ಹಬ್ಬಕ್ಕೆ ತ್ವಚೆಯ ಕಾಂತಿ ಹೆಚ್ಚಿಸಲು ಅರಶಿನದ ಈ ಫೇಸ್ ಪ್ಯಾಕ್
29 October 2024
Pic credit - Pinterest
Sainanda
ಹಬ್ಬದ ದಿನ ಹತ್ತಿರವಾಗುತ್ತಿದ್ದಂತೆ ಎಲ್ಲರಿಗೂ ಸುಂದರವಾಗಿ ಕಾಣಿಸಬೇಕೆನ್ನುವ ಆಸೆಯಿರುತ್ತದೆ.
Pic credit - Pinterest
ಹೀಗಾಗಿ ಅಡುಗೆ ಮನೆಯಲ್ಲಿರುವ ಅರಶಿನಕ್ಕೆ ಈ ಕೆಲವು ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚುವುದರಿಂದ ತ್ವಚೆಯ ಕಾಂತಿ ಹೆಚ್ಚಾಗುತ್ತದೆ.
Pic credit - Pinterest
ಅರಶಿನದಲ್ಲಿ ಉರಿಯೂತ ನಿವಾರಕ ಗುಣವು ಅಧಿಕವಾಗಿದ್ದು ಚರ್ಮದ ಮೇಲಿನ ಕಲೆಗಳು ನಿವಾರಿಸಿ ತ್ವಚೆಯ ಕಾಂತಿ ಹೆಚ್ಚಿಸುತ್ತದೆ.
Pic credit - Pinterest
ಎರಡು ಚಮಚ ಅರಿಶಿನವನ್ನು ಹುರಿದು ಅದರಲ್ಲಿ ಜೇನುತುಪ್ಪವನ್ನು ಬೆರೆಸಿ. ಮುಖಕ್ಕೆ ಅನ್ವಯಿಸಿ 15 ರಿಂದ 20 ನಿಮಿಷಗಳ ಕಾಲ ಬಿಟ್ಟು, ಮುಖ ತೊಳೆಯಿರಿ.
Pic credit - Pinterest
ಒಂದು ಚಮಚ ಹಾಲಿಗೆ ಎರಡು ಚಿಟಿಕೆಯಷ್ಟು ಅರಿಶಿನವನ್ನು ಬೆರೆಸಿ ಪೇಸ್ಟ್ ತಯಾರಿಸಿಕೊಳ್ಳಿ.
Pic credit - Pinterest
ಈ ಮಿಶ್ರಣವನ್ನು ರಾತ್ರಿ ಮಲಗುವ ಮೊದಲು ಮುಖಕ್ಕೆ ಹಚ್ಚಿ ಬೆಳಗ್ಗೆ ತಣ್ಣನೆಯ ನೀರಿನಲ್ಲಿ ತೊಳೆಯಿರಿ.
Pic credit - Pinterest
ಅರಿಶಿನಕ್ಕೆ ಕಡಲೆ ಹಿಟ್ಟು ಹಾಗೂ ಸ್ವಲ್ಪ ಹಾಲು ಬೆರೆಸಿ, ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ 10 ನಿಮಿಷಗಳ ನಂತರ ಮುಖ ತೊಳೆದರೆ ಕಾಂತಿ ಹೆಚ್ಚಾಗುತ್ತದೆ.
Pic credit - Pinterest
Next: ಉತ್ತಮ ನಿದ್ರೆಗಾಗಿ ದಿನನಿತ್ಯ ಸೇವಿಸಿ ಈ ಎಲೆಯ ಚಹಾ