ಬಾಳೆಹಣ್ಣಿನ ಪಂಚಾಮೃತ ತಯಾರಿಸುವ ವಿಧಾನ ಇಲ್ಲಿದೆ

19 October 2023

Pic Credit - Pintrest

ನವರಾತ್ರಿಯ ಒಂಬತ್ತು ದಿನಗಳಲ್ಲಿ ಜಗನ್ಮಾತೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ.

Pic Credit - Pintrest

ನವರಾತ್ರಿಯ 5 ದಿನದಂದು ದೇವಿಯ ಸ್ಕಂದಮಾತೆ ಅವತಾರವನ್ನು ಪೂಜಿಸಲಾಗುತ್ತದೆ.

Pic Credit - Pintrest

ಈ ದಿನ ದೇವಿಗೆ ಬಾಳೆಹಣ್ಣಿನಿಂದ ತಯಾರಿಸಿದ ನೈವೇದ್ಯ ಅರ್ಪಿಸಬೇಕು ಎಂದು ಹೇಳಲಾಗುತ್ತದೆ.

Pic Credit - Pintrest

ಆದ್ದರಿಂದ ನೀವು ಸುಲಭವಾಗಿ ಬಾಳೆಹಣ್ಣಿನ ಪಂಚಾಮೃತ  ತಯಾರಿಸಲು ಈ ವಿಧಾನ ಅನುಸರಿಸಿ.

Pic Credit - Pintrest

ಮೊದಲಿಗೆ ಒಂದು ಪಾತ್ರೆಯಲ್ಲಿ 4 ರಿಂದ 6 ಮಾಗಿದ ಬಾಳೆಹಣ್ಣು ತೆಗೆದುಕೊಂಡು ಸಣ್ಣದಾಗಿ  ಕತ್ತರಿಸಿ.

Pic Credit - Pintrest

ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿದ ಸೇಬು ಹಾಗೂ ಡ್ರೈ ಫ್ರೂಟ್ಸ್​​ಗಳನ್ನು ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ.

Pic Credit - Pintrest

ನಂತರ ಈ ಮಿಶ್ರಣಕ್ಕೆ ಬೆಲ್ಲದ ಪುಡಿ, ಏಲಕ್ಕಿ ಪುಡಿ, ತುಪ್ಪ, ಜೇನುತುಪ್ಪವನ್ನು ಸೇರಿಸಿ, ಮತ್ತೆ ಮಿಶ್ರಣ ಮಾಡಿ.

Pic Credit - Pintrest

ಕೊನೆಯಲ್ಲಿ ಸಣ್ಣ ಸಣ್ಣ ಗಾತ್ರದ ಕಲ್ಲು ಸಕ್ಕರೆಯನ್ನು ಸೇರಿಸಿದರೆ, ಸ್ಕಂದ ಮಾತೆಗೆ ಅರ್ಪಿಸಲು ನೈವೇದ್ಯ ಸಿದ್ಧ.

Pic Credit - Pintrest

ಅಂಜೂರದ ಲಡ್ಡು ತಯಾರಿಸುವ ಸುಲಭ ವಿಧಾನ ಇಲ್ಲಿದೆ