02-11-2023

ಅಂಬಾನಿಯ  'ಜಿಯೋ ವರ್ಲ್ಡ್ ಪ್ಲಾಜಾ' ಮಾಲ್‌ನಲ್ಲಿದೆ ಐಷಾರಾಮಿ ಬ್ರಾಂಡ್‌ಗಳು

Pic Credit - Instagram

ಐಷಾರಾಮಿ ಮಾಲ್

ಭಾರತದ ಅತ್ಯಂತ ದುಬಾರಿ ಐಷಾರಾಮಿ ಮಾಲ್ ನವೆಂಬರ್​​ 1 ರಂದು ಮುಂಬೈನಲ್ಲಿ ಪ್ರಾರಂಭವಾಗಿದೆ. 

ಜಿಯೋ ವರ್ಲ್ಡ್ ಪ್ಲಾಜಾ

ಅಂಬಾನಿ ಕುಟುಂಬದ 'ಜಿಯೋ ವರ್ಲ್ಡ್ ಪ್ಲಾಜಾ' ದೇಶದ ಮೊದಲ ಅತಿ ದೊಡ್ಡ ಐಷಾರಾಮಿ ಮಾಲ್ ಎಂದು ಹೇಳಲಾಗುತ್ತಿದೆ.

ಐಷಾರಾಮಿ ಮಾಲ್

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ತೆರೆಯಲಾದ ಈ ಮಾಲ್ 7500 ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದೆ.

ವಿದೇಶಿ ಬ್ರಾಂಡ್‌

ಅಂಬಾನಿ ಕುಟುಂಬದ ಈ ಮಾಲ್‌ನಲ್ಲಿ ಅನೇಕ ದುಬಾರಿ ವಿದೇಶಿ ಐಷಾರಾಮಿ ಬ್ರಾಂಡ್‌ಗಳನ್ನು ಮಾರಾಟ ಮಾಡಲಾಗುತ್ತಿದೆ.

ಐಷಾರಾಮಿ ಮಾಲ್

ಲೂಯಿ ವಿಟಾನ್, ವ್ಯಾಲೆಂಟಿನೋ, ಮನೀಶ್ ಮಲ್ಹೋತ್ರಾ,ಅಬು ಜಾನಿ-ಸಂದೀಪ್ ಖೋಸ್ಲಾ,ಸೇರಿದಂತೆ ಪ್ರಪಂಚದಾದ್ಯಂತದ ದುಬಾರಿ ಬ್ರ್ಯಾಂಡ್‌ಗಳಿವೆ.

ರೆಡ್ ಕಾರ್ಪೆಟ್

ಅಕ್ಟೋಬರ್​​ 31ರಂದು ನಡೆದ ಮಾಲ್ ನ ರೆಡ್ ಕಾರ್ಪೆಟ್ ಕಾರ್ಯಕ್ರಮದಲ್ಲಿ ಬಿಟೌನ್ ನ ಹಲವು ಸೆಲೆಬ್ರಿಟಿಗಳೂ ಭಾಗವಹಿಸಿದ್ದರು.

ಲೂಯಿಸ್ ವಿಟಾನ್

ಮಾಧ್ಯಮ ವರದಿಗಳ ಪ್ರಕಾರ, ಫ್ರೆಂಚ್ ಕಂಪನಿ ಲೂಯಿಸ್ ವಿಟಾನ್  ತನ್ನ ಮಳಿಗೆಯನ್ನು ತೆರೆಯಲು ತಿಂಗಳಿಗೆ 40 ಲಕ್ಷ ರೂ ಬಾಡಿಗೆ ನೀಡಲಿದೆ.

'ಜಿಯೋ ವರ್ಲ್ಡ್ ಪ್ಲಾಜಾ' ಲಾಂಚ್ ಈವೆಂಟ್​​ನಲ್ಲಿ ಮಿಂಚಿದ ಸೆಲೆಬ್ರೆಟಿಗಳು