07-12-2023

ಆಹಾರದಿಂದ ಲಾಂಗ್ ಟ್ರಿಪ್ ಮೋಜು ಮಸ್ತಿ ಹಾಳಾಗಬಾರದೆಂದರೆ, ಈ ವಿಷಯಗಳು ನೆಪನಪಿನಲ್ಲಿರಲಿ

Malashree Anchan

ದೂರದೂರಿಗೆ ಪ್ರವಾಸ ಹೋದಾಗ  ನಾವು ಮಾಡುವಂತಹ ಆಹಾರಕ್ಕೆ ಸಂಬಂಧಿಸಿದ ಕೆಲವು ತಪ್ಪುಗಳು ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡಬಹುದು.

ಜಾಗರೂಕತೆಯಿಂದ ತಿನ್ನಿರಿ

ರುಚಿಕರವಾದ ತಿನಿಸುಗಳು ಇದೆ ಎಂದು ಅತಿಯಾಗಿ ತಿನ್ನಲು ಹೋದರೆ, ಇದು ನಿಮ್ಮ ಆರೋಗ್ಯವನ್ನು ಹದಗೆಡಿಸುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಜಾಗರೂಕತೆಯಿಂದ ತಿನ್ನಿರಿ.

ರೆಡಿಮೇಡ್ ಫುಡ್ ತಿನ್ನಬೇಡಿ

ಪ್ರವಾಸ ಹೋದಾಗ ಚಿಪ್ಸ್ ಇತ್ಯಾದಿ ಪ್ಯಾಕೆಜ್ಡ್ ತಿನಿಸುಗಳನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಇಂತಹ ಆಹಾರಗಳು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡಬಹುದು.

ನೀರು ಕುಡಿಯಲು ಮರೆಯದಿರಿ

ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ ಹೆಚ್ಚಿನವರು ಪ್ರವಾಸದ ಸಮಯಲ್ಲಿ ನೀರು ಕುಡಿಯುವುದನ್ನು ತಪ್ಪಿಸುತ್ತಾರೆ. ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು.

ಚಹಾ ಮತ್ತು ಕಾಫಿ ಕಡಿಮೆ ಸೇವಿಸಿ

ಪ್ರವಾಸದ ವೇಳೆ ಸಕ್ರಿಯವಾಗಿರಬೇಕೆಂದು ಕಾಫಿ, ಟೀ ಸೇವನೆ ಮಾಡುತ್ತಾರೆ. ಕೆಫೀನ್​​​​ನ ಅತಿಯಾದ ಸೇವನೆಯು ಹೊಟ್ಟೆಯುಬ್ಬರ ಸಮಸ್ಯೆಗಳನ್ನು ಉಂಟುಮಾಡಬಹುದು.

ಹಣ್ಣುಗಳನ್ನು ಸೇವನೆ ಮಾಡಿ

ಅನಾರೋಗ್ಯಕರ ಆಹಾರಗಳನ್ನು ಸೇವನೆ ಮಾಡುವ ಬದಲು ಹಣ್ಣುಗಳನ್ನು ಸೇವನೆ ಮಾಡಿರಿ. ಇದರಿಂದ ನಿಮ್ಮ ಆರೋಗ್ಯವೂ ಉತ್ತಮ ರೀತಿಯಲ್ಲಿರುತ್ತದೆ.