ಮೊಸರು ಹುಳಿಯಾಗದಂತೆ ತಡೆಯಲು ಈ ಕೆಲಸ ಮೊದ್ಲು ಮಾಡಿ  

23 October 2024

Pic credit - Pinterest

Sainanda

ಮೊಸರು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹೆಚ್ಚಿನವರು ಈ ಮೊಸರಿಗೆ ಸಕ್ಕರೆ ಹಾಕಿ ತಿನ್ನಲು ಇಷ್ಟ ಪಡುತ್ತಾರೆ.

Pic credit - Pinterest

ಕೆಲವರಿಗೆ ಮೊಸರಿಲ್ಲದೆ ಊಟ ಸೇರುವುದೇ ಇಲ್ಲ, ಹೀಗಾಗಿ ಮಧ್ಯಾಹ್ನ ಒಂದೊತ್ತು ಆದರೂ ಮೊಸರು ಸವಿದರೇನೇ ಮನಸ್ಸಿಗೆ ನೆಮ್ಮದಿ.

Pic credit - Pinterest

ಮೊಸರಿನಲ್ಲಿರುವ ಬ್ಯಾಕ್ಟೀರಿಯಾವು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಪ್ರಯೋಜನಕಾರಿಯಾಗಿದೆ.

Pic credit - Pinterest

ಕೆಲವೊಮ್ಮೆ ಎಷ್ಟೇ ಜಾಗ್ರತೆ ವಹಿಸಿದರೂ ಫ್ರಿಡ್ಜ್ ನಲ್ಲಿಟ್ಟ ಮೊಸರು ಒಂದೆರಡು ದಿನಗಳಲ್ಲಿಯೇ ಕೆಡುತ್ತದೆ, ಇಲ್ಲದಿದ್ದರೆ ಬೇಗನೇ ಹುಳಿಯಾಗುತ್ತದೆ.

Pic credit - Pinterest

ಮನೆಯಲ್ಲೇ ಮೊಸರನ್ನು ತಯಾರಿಸುತ್ತೀರಿ ಎಂದಾದರೆ ಹಾಲಿಗೆ ಒಂದು ಚಮಚ ಸಕ್ಕರೆ ಸೇರಿಸಿ, ಇದು ಹುಳಿಯಾಗುವುದನ್ನು ತಡೆಯುತ್ತದೆ.

Pic credit - Pinterest

ನೇರ ಸೂರ್ಯನ ಬೆಳಕು ಅಥವಾ ತೀವ್ರವಾದ ಶಾಖಕ್ಕೆ ಒಡ್ಡಿಕೊಳ್ಳುವ ಪ್ರದೇಶಗಳಲ್ಲಿ ಮೊಸರನ್ನು ಇಡುವುದನ್ನು ಆದಷ್ಟು ತಪ್ಪಿಸಿ.

Pic credit - Pinterest

ಮೊಸರನ್ನು ಶುದ್ಧವಾದ, ಗಾಳಿಯಾಡದ ಕಂಟೇನರ್‌ಗೆ ವರ್ಗಾಯಿಸಿ. ತಕ್ಷಣ ಅದನ್ನು ರೆಫ್ರಿಜರೇಟರ್‌ನಲ್ಲಿ ಇಡುವುದರಿಂದ ತಾಜಾವಾಗಿರುತ್ತದೆ.

Pic credit - Pinterest