ಕರ್ನಾಟಕದಲ್ಲಿದೆ ತೇಲುವ ಚರ್ಚ್, ಅದರ ವಿಶೇಷತೆಗಳೇನು?

15-11-2023

ಬೇಲೂರು, ಹಳೇಬೀಡು, ಶ್ರವಣಬೆಳಗೊಳದಂತಹ ಇತಿಹಾಸ ಪ್ರಸಿದ್ಧ ದೇವಾಲಯಗಳಿರುವ ಹಾಸನದಲ್ಲಿ ಅಪರೂಪದ ತೇಲುವ ಚರ್ಚ್ ಕೂಡ ಇದೆ. ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು. 

ತೇಲುವ ಚರ್ಚ್

ಹಾಸನ ಜಿಲ್ಲೆಯ ಶೆಟ್ಟಿಹಳ್ಳಿಯಲ್ಲಿ ರೋಸರಿ ಚರ್ಚ್ ಎಂದು ಕರೆಯಲ್ಪಡುವ ತೇಲುವ ಚರ್ಚನ್ನು ಅನೇಕ ಸಿನಿಮಾಗಳಲ್ಲೂ ತೋರಿಸಿದ್ದಾರೆ. ಮಳೆ ಬಂದು ಹೋಯ್ತೆಂದರೆ ಇಲ್ಲಿನ ಬರುವ ಪ್ರವಾಸಿಗರು ದ್ವಿಗುಣ.

ಪ್ರವಾಸಿಗರ ಫೇವರೆಟ್

ಮೇಲ್ಛಾವಣಿಯಿಲ್ಲದ ಚರ್ಚ್

ಈ ಚರ್ಚ್​ನಲ್ಲಿ ಯಾವುದೇ ಗಂಟೆಗಳು ಬಾರಿಸುವುದಿಲ್ಲ. ಮೇಲ್ಛಾವಣಿಯಿಲ್ಲದ ಈ ಚರ್ಚ್‌ ಒಳಗೆ ಸೂರ್ಯನ ಬೆಳಕು ಹಾದು ಹೋಗುತ್ತೆ. ಮಳೆಗಾಲದಲ್ಲಿ ಚರ್ಚ್​ನ ಗೋಡೆಗಳ ಮೇಲೆ ಪಾಚಿ ಮನೆ ಕಟ್ಟಿರುತ್ತೆ.

ಹಾಸನ ಜಿಲ್ಲೆಯ ಜೀವನದಿ ಹೇಮಾವತಿ ಅಣೆಕಟ್ಟೆ ಭರ್ತಿಯಾದ್ರೆ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿರುವ ಹಳೆಯ ಕಾಲದ ಈ ಚರ್ಚ್ ಮುಳುಗಿ ತೇಲುವಂತೆ ಕಾಣುತ್ತದೆ. ಇದನ್ನು ನೋಡುವುದೆ ಬಂದು ರೀತಿಯ ವಿಸ್ಮಯ.

ತೇಲುವ ಚರ್ಚ್

ಗೋಥಿಕ್ ವಾಸ್ತುಶಿಲ್ಪದ ಶ್ರೇಷ್ಠ ಉದಾಹರಣೆ ಇದಾಗಿದೆ. ಇದನ್ನು 1860ರಲ್ಲಿ ಅಬ್ಬೆ ಜೆ ಎ ಡುಬೊಯಿಸ್ ಎಂಬ ಫ್ರೆಂಚ್ ಮಿಷನರಿ ನಿರ್ಮಿಸಿದರು ಎನ್ನಲಾಗುತ್ತೆ.

1860ರಷ್ಟು ಹಳೆಯ ಚರ್ಚ್

'ಫ್ಲೋಟಿಂಗ್ ಚರ್ಚ್' ಮತ್ತು 'ಸಬ್ಮರ್ಡ್ ಚರ್ಚ್' ಎಂಬ ಹೆಸರುಗಳಿಂದಲೂ ಈ ಚರ್ಚನ್ನು ಕರೆಯುತ್ತಾರೆ. ಗೊರೂರು ಅಣೆಕಟ್ಟಿಗೆ ಭೇಟಿ ನೀಡುವ ಪ್ರವಾಸಿಗರು ಅದರ ಗೇಟ್‌ಗಳ ಮೂಲಕ ನೀರಿನ ಪ್ರವಾಹವನ್ನು ವೀಕ್ಷಿಸಲು ದೋಣಿಗಳನ್ನು ಬಾಡಿಗೆಗೆ ಪಡೆಯುತ್ತಾರೆ.  

ಪ್ರವಾಸಿಗರ ದಂಡು

ಜುಲೈ ಅಕ್ಟೋಬರ್ ತಿಂಗಳಿನಲ್ಲಿ ಭಾಗಶಃ ನೀರಿನಲ್ಲಿ ಚರ್ಚ್‌ ಮುಳುಗಿರುತ್ತದೆ. ಡಿಸೆಂಬರ್ ಮೇ ತಿಂಗಳಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಚರ್ಚ್ ಮೈದಾನವು ಕಾಣ ಸಿಗುತ್ತದೆ. 

ಜೂನ್, ಜುಲೈ ಬೆಸ್ಟ್

ಬೆಂಗಳೂರಿನಿಂದ 200 ಕಿಮೀ ದೂರದಲ್ಲಿರುವ ಈ ಚರ್ಚ್​ ಎಷ್ಟೇ ಮುಳುಗಿದರೂ ಗಟ್ಟಿಯಾಗಿ ನಿಂತಿದೆ. ಶೆಟ್ಟಿಹಳ್ಳಿಯಿಂದ ಸರಿಸುಮಾರು 20 ಕಿಮೀ ದೂರದಲ್ಲಿರುವ ಹಾಸನಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಪ್ರತಿದಿನವೂ ರೈಲುಗಳ ಸೇವೆ ಇದೆ.

ರೈಲು ಸೇವೆ

ಡೇಟಿಂಗ್ ವಿಚಾರದಲ್ಲಿ ಸ್ಪಷ್ಟನೆ ಕೊಡ್ತಾರಾ ಮೃಣಾಲ್ ಠಾಕೂರ್?