.
Pic credit - Pintrest
ಪ್ರೇಮಿಗಳ ದಿನಕ್ಕೆ ನಿಮ್ಮ ಮನದರಸಿಗೆ ಈ ರೀತಿ ವಿಶ್ ಮಾಡಿ
ಇದನ್ನೂ ಓದಿ