ಉಪ್ಪಿಟ್ಟು ಮಾಡುವಾಗ ಈ ತಪ್ಪುಗಳನ್ನು ಮಾಡ್ಲೇಬೇಡಿ
06 November 2024
Pic credit - Pintrest
Akshatha Vorkady
ದಕ್ಷಿಣ ಭಾರತದ ಪ್ರಸಿದ್ಧ ಖಾದ್ಯಗಳಲ್ಲಿ ಒಂದಾದ ಉಪ್ಪಿಟ್ಟು ಸುಲಭವಾಗಿ ಮಾಡಬಹುದಾದ ಗೃಹಿಣಿಯರ ಇಷ್ಟದ ರೆಸಿಪಿಗಳಲ್ಲಿ ಒಂದು.
Pic credit - Pinterest
ಆದರೆ ಉಪ್ಪಿಟ್ಟು ಮಾಡುವಾಗ ಈ ಕೆಲವು ತಪ್ಪುಗಳನ್ನು ಮಾಡಿದರೆ ಅದರ ರುಚಿಯೇ ಕೆಡುತ್ತದೆ.
Pic credit - Pinterest
ಚಿರೋಟಿ ಅಥವಾ ಬನ್ಸಿ ರವೆಯಲ್ಲಿ ಉಪ್ಪಿಟ್ಟು ಮಾಡಿ. ಈ ಎರಡನ್ನೂ ಸೇರಿಸಿ ಉಪ್ಪಿಟ್ಟು ಮಾಡಿದರೆ ತಿನ್ನಲು ರುಚಿಕರವಾಗಿರುವುದಿಲ್ಲ.
Pic credit - Pinterest
ಉಪ್ಪಿಟ್ಟು ಮಾಡುವಾಗ ನೀರಿನ ಅಳತೆ ಹಾಗೂ ರವೆಯ ಪ್ರಮಾಣ ಸರಿಯಾಗಿರಲಿ. ಒಂದು ಕಪ್ ರವೆಗೆ ಮೂರು ಬಟ್ಟಲು ನೀರು ಸೇರಿಸುವುದನ್ನು ಮರೆಯದಿರಿ.
Pic credit - Pinterest
ರವೆಯನ್ನು ಹೆಚ್ಚು ಹೊತ್ತು ಹುರಿದರೆ ಕಂದು ಬಣ್ಣಕ್ಕೆ ತಿರುಗುತ್ತದೆ. ಹೀಗಾಗಿ ಮಧ್ಯಮ ಉರಿಯಲ್ಲಿ ಐದರಿಂದ ಏಳು ನಿಮಿಷಗಳ ಕಾಲ ಹುರಿಯಿರಿ.
Pic credit - Pinterest
ಈ ತಿನಿಸನ್ನು ತಯಾರಿಸುವಾಗ ಹೆಚ್ಚಿನವರು ಎಣ್ಣೆಯನ್ನು ಬಳಸುತ್ತಾರೆ. ಆದರೆ ತುಪ್ಪವನ್ನು ಬಳಸಿದರೆ ಈ ಖಾದ್ಯದ ರುಚಿ ಹೆಚ್ಚಾಗುತ್ತದೆ.
Pic credit - Pinterest
ಉಪ್ಪಿಟ್ಟು ಮಾಡುವಾಗ ಕ್ಯಾರೆಟ್, ಬೀನ್ಸ್, ಕ್ಯಾಪ್ಸಿಕಮ್ ಸೇರಿದಂತೆ ಅಗತ್ಯಕ್ಕಿಂತ ಹೆಚ್ಚು ತರಕಾರಿಗಳನ್ನು ಬಳಸಬೇಡಿ.
Pic credit - Pinterest
Next: ಕತ್ತರಿಸಿಟ್ಟ ಆಲೂಗಡ್ಡೆ ಕಪ್ಪಾಗುವುದನ್ನು ತಡೆಯುವುದು ಹೇಗೆ?