ನೈಸರ್ಗಿಕವಾಗಿ ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸುವುದು ಹೇಗೆ?
27 Nov 2023
ಹಲ್ಲುಗಳ ಮೇಲೆ ಕಲೆ ಮೂಡುವುದು, ಹಳದಿಯಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಅದಕ್ಕೆ ಮನೆಯಲ್ಲಿಯೇ ಕೆಲವು ಚಿಕಿತ್ಸೆ ನೀಡುವ ಮೂಲಕ ನಿಮ್ಮ ಹಲ್ಲುಗಳನ್ನು ಬೆಳ್ಳಗೆ ಹೊಳೆಯುವಂತೆ ಮಾಡಬಹುದು.
ಹಳದಿ ಕಲೆ ಸಾಮಾನ್ಯ
ಬಾಯಿಯ ನೈರ್ಮಲ್ಯದ ಕೊರತೆ, ಹಲ್ಲುಗಳಿಗೆ ಗಾಯವಾಗುವುದು, ತಂಬಾಕು ಬಳಕೆ, ಧೂಮಪಾನ, ಅತಿಯಾದ ಕಾಫಿ, ಟೀ, ಕೋಲಾ ಅಥವಾ ರೆಡ್ ವೈನ್ ಕುಡಿಯುವುದು ಹೀಗೆ ನಾನಾ ಕಾರಣಗಳಿಂದ ಹಲ್ಲುಗಳು ಹಳದಿಗಟ್ಟುತ್ತವೆ.
ತಂಬಾಕು ಸೇವನೆ ಬಿಡಿ
ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸುವ ನೈಸರ್ಗಿಕ ವಿಧಾನಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದಕ್ಕಾಗಿ, ನಿಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಕೆಲವು ಹಣ್ಣುಗಳು ಮತ್ತು ಇತರ ಪದಾರ್ಥಗಳನ್ನು ನೀವು ಬಳಸಬಹುದು.
ಮನೆಯಲ್ಲೇ ಇದೆ ಪರಿಹಾರ
ಹಲ್ಲುಗಳನ್ನು ಬಿಳುಪಾಗಿಸಲು ನಿಂಬೆ ಹಣ್ಣಿನ ರಸ ಮತ್ತು ಸಿಪ್ಪೆಗಳನ್ನು ಬಳಸಬಹುದು. ಅವುಗಳು ಹೆಚ್ಚಿನ ಪ್ರಮಾಣದ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತವೆ. ಹೀಗಾಗಿ, ಹಲ್ಲನ್ನು ಬ್ಲೀಚ್ ಮಾಡುತ್ತವೆ. ನಿಂಬೆಹಣ್ಣುಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ. ಅದು ಹಲ್ಲಿನ ಪ್ಲೇಕ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಲೆಯಾದ ಹಲ್ಲುಗಳ ಮೇಲೆ ನಿಂಬೆ ಸಿಪ್ಪೆಯನ್ನು ಉಜ್ಜಬಹುದು ಅಥವಾ ಹಲ್ಲುಗಳ ಮೇಲೆ ನಿಂಬೆ ರಸವನ್ನು ಹಚ್ಚಿಕೊಳ್ಳಬಹುದು.
ನಿಂಬೆಹಣ್ಣು
ಪೈನಾಪಲ್ ಬ್ರೋಮೆಲಿನ್ ಎಂಬ ಕಿಣ್ವವನ್ನು ಹೊಂದಿರುತ್ತದೆ. ಇದು ನೈಸರ್ಗಿಕ ಸ್ಟೇನ್ ರಿಮೂವರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಹಲ್ಲಿನ ಪ್ಲೇಕ್ ನಿರ್ಮಾಣ ಮತ್ತು ಹಲ್ಲುಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಪೈನಾಪಲ್ ಹಣ್ಣನ್ನು ಹಾಗೇ ತಿನ್ನಬಹುದು. ಅಥವಾ ಜ್ಯೂಸ್ ಮಾಡಿಕೊಂಡು ಕೂಡ ಕುಡಿಯಬಹುದು.
ಅನಾನಸ್
ಪಪ್ಪಾಯಿ ಕಾಯಿ ಉತ್ತಮ ಬ್ಲೀಚಿಂಗ್ ಏಜೆಂಟ್ ಆಗಿದೆ. ಏಕೆಂದರೆ ಇದು ಪಾಪೈನ್ ಮತ್ತು ಚೈಮೊಪಪೈನ್ ಎಂಬ ಕಿಣ್ವಗಳನ್ನು ಹೊಂದಿರುತ್ತದೆ. ಈ ಕಿಣ್ವಗಳು ಹಣ್ಣಾದ ಪಪ್ಪಾಯಿಗಿಂತ ಹೆಚ್ಚಾಗಿ ಪಪ್ಪಾಯಿ ಕಾಯಿಯಲ್ಲಿ ಕಂಡುಬರುತ್ತವೆ. ಪಾಪೈನ್ ಕಿಣ್ವವು ಹಲ್ಲುಗಳ ಮೇಲಿನ ಕಲೆಗಳನ್ನು ತೆಗೆದುಹಾಕಲು ಮತ್ತು ಹಲ್ಲುಗಳಲ್ಲಿನ ಪ್ಲೇಕ್ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ.
ಪಪ್ಪಾಯಿ
ಬಾಳೆಹಣ್ಣಿನ ಸಿಪ್ಪೆಗಳನ್ನು ಎಸೆಯುವ ಮೊದಲು, ನಿಮ್ಮ ಹಲ್ಲುಗಳನ್ನು ಬಿಳುಪುಗೊಳಿಸಲು ಅವುಗಳನ್ನು ಬಳಸಿ. ಬಾಳೆಹಣ್ಣಿನ ಸಿಪ್ಪೆಯ ಕೆಳಭಾಗದಿಂದ ನಿಮ್ಮ ಹಲ್ಲುಗಳನ್ನು ಉಜ್ಜಬಹುದು. ಒಮ್ಮೆ ಉಜ್ಜಿದಾಗ ಕನಿಷ್ಠ 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಹಲ್ಲುಜ್ಜುವ ಬ್ರಷ್ ಅನ್ನು ತೆಗೆದುಕೊಂಡು ನಿಮ್ಮ ಹಲ್ಲುಗಳ ಮೇಲೆ ಬ್ರಶ್ ಮಾಡಿ.