ಡಾರ್ಕ್ ಸರ್ಕಲ್ ಅನ್ನು ನಿವಾರಿಸಲು ಅತ್ಯಂತ ಪರಿಣಾಮಕಾರಿ ಮತ್ತು ಅತ್ಯಂತ ಸುಲಭವಾದ ಮಾರ್ಗವೆಂದರೆ ತಣ್ಣನೆಯ ಚಹಾ ಬ್ಯಾಗ್ಗಳನ್ನು ಬಳಸುವುದು. ಗ್ರೀನ್ ಟೀ ಅಥವಾ ಕ್ಯಾಮೊಮೈಲ್ ಟೀ ಬ್ಯಾಗ್‌ಗಳನ್ನು ಬಳಸಿದರೆ ಇನ್ನೂ ಒಳ್ಳೆಯದು. ಇದು ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ ಮತ್ತು ಕಪ್ಪು ವರ್ತುಲದಿಂದ ಸ್ವಲ್ಪ ಪರಿಹಾರವನ್ನು ನೀಡುತ್ತದೆ.
ತಣ್ಣನೆಯ ಟೀ ಬ್ಯಾಗ್
ತುರಿದ ಆಲೂಗಡ್ಡೆ ಅಥವಾ ತುರಿದ ಸೌತೆಕಾಯಿ ಕಣ್ಣಿನ ಸುತ್ತಲಿನ ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಮತ್ತು ಈ ತಂಪಾಗಿಸುವ ತರಕಾರಿಗಳು ಕಣ್ಣಿನ ಸುತ್ತಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಕೆಳಗೆ ಕಪ್ಪಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಸೌತೆಕಾಯಿ
ತಣ್ಣನೆಯ ಹಾಲು ಕಣ್ಣುಗಳಿಗೆ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಕಣ್ಣುಗಳ ಸುತ್ತಲಿನ ಸೂಕ್ಷ್ಮ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ತಣ್ಣನೆಯ ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಇದು ಚರ್ಮವನ್ನು ಹಗುರಗೊಳಿಸುತ್ತದೆ. ಹಾಲಿನಲ್ಲಿರುವ ಪೊಟ್ಯಾಸಿಯಮ್ ನಿಮಗೆ ಮೃದುವಾದ ಚರ್ಮವನ್ನು ನೀಡುತ್ತದೆ.
ತಣ್ಣನೆಯ ಹಾಲು
ಅಲೋವೆರಾ ಪರಿಣಾಮಕಾರಿ ಮಾಯಿಶ್ಚರೈಸರ್ ಆಗಿದೆ. ತೇವಾಂಶವುಳ್ಳ ಚರ್ಮವು ದೀರ್ಘಕಾಲದವರೆಗೆ ಆರೋಗ್ಯಕರವಾಗಿರುತ್ತದೆ. ಅಲೋವೆರಾ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ. ಅಕಾಲಿಕವಾಗಿ ವಯಸ್ಸಾಗುವುದನ್ನು ತಡೆಯುತ್ತದೆ.
ಅಲೋವೆರಾ
ಕಪ್ಪು ವರ್ತುಲಕ್ಕೆ ಚಿಕಿತ್ಸೆ ನೀಡಲು ಮತ್ತೊಂದು ಪರಿಹಾರವೆಂದರೆ ಬಾದಾಮಿ ಎಣ್ಣೆ ಮತ್ತು ನಿಂಬೆ ರಸದ ಮಿಶ್ರಣ. ಇದು ಸೌಮ್ಯವಾದ ಬ್ಲೀಚಿಂಗ್ ಕ್ರಿಯೆಯನ್ನು ಸಹ ಹೊಂದಿದೆ. ಇದನ್ನು ಬಳಸುವಾಗ ಕೊಂಚ ಪ್ರಮಾಣದಲ್ಲಿ ಉಪಯೋಗಿಸಿ. ಇಲ್ಲವಾದರೆ, ಕಣ್ಣಿನ ಕೆಳಗಿನ ಸೂಕ್ಷ್ಮ ಚರ್ಮಕ್ಕೆ ಹಾನಿಯಾಗಬಹುದು.
ಬಾದಾಮಿ ಎಣ್ಣೆ ಮತ್ತು ನಿಂಬೆ ರಸ
ರೋಸ್ ವಾಟರ್ ಬಹಳ ಹಿಂದಿನ ಕಾಲದಿಂದಲೂ ಮುಖದ ಸೌಂದರ್ಯಕ್ಕೆ ಬಳಸಲಾಗುತ್ತಿರುವ ವಸ್ತು. ಇದನ್ನು ಎಲ್ಲಾ ರೀತಿಯ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಬಳಸಬಹುದು.
ರೋಸ್ ವಾಟರ್
ಟೊಮ್ಯಾಟೋ ನೈಸರ್ಗಿಕ ಬ್ಲೀಚಿಂಗ್ ಏಜೆಂಟ್. ಇವುಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ಕಣ್ಣಿನ ಪ್ರದೇಶದ ಸುತ್ತಲಿನ ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೊಮ್ಯಾಟೊ
ಕಪ್ಪು ವರ್ತುಲಕ್ಕೆ ಮತ್ತೊಂದು ಮುಖ್ಯ ಕಾರಣವೆಂದರೆ ಒತ್ತಡ, ಖಿನ್ನತೆ ಮತ್ತು ಅನಿಯಮಿತ ಜೀವನಶೈಲಿ. ಹೀಗಾಗಿ, ಯೋಗ ಮತ್ತು ಧ್ಯಾನವನ್ನು ದಿನವೂ ಮಾಡುವುದರಿಂದ ಕಪ್ಪು ವರ್ತುಲವನ್ನು ಕಡಿಮೆ ಮಾಡಬಹುದು.
ಯೋಗ ಮತ್ತು ಧ್ಯಾನ
ನಿಯಮಿತವಾಗಿ ಸಾಕಷ್ಟು ನಿದ್ರೆ ಪಡೆಯುವುದರಿಂದ ಹಲವು ಪ್ರಯೋಜನಗಳಿವೆ. ನಿಯಮಿತ ನಿದ್ರೆಯು ನಿಮ್ಮ ದೇಹಕ್ಕೆ ವಿಶ್ರಾಂತಿ ನೀಡುತ್ತದೆ. ಇದು ನಿಮ್ಮ ತ್ವಚೆಯ ತಾರುಣ್ಯವನ್ನು ಹಾಗೂ ನಿಮ್ಮ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ.