ಒಂಟಿತನವನ್ನು ಹೋಗಲಾಡಿಸುದು ಹೇಗೆ? ಇಲ್ಲಿದೆ ಟಿಪ್ಸ್

07 Dec 2023

Author: Malashree Anchan

ಒಂಟಿತನವು ಖಿನ್ನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಿರುವಾಗ ಈ ಕೆಲವು ಸಲಹೆಗಳನ್ನು ಪಾಲಿಸುವ ಮೂಲಕ ಒಂಟಿತನದ ಸಮಸ್ಯೆಯನ್ನು ಹೋಗಲಾಡಿಸಬಹುದು.

ವಾಕಿಂಗ್ ಇತ್ಯಾದಿ ದೈಹಿಕ ಚಟುವಟಿಕೆಗಳು ಮನಸ್ಸನ್ನು ಸಂತೋಷಪಡಿಸುವ ಮೂಲಕ ಒಂಟಿತನವನ್ನು ಹೋಗಲಾಡಿಸಲು ಸಹಕಾರಿಯಾಗಿದೆ.

ವಾಕಿಂಗ್

ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಹವ್ಯಾಸ ಇದ್ದೇ ಇರುತ್ತದೆ. ಉದಾಹರಣೆಗೆ ಕೆಲವರಿಗೆ ಪುಸ್ತಕ ಓದುವ ಹವ್ಯಾಸವಿದ್ದರೆ, ಕೆಲವರಿಗೆ ಚಿತ್ರಕಲೆಯಲ್ಲಿ ಹೆಚ್ಚಿನ ಹವ್ಯಾಸವಿರುತ್ತದೆ. ನಿಮ್ಮ ನೆಚ್ಚಿನ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ನೆಚ್ಚಿನ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ

ಒಂಟಿತನದಿಂದ ಮಾನಸಿಕವಾಗಿ ಕುಗ್ಗಿ ಹೋಗುತ್ತೀರಿ. ಹಾಗಾಗಿ ಆಗಾಗ್ಗೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಫೋನ್ ಕರೆಯ ಮೂಲಕವೋ ಅಥವಾ ಅವರನ್ನು ಮುಖಮುಖಿ ಭೇಟಿಯಾಗುವ ಮೂಲಕ ಅವರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ. 

ಪ್ರೀತಿ ಪಾತ್ರರೊಂದಿಗೆ ಮಾತನಾಡಿ

ಸಾಕುಪ್ರಾಣಿಗಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ನಿಮ್ಮ ಒತ್ತಡ ನಿವಾರಣೆಯಾಗುವುದಲ್ಲದೆ ಇದು ಒಂಟಿತನವನ್ನು ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. 

ಸಾಕು ಪ್ರಾಣಿಗಳೊಂದಿಗೆ ಸಮಯವನ್ನು ಕಳೆಯಿರಿ:

ಒಬ್ಬಂಟಿಯಾಗಿದ್ದಾಗ ಸೋಮಾರಿತನವು ಹೆಚ್ಚಾಗುತ್ತದೆ,ಹಾಗಿರುವಾಗ ವ್ಯಾಯಾಮಗಳನ್ನು ಮಾಡುವ ಮೂಲಕ, ಆಟ ಆಡುವ ಮೂಲಕ, ನಿಮ್ಮ ನೆಚ್ಚಿನ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ

ಯಾವಾಗಲೂ ಸಕ್ರಿಯರಾಗಿರಿ:

ಕೆಲವು ಹೊಸ ಕೆಲಸಗಳನ್ನು ಕಲಿಯುವ ಮೂಲಕ ಅಥವಾ ಬೇರೆ ಬೇರೆ ಭಾಷೆಗಳನ್ನು ಕಲಿಯಲು ಪ್ರಯತ್ನಿಸುವ ಮೂಲಕ ನೀವು ಒಂಟಿತನವನ್ನು ಹೋಗಲಾಡಿಸಬಹುದು.

ಹೊಸ ಕೆಲಸಗಳನ್ನು ಕಲಿಯಲು ಪ್ರಯತ್ನಿಸಿ: