ಭಾರತದ ಏಕೈಕ ಚಿನ್ನದ ಗಣೇಶನ ದೇವಾಲಯವಿದು

4 September 2024

Pic credit - pinterest

Sayinanda

ಭಾರತದಲ್ಲಿ ವಿವಿಧ ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ದೇವಸ್ಥಾನಗಳಿದ್ದು ಅದರಲ್ಲಿ ಒಂದು  ಪುದುಚೆರಿಯ ಮನುಕುಲ ವಿನಾಯಕ ದೇವಾಲಯ.

Pic credit - pinterest

ಭಾರತದಲ್ಲಿರುವ ಚಿನ್ನದ ಏಕೈಕ ಗಣೇಶ ದೇವಾಲಯ ಇದಾಗಿದ್ದು, ಚಿನ್ನದ ಬಣ್ಣದಲ್ಲಿರುವುದು ವಿಶೇಷ.

Pic credit - pinterest

ಪೂರ್ವಕ್ಕೆ ಬಂಗಾಳ ಕೊಲ್ಲಿಯ ಕಡೆಗೆ ಗಣೇಶನು ಮುಖ ಮಾಡಿದ್ದು, ಗಣೇಶನ ಜೊತೆಗೆ ಇಲ್ಲಿ ಬುದ್ಧಿ ಮತ್ತು ಸಿದ್ಧಿಯನ್ನು ಕಾಣಬಹುದು.

Pic credit - pinterest

ದೇವಾಲಯದ ಒಳಗಡೆ ದಕ್ಷಿಣ ಭಾಗದಲ್ಲಿ ಪ್ರಗರಾಮ್ ಗೋಡೆಯಲ್ಲಿ ಮೂರು ಸಾಲುಗಳಲ್ಲಿ ದೇವರ ಶಿಲ್ಪಗಳು ಮತ್ತು ಕಲ್ಲಿನ ಕೆತ್ತನೆಗಳನ್ನು ಕಾಣಬಹುದು.

Pic credit - pinterest

ಮೊದಲ ಸಾಲಿನಲ್ಲಿ 33 ವಿವಿಧ ವಿನಾಯಗರ್ ವಿಗ್ರಹಗಳು ಮತ್ತು ಎರಡನೇ ಸಾಲಿನಲ್ಲಿ 25 ವಿಧದ ವಿನಾಯಗರ್ ವಿಗ್ರಹಗಳಿವೆ.

Pic credit - pinterest

ಮೂರನೆಯ ಸಾಲಿನ ಕಲ್ಲಿನ ಕವಚಗಳಲ್ಲಿ ನಯಾಗರ್ ನನ್ಮಾನಮಲೈ,  ಶ್ರೀ ವಿನಾಯಕ ಆಸ್ಟೋತ್ತರ ಸೇರಿದಂತೆ ವಿವಿಧ ವಿಶೇಷತೆಗಳನ್ನು ಕಾಣಬಹುದು

Pic credit - pinterest

ಹತ್ತು ಅಡಿ ಎತ್ತರ ಹಾಗೂ ಆರು ಅಡಿ ಅಗಲವಿರುವ ರಥವನ್ನು ಏಳುವರೆ ಕೆ.ಜಿ.ಗಳಷ್ಟು ಚಿನ್ನವನ್ನು ಬಳಸಿ ಮಾಡಲಾಗಿದ್ದು ಇಲ್ಲಿನ ಆಕರ್ಷಣೆಯಾಗಿದೆ.

Pic credit - pinterest