ದಕ್ಷಿಣ ಭಾರತದ ಮಸಾಲೆ ಅಕ್ಕಿ ರೊಟ್ಟಿ, ಇಲ್ಲಿದೆ ರೆಸಿಪಿ

17 January 2025

Pic credit - Pintrest

Sainanda

ಅಕ್ಕಿ ರೊಟ್ಟಿ ಎಂದರೆ ಎಲ್ಲರಿಗೂ ಇಷ್ಟನೇ. ಈ ಮಸಾಲೆ ಅಕ್ಕಿರೊಟ್ಟಿಯ ರುಚಿ ಒಮ್ಮೆ ನಾಲಿಗೆ ಹತ್ತಿಸಿಕೊಂಡರೆ ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ.

Pic credit - Pintrest

ಸದಾ ಅಕ್ಕಿ ರೊಟ್ಟಿ ಬದಲಿಗೆ ಈ ಮಸಾಲೆ ಅಕ್ಕಿ ರೊಟ್ಟಿ ಮಾಡಿದರೆ ಚಟ್ನಿ ಬೇಕಿಲ್ಲ, ಆರೋಗ್ಯಕ್ಕೂ ಅಷ್ಟೇ ಒಳ್ಳೆಯದು.

Pic credit - Pintrest

ದೊಡ್ಡ ಬಟ್ಟಲಿನಲ್ಲಿ ಎರಡು ಕಪ್ ಅಕ್ಕಿ ರೊಟ್ಟಿ ತೆಗೆದುಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಸಬ್ಬಸಿಗೆ ಎಲೆಗಳು, ತುರಿದ ಕ್ಯಾರೆಟ್, ಈರುಳ್ಳಿ, ಕೊತ್ತಂಬರಿ, ಕರಿಬೇವಿನ ಎಲೆಗಳು ಸೇರಿಸಿಕೊಳ್ಳಿ.

Pic credit - Pintrest

ಅದಲ್ಲದೇ ಹಸಿರು ಮೆಣಸಿನಕಾಯಿಗಳು, ಶುಂಠಿ, ತುರಿದ  ತೆಂಗಿನಕಾಯಿ ಮತ್ತು ಜೀರಿಗೆ ಸೇರಿಸಿ ಅಗತ್ಯವಿರುವಷ್ಟು ಹೆಚ್ಚು ನೀರು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.

Pic credit - Pintrest

ಒಂದು ನಿಮಿಷಗಳ ಕಾಲ ಹಾಗೆ ಇಟ್ಟು, ಒಂದು ಪ್ಯಾನ್​ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಚ್ಚಿ ಕಾಯಲು ಬಿಡಿ. 

Pic credit - Pintrest

ಈ ರೊಟ್ಟಿಯ ಹಿಟ್ಟನ್ನು ತಟ್ಟಿಕೊಂಡು ಇಟ್ಟುಕೊಳ್ಳಿ. ​ಪ್ಯಾನ್ ಕಾಯುತ್ತಿದ್ದಂತೆ ತಟ್ಟಿ ಇಟ್ಟ ರೊಟ್ಟಿ ಹಾಕಿ.

Pic credit - Pintrest

ಮಧ್ಯಮ ಉರಿಯಲ್ಲಿ ಎರಡು ಕಡೆ ಚೆನ್ನಾಗಿ ಬೇಯಿಸಿದರೆ ರುಚಿಕರವಾದ ಮಸಾಲೆ ಅಕ್ಕಿರೊಟ್ಟಿ ಸವಿಯಲು ಸಿದ್ಧ.

Pic credit - Pintrest

ಈ ಸಮಸ್ಯೆ ಇರುವವರು ಸೋಂಪನ್ನು ತಿನ್ನಲೇಬಾರದು!