ಡುಮಾಸ್ ಬೀಚ್ ದಡದಲ್ಲಿ ಕಪ್ಪು ಮರಳು ಇದೆ. ನದಿಗಳ ಒಳಹರಿವು ಬಹಳ ಅಪಾಯಕಾರಿಯಾಗಿದೆ. ಸಮುದ್ರ ಆಳಕ್ಕೆ ಇಳಿಯದಂತೆ ಸದಾ ಎಚ್ಚರಿಕೆ ಗಂಟೆ ಮೊಳಗುತ್ತಿರುತ್ತದೆ.
ಡುಮಾಸ್ ಬೀಚ್ (ಗುಜರಾತ್)
Pic credit - Times Travel
ಕೋವಲಂ ಜನಪ್ರಿಯ ಪ್ರವಾಸಿ ತಾಣವಾಗಿದ್ದರೂ, ಅದರ ಕಡಲತೀರಗಳು ಬಹಳ ಅಪಾಯಕಾರಿಯಿಂದ ಕೂಡಿವೆ. ವಿಶೇಷವಾಗಿ ಮಳೆಗಾಲದಲ್ಲಿ ಅಲೆಗಳ ಅಬ್ಬರ ಜೋರಾಗಿರುತ್ತದೆ. ಪ್ರವಾಹ ಸನ್ನಿವೇಶವನ್ನು ಸೃಷ್ಟಿಸುತ್ತದೆ.
ಕೋವಲಂ ಬೀಚ್, ಕೇರಳ
Pic credit - Times Travel
ಮರೀನಾ ಬೀಚ್ ವಿಶ್ವದ ಅತಿ ಉದ್ದದ ಕಡಲತೀರಗಳಲ್ಲಿ ಒಂದಾಗಿದೆ. ಅಷ್ಟೇ ಅಪಾಯಕಾರಿಯಾಗಿದೆ. ದೊಡ್ಡ ದೊಡ್ಡ ಅಲೆಗಳು ವೇಗವಾಗಿ ದಡಕ್ಕೆ ಅಪ್ಪಳಿಸುವುದರಿಂದ ಅದೆಷ್ಟೊ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮರೀನಾ ಬೀಚ್, ಚೆನ್ನೈ
Pic credit - Times Travel
ಕೊಲ್ವಾ ಬೀಚ್ ಪ್ರವಾಹಕ್ಕೆ ಹೆಸರುವಾಸಿಯಾಗಿದೆ. ಪ್ರವಾಸಿಗರು ಎಚ್ಚರಿಕೆಯಿಂದ ಇರುವಂತೆ ಎಚ್ಚರಿಕೆ ಸಂದೇಶಗಳನ್ನು ನೀಡಲಾಗುತ್ತಿರುತ್ತದೆ.
ಕೊಲ್ವಾ ಬೀಚ್, ಗೋವಾ
Pic credit - Times Travel
ಈ ಸಮುದ್ರದಲ್ಲಿ ಈಹುವುದು ತುಂಬಾ ಅಪಾಯಕಾರಿ. ಸಮುದ್ರದ ಬಳಿ ತೆರಳುವ ಮುನ್ನ ಪ್ರವಾಸಿಗರು ಅಲ್ಲಿನ ಹವಾಮಾನ ತಿಳಿಯುವುದು ಬಹಳ ಮುಖ್ಯ.
ಎಲಿಯಟ್ಸ್ ಬೀಚ್, ಚೆನ್ನೈ
Pic credit - Times Travel
ಕ್ಯಾಲಂಗುಟ್ ಬೀಚ್ ಗೋವಾದ ಅತ್ಯಂತ ಜನನಿಬಿಡ ಸಮುದ್ರಗಳಲ್ಲಿ ಒಂದಾಗಿದೆ. ಮತ್ತು ಮಳೆಗಾಲದಲ್ಲಿ ಅಲೆಗಳು ಒರಟಾಗಿರುತ್ತವೆ.
ಕಲಾಂಗುಟ್ ಬೀಚ್, ಗೋವಾ
Pic credit - Times Travel
ಇದು ಕಲ್ಲು-ಬಂಡೆಗಳಿಗೆ ಹೆಸರುವಾಸಿ. ಈ ಸಮುದ್ರದ ಅಲೆಗಳು ತುಂಬಾ ಅಪಾಯಕಾರಿಯಾಗಿವೆ. ಅಲೆಗಳ ಏರಿಳಿತವನ್ನು ಊಹಿಸಲು ಸಾಧ್ಯವಿಲ್ಲ.
ವಾಗಟರ್ ಬೀಚ್, ಗೋವಾ
Pic credit - Times Travel
ಅನೇಕ ಕರಾವಳಿ ಪ್ರದೇಶಗಳಂತೆ ದಿಘಾ ಬೀಚ್ನಲ್ಲೂ ಪ್ರವಾಹ ಜಾಸ್ತಿ. ಅಲೆಗಳ ಏರಿಳಿತ ಜಾಸ್ತಿ ಇರುತ್ತದೆ. ಮೀನುಗಾರರು ಮತ್ತು ಈಜುಗಾರರು ಜಾಗರೂಕರಾಗಿರಬೇಕು.
ದಿಘಾ ಬೀಚ್, ಪಶ್ಚಿಮ ಬಂಗಾಳ
Pic credit - Times Travel
ಅನಿಮಲ್ಸಿನಿಮಾದಲ್ಲಿ ನಟಿಸಲು ರಶ್ಮಿಕಾ ಪಡೆದ ಸಂಭಾವನೆ ಎಷ್ಟು?