ನಮಗೆ ನಾವೇ ಕಚಗುಳಿಯಿಟ್ಟಾಗ ನಗು ಬರಲ್ಲ ಯಾಕೆ? ಇದೇ ಕಾರಣವಂತೆ
1 November 2024
Pic credit - Pinterest
Sainanda
ಬೇರೆಯವರು ನಮಗೇನಾದ್ರೂ ಕಚಗುಳಿಯಿಟ್ಟರೆ ಜೋರಾಗಿ ನಗುತ್ತೇವೆ. ಆದರೆ ನಮಗೆ ನಾವೇ ಕಚಗುಳಿಯಿಟ್ಟಾಗ ನಗು ಬರುವುದೇ ಇಲ್ಲ.
Pic credit - Pinterest
ಕೆಲವರಂತೂ ಕೈ ಚಾಚಿದ ಕೂಡಲೇ ನಗಲು ಪ್ರಾರಂಭಿಸುತ್ತಾರೆ. ಇದು ತಮ್ಮನ್ನು ತಾವು ಸುರಕ್ಷಿತವಾಗಿರಿಸಿಕೊಳ್ಳುವ ನೈಸರ್ಗಿಕ ಪ್ರಕ್ರಿಯೆಯಾಗಿದೆ.
Pic credit - Pinterest
ಕಚಗುಳಿಯಿಟ್ಟಾಗ ದೇಹವು ಒಂದು ರೀತಿಯ ಪ್ಯಾನಿಕ್ ಮೋಡ್‌ಗೆ ಹೋಗುತ್ತದೆ. ಪ್ಯಾನಿಕ್ ನಮಗೆ ಅನಾನುಕೂಲತೆಯನ್ನು ಉಂಟುಮಾಡುವ ಕಾರಣ ನಗಲು ಪ್ರಾರಂಭಿಸುತ್ತೇವೆ.
Pic credit - Pinterest
ಮನಸ್ಸು ಸಿದ್ದವಾಗಿದ್ದರೆ ಮಾತ್ರ ಕಚಗುಳಿ ಹಾಕಿದಾಗ ತಡೆಯಲಾರದಂತಹ ನಗು ಬರುತ್ತದಂತೆ.
Pic credit - Pinterest
ಆದರೆ, ನಮಗೆ ನಾವೇ ಕಚಗುಳಿ ಇಟ್ಟಾಗಲೆಲ್ಲ ಮೆದುಳಿನ ಸೆರೆಬೆಲ್ಲಮ್ ಭಾಗವು ಕಚಗುಳಿಯಿಂದ ಉಂಟಾಗುವ ನಗುವಿನ ಪ್ರತಿಕ್ರಿಯೆಯನ್ನು ನಿಲ್ಲಿಸುತ್ತದೆ.
Pic credit - Pinterest
ಮೆದುಳಿನ ಸೆರೆಬೆಲ್ಲಮ್ ಭಾಗವು ನಮ್ಮ ಹಾಗೂ ಇತರರ ಸ್ಪರ್ಶದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.
Pic credit - Pinterest
ಈ ವೇಳೆಯಲ್ಲಿ ಮೆದುಳು ಇದು ನಮ್ಮ ಕೈ ಎಂದು ಗುರುತಿಸಿ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸುತ್ತದೆ. ಹೀಗಾಗಿಯೇ ನಗು ಬರುವುದಿಲ್ಲ.
Pic credit - Pinterest
Next: ಇಶಾ ಅಂಬಾನಿಯ ಬ್ಯೂಟಿ ಸೀಕ್ರೆಟ್ ಇದೆ ನೋಡಿ