Pic credit - Times Travel
ವಾರಣಾಸಿ ಗಂಗಾ ನದಿಯ ತಟದಲ್ಲಿದೆ. ಇಲ್ಲಿಯ ಘಾಟಗಳು ಆಧ್ಯಾತ್ಮಿಕ ಕೇಂದ್ರ ಬಿಂದುಗಳಾಗಿವೆ. ಕಾಶಿ ವಿಶ್ವನಾಥ ದೇವಾಲಯವು ಜಗತ್ತಿನ ಪುರಾತನ ದೇವಸ್ಥಾನಗಳಲ್ಲಿ ಒಂದು.
Pic credit - Times Travel
ಅಮೃತಸರವು ಐಕಾನಿಕ್ ಗೋಲ್ಡ್ ನ ಟೆಂಪಲ್ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ದೇವಾಲಯ ಸ್ವರ್ಣಲೇಪಿತವಾಗಿದೆ.
Pic credit - Times Travel
ರಾಮೇಶ್ವರ ಜ್ಯೋತಿರ್ಲಿಂಗ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಇದು ತಮಿಳುನಾಡು ರಾಜ್ಯದಲ್ಲಿದೆ.
Pic credit - Times Travel
ಪುರಿಯು ಹಿಂದೂಗಳ ಪ್ರಮುಖ ಯಾತ್ರಾ ಸ್ಥಳವಾಗಿದೆ. ಶ್ರೀಕೃಷ್ಣನ ಜಗನ್ನಾಥ ದೇವಸ್ಥಾನ ವಿಶ್ವವಿಖ್ಯಾತಿ. ಇಲ್ಲಿ ನಡೆಯುವ ಭವ್ಯವಾದ ರಥೋತ್ಸಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
Pic credit - Times Travel
ಕಾಂಚೀಪುರಂ ಅನ್ನು "ಸಾವಿರ ದೇವಾಲಯಗಳ ನಗರ" ಎಂದು ಕರೆಯಲಾಗಿದೆ. ಇದು ಪುರಾತನ ಮತ್ತು ವಾಸ್ತುಶಿಲ್ಪದ ನಿಧಿಯಾಗಿದೆ.
Pic credit - Times Travel
ಕೇದಾರನಾಥ ಹಿಂದುಗಳಿಗೆ ಪವಿತ್ರವಾದ ದೇವಾಲಯ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಉತ್ತರಾಖಂಡ ರಾಜ್ಯದ ಚಮೋಲಿ (ಉತ್ತರಕಾಶಿ) ಜಿಲ್ಲೆಯಲ್ಲಿ ಮಂದಾಕಿನಿ ನದಿಯ ದಂಡೆಯ ಮೇಲಿರುವ ಶಿವನ ದೇವಾಲಯ.
Pic credit - Times Travel
ಬದರೀನಾಥ್ ಉತ್ತರಾಖಂಡ ರಾಜ್ಯದ ಛಾಮೊಲಿ ಜಿಲ್ಲೆಯಲ್ಲಿದೆ. ಭಾರತದ ನಾಲ್ಕು ಛಾರ್ ಧಾಮ ತೀರ್ಥಯಾತ್ರೆಯಲ್ಲಿ ಅತಿ ಹೆಚ್ಚಿನ ಪ್ರಾಮುಖ್ಯವುಳ್ಳ ಕ್ಷೇತ್ರವಾಗಿದೆ.
Pic credit - Times Travel
ತಿರುಪತಿ ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳಲ್ಲೊಂದು. ಈ ಕ್ಷೇತ್ರವನ್ನು ಭೂವೈಕುಂಠ ಎಂದು ಕರೆಯಲಾಗುತ್ತದೆ. ತಿರುಪತಿಯು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿದೆ.
Pic credit - Times Travel
ಶ್ರೀ ಕ್ಷೇತ್ರ ಗೋಕರ್ಣವು ಭಾರತದಲ್ಲಿಯೇ ಅತ್ಯಂತ ಪವಿತ್ರವಾದ ಸ್ಥಳಗಳಲ್ಲಿ ಒಂದಾಗಿದೆ. ಆತ್ಮಲಿಂಗದ ರೂಪದಲ್ಲಿ ಜಗದೊಡೆಯನಾದ ಪರಶಿವನು ಗೋಕರ್ಣದಲ್ಲಿ ನೆಲಸಿದ್ದಾನೆ.
Pic credit - Times Travel