ಶೇಂಗಾ ಚಿಕ್ಕಿಯಲ್ಲಿದೆ ಈ ಶಕ್ತಿ, ಇಲ್ಲಿದೆ ಸಿಂಪಲ್ ರೆಸಿಪಿ  

25 December 2024

Pic credit - Pintrest

Sainanda

ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟ ಪಟ್ಟು ತಿನ್ನುವ ಸಿಹಿತಿಂಡಿಗಳಲ್ಲಿ ಶೇಂಗಾ ಚಿಕ್ಕಿ ಕೂಡ ಒಂದು. ಇದರ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ.

Pic credit - Pintrest

ಕಬ್ಬಿಣಾಂಶ, ಸತು, ಉತ್ಕರ್ಷಣ ನಿರೋಧಕಗಳಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಚಿಕ್ಕಿ ಮಾಡುವ ಸುಲಭ ವಿಧಾನ ಇಲ್ಲಿದೆ.

Pic credit - Pintrest

ಬೆಲ್ಲದ ಪಾಕ ತಯಾರಿಸುವಾಗ ನೀರು ಬಳಸಬೇಡಿ. ಒಂದು ಬಾಣಲೆಗೆ ಸ್ವಲ್ಪ ತುಪ್ಪವನ್ನು ಹಾಕಿ ಬಿಸಿ ಮಾಡಿ, ಬೆಲ್ಲವನ್ನು ಸೇರಿಸಿ ಪಾಕವಾಗುವವರೆಗೆ ಕೈಯಾಡಿಸಿ.

Pic credit - Pintrest

ಡ್ರೈ ಫ್ರೂಟ್ಸ್ ಅಥವಾ ಶೇಂಗಾವನ್ನು ಚಿಕ್ಕಿಗೆ ಬಳಸಬಹುದು. ಬಾಣಲೆಗೆ ತುಪ್ಪ ಹಾಕಿ ಕಡಿಮೆ ಉರಿಯಲ್ಲಿ ಶೇಂಗಾವನ್ನು ಹುರಿದುಕೊಳ್ಳಿ.

Pic credit - Pintrest

ಆ ಬಳಿಕ ಬೆಲ್ಲದ ಪಾಕಕ್ಕೆ ಸ್ವಲ್ಪ ಅಡಿಗೆ ಸೋಡಾ ಸೇರಿಸುವುದರಿಂದ ಚಿಕ್ಕಿಯೂ ಗರಿಗರಿ ಹಾಗೂ ಮೃದುವಾಗಿಸುತ್ತದೆ. ಪಾಕಕ್ಕೆ ಹುರಿದಿಟ್ಟ ಶೇಂಗಾವನ್ನು ಸೇರಿಸಿಕೊಳ್ಳಿ.

Pic credit - Pintrest

ತದನಂತರದಲ್ಲಿ ಒಂದು ಟ್ರೇಗೆ ತುಪ್ಪ ಸವರಿ ಈ ಮಿಶ್ರಣವನ್ನು ಹರಡಿಕೊಂಡು ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.

Pic credit - Pintrest

ತಣ್ಣಗಾದ ಬಳಿಕ ರುಚಿಕರವಾದ ಶೇಂಗಾ ಚಿಕ್ಕಿ ಸವಿಯಲು ಸಿದ್ಧವಾಗಿರುತ್ತದೆ. ಇದನ್ನು ಗಾಳಿಯಾಡದ ಗಾಜಿನ ಜಾರಿನಲ್ಲಿ ಸಂಗ್ರಹಿಸಿಡಿ.

Pic credit - Pintrest

ಈ ವಿಷಯ ತಿಳಿದಿದ್ದರೆ ದಾಂಪತ್ಯ ಜೀವನ ಸ್ವರ್ಗವಾಗೋದು ಗ್ಯಾರಂಟಿ