ಕರ್ನಾಟಕದ ಪ್ರಸಿದ್ಧ ಆಹಾರ ಪದಾರ್ಥಗಳು

ನವೆಂಬರ್ 17, 2023

Pic credit - Times Travel

ಭೋಜನ ಪ್ರಿಯರಿಗೆ ಕರ್ನಾಟಕ ಸೂಕ್ತವಾದ ರಾಜ್ಯ. ಇಲ್ಲಿನ ಪಾಕ ಪದ್ದತಿ ದಕ್ಷಿಣ ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಮತ್ತು ಇಲ್ಲಿ ಸಿಗುವ ಸಿಹಿ ತಿಂಡಿಗಳು ಹೆಚ್ಚು ಜನರನ್ನು ಸೆಳೆಯುತ್ತವೆ.

ಕರ್ನಾಟಕದ ಪಾಕ ಪದ್ದತಿ

Pic credit - Times Travel

ಈ ಹೆಸರು ಹೇಳಿದಾಕ್ಷಣ ನೆನಪಾಗೋದು ಬೆಳಗಾವಿ ಜಿಲ್ಲೆಯ ಗೋಕಾಕ್. ಗೋಕಾಕ್​ ಕರೆದಂಟು ಜಗತ್ಪ್ರಸಿದ್ಧಿ. ಇದರ ರುಚಿ ಅದ್ಭುತವಾಗಿರುತ್ತದೆ. ಕರದಂಟನ್ನು ಬೆಲ್ಲ, ಕೊಬ್ಬರಿ ಮತ್ತು ಡ್ರೈ ಫ್ರೂಟ್ಸ್​ಗಳಿಂದ ತಯಾರಿಸಲಾಗುತ್ತದೆ.

ಕರದಂಟು

Pic credit - Times Travel

ದಕ್ಷಿಣ ಕರ್ನಾಟಕದಲ್ಲಿ ಒಬ್ಬಟ್ಟು ಅಂತ ಕರೆದರೇ ಉತ್ತರ ಕರ್ನಾಟಕದಲ್ಲಿ ಹೋಳಿಗೆ ಎಂದು ಕರೆಯುತ್ತಾರೆ. ಮೈದ ಹಿಟ್ಟು, ತೊಗರಿ ಬೇಳೆ ಅಥವಾ ಕೊಬ್ಬರಿ ಮತ್ತು ಬೆಲ್ಲದಿಂದ ತಯಾರಿಸಲಾಗುತ್ತದೆ. 

ಒಬ್ಬಟ್ಟು (ಹೋಳಿಗೆ

Pic credit - Times Travel

ರಾಗಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ರಾಗಿ ಮುದ್ದೆ ಹಾಸನ, ಮಂಡ್ಯ ಮತ್ತು ಹಳೇ ಮೈಸೂರು ಜಿಲ್ಲೆಗಳಲ್ಲಿ ಸಾಕಷ್ಟು ಪ್ರಸಿದ್ಧಿ. ಮುದ್ದೆಯೊಂದಿಗೆ ಸೊಪ್ಪು ಅಥವಾ ಚಿಕನ್​​ ಸಾರಿನೊಂದಿಗೆ ತಿನ್ನಬೇಕು. 

ರಾಗಿ ಮುದ್ದೆ

Pic credit - Times Travel

ಇದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಪದಾರ್ಥ ಬಹಳ ತೆಳುವಾಗಿರುತ್ತದೆ. ಇದು ಕರಾವಳಿಯ ವಿಶೇಷತೆ. 

ನೀರ್​ ದೋಸೆ

Pic credit - Times Travel

ರೊಟ್ಟಿಯಲ್ಲಿ ಹಲುವು ವಿಧ. ಇದರಲ್ಲಿ ಮುಖ್ಯವಾದದು ಜೋಳದ ರೊಟ್ಟಿ. ಜೋಳದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಉತ್ತರ ಕರ್ನಾಟಕ ಜೋಳದ ರೊಟ್ಟಿಗೆ ಹೆಸರುವಾಸಿ. ವಿಜಯಪುರ ಜೋಳ ಜನಪ್ರಿಯ.

ಜೋಳದ ರೊಟ್ಟಿ 

Pic credit - Times Travel

ಮೈಸೂರು ಪಾಕ್ ಅನ್ನು ಮೈಸೂರಿನಲ್ಲಿ ತಯಾರಿಸಲಾಗುತ್ತದೆ. ಇದೊಂದು ಸಹಿಯಾದ ಪದಾರ್ಥವಾಗಿದೆ. ಬೇಳೆ ಹಿಟ್ಟು, ತುಪ್ಪ, ಸಕ್ಕರೆಯಿಂದ ತಯಾರಿಸಲಾಗುತ್ತದೆ. ಬಾಯಿಯಲ್ಲಿ ಇಟ್ಟರೇ ಕರಗಿ ಹೋಗುತ್ತದೆ.   

ಮೈಸೂರು ಪಾಕ್

Pic credit - Times Travel

ಧಾರವಾಡ ಪೇಡವನ್ನು ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರಸಿದ್ಧವಾದ ಸಿಹಿ ತಿಂಡಿಯಾಗಿದೆ. ಧಾರವಾಡದಲ್ಲಿ ಉತ್ಪಾದನೆಯಾಗುತ್ತೆದೆ. ಈ ಪೇಡವು ದೇಶಾದ್ಯಂತ ಪ್ರಸಿದ್ಧವಾಗಿದೆ.

ಧಾರವಾಡ ಪೇಡ​

Pic credit - Times Travel

Pic credit - Times Travel

ನಟಿ ನಯನತಾರಾಗೆ ಈಗ ಎಷ್ಟು ವರ್ಷ