ಒಣಗಿರುವ ಕರಿಬೇವಿನ ಎಲೆಗಳನ್ನು ಬಿಸಾಡುವ ಬದಲು ಹೀಗೆ ಬಳಸಿ ನೋಡಿ

1 November 2024

Pic credit - Pinterest

Sainanda

ಅಡುಗೆಯ ರುಚಿ ಹೆಚ್ಚಿಸುವುದೇ ಈ ಕರಿಬೇವು. ಈ ಎಲೆಯಿಲ್ಲದೇ ಒಗ್ಗರಣೆ ಹಾಕಿದರೆ ರುಚಿಯೇ ಇರುವುದಿಲ್ಲ

Pic credit - Pinterest

ಕರಿಬೇವು ಕೇವಲ ಸುವಾಸನೆಗೆ ಮಾತ್ರವಲ್ಲ, ಫೈಬರ್, ಕಾರ್ಬೋಹೈಡ್ರೇಟ್​​ಗಳು, ಎ, ಬಿ ನಂತಹ ವಿಟಮಿನ್​ಗಳಿಂದ ಸಮೃದ್ಧವಾಗಿದ್ದು ಆರೋಗ್ಯಕ್ಕೂ ಒಳ್ಳೆಯದು.

Pic credit - Pinterest

ಮಾರುಕಟ್ಟೆಯಿಂದ ತಂದ ಕರಿಬೇವು ಸೊಪ್ಪು ಒಂದೆರಡು ದಿನಗಳಲ್ಲಿ ಒಣಗಿ  ಹಾಳಾಗಿ ಬಿಡುತ್ತದೆ.

Pic credit - Pinterest

ಕರಿಬೇವು ಸೊಪ್ಪು ಹೀಗೆ ಶೇಖರಿಸಿಟ್ಟರೆ ಬಹುದಿನಗಳವರೆಗೆ ತಾಜಾವಾಗಿರುತ್ತದೆ.

Pic credit - Pinterest

ಕರಿಬೇವಿನ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಎರಡರಿಂದ ಮೂರು ದಿನಗಳ ಕಾಲ ಸೂರ್ಯನ ಬೆಳಕಿನಲ್ಲಿ ಒಣಗಿಸಿ.

Pic credit - Pinterest

ಈ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿಮಾಡಿಕೊಳ್ಳಿ. ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.

Pic credit - Pinterest

ಈ ಪುಡಿಯನ್ನು ವಿವಿಧ ಭಕ್ಷ್ಯಗಳ ತಯಾರಿಕೆಯಲ್ಲಿ ಬಳಸಬಹುದು. ಹೀಗೆ ಮಾಡಿಟ್ಟರೆ ಕನಿಷ್ಠ 6 ತಿಂಗಳವರೆಗೆ ಹಾಳಾಗುವುದಿಲ್ಲ.

Pic credit - Pinterest