13 July 2024
Author: Sushma Chakre
ಅನಂತ್ ಅಂಬಾನಿ ಜೊತೆ ಅವರ ಬಾಲ್ಯದ ಗೆಳತಿ ರಾಧಿಕಾ ಮರ್ಚಂಟ್ ಮದುವೆ ನಡೆದಿದೆ. ಈ ವೇಳೆ ರಾಧಿಕಾ ಮರ್ಚಂಟ್ ಧರಿಸಿರುವ ಉಡುಗೆ, ಆಭರಣಗಳ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.
Pic credit - Instagram
ರಾಧಿಕಾ ಮರ್ಚೆಂಟ್ ತನ್ನ ಮದುವೆ ವೇಳೆ ಸುಂದರವಾದ ಅಬು ಜಾನಿ ಸಂದೀಪ್ ಖೋಸ್ಲಾ ಲೆಹೆಂಗಾವನ್ನು ಧರಿಸಿದ್ದರು. ದಂತದ ಜರ್ದೋಜಿ ಕಟ್-ವರ್ಕ್, ಐದು ಮೀಟರ್ ಹೆಡ್ ವೆಲ್ ಮತ್ತು ಟಿಶ್ಯೂ ದುಪ್ಪಟ್ಟಾದೊಂದಿಗೆ ಈ ಘಾಗ್ರಾವನ್ನು ಡಿಸೈನ್ ಮಾಡಲಾಗಿತ್ತು.
Pic credit - Instagram
ಈ ಡ್ರೆಸ್ಗೆ ರಾಧಿಕಾ ಮರ್ಚಂಟ್ ಧರಿಸಿದ್ದ ನೆಕ್ಲೇಸ್ ಆಕೆಯ ಉಡುಗೆಗೆ ಮ್ಯಾಚ್ ಆಗುತ್ತಿಲ್ಲ. ಇದು ಅಂಬಾನಿಯ ವೈಭೋಗಕ್ಕೆ ಬಹಳ ಸಿಂಪಲ್ ಆಭರಣವಾಯಿತು ಎಂಬೆಲ್ಲ ಚರ್ಚೆಗಳು ಕೇಳಿಬರುತ್ತಿವೆ.
Pic credit - Instagram
ಆದರೆ, ಅಸಲಿ ವಿಷಯವೇನೆಂದರೆ ರಾಧಿಕಾ ಮರ್ಚಂಟ್ ಧರಿಸಿದ್ದ ನೆಕ್ಲೇಸ್ ಅವರ ವಂಶಪಾರಂಪರ್ಯವಾಗಿ ಬಳುವಳಿಯಾಗಿ ಬಂದಿರುವ ಪೂರ್ವಜರ ಆಭರಣವಾಗಿದೆ. ಇದೇ ನೆಕ್ಲೇಸ್ ಅನ್ನು ರಾಧಿಕಾಳ ಅಕ್ಕ ಅಂಜಲಿ ಕೂಡ ತನ್ನ ಮದುವೆಯಲ್ಲಿ ಧರಿಸಿದ್ದರು.
Pic credit - Instagram
ರಾಧಿಕಾ ಮರ್ಚೆಂಟ್ ತನ್ನ ಸಹೋದರಿ ಅಂಜಲಿ ಮರ್ಚೆಂಟ್ ಮದುವೆಯಲ್ಲಿ ಧರಿಸಿದ್ದ ಆಭರಣವನ್ನೇ ತನ್ನ ಮದುವೆಗೆ ಧರಿಸಿದ್ದಾರೆ. ಇದನ್ನು ಹಲವು ತಲೆಮಾರುಗಳಿಂದ ಅವರ ಕುಟುಂಬದಲ್ಲಿ ಮದುಮಗಳು ಧರಿಸಿರುವ ವಂಶಪಾರಂಪರಿಕ ಆಭರಣವಾಗಿದೆ.
Pic credit - Instagram
ರಾಧಿಕಾ ಮರ್ಚೆಂಟ್ ತನ್ನ ಮದುವೆಗೆ ಕೆಂಪು ಮತ್ತು ಬಿಳಿ ವಧುವಿನ ಲೆಹೆಂಗಾವನ್ನು ಅನಂತ್ ಅಂಬಾನಿಯೊಂದಿಗೆ ಮ್ಯಾಚ್ ಮಾಡಿಕೊಂಡಿದ್ದರು. ರಾಧಿಕಾ ಧರಿಸಿದ್ದ ಆಭರಣವನ್ನು ಈ ಹಿಂದೆ ಆಕೆಯ ಅಕ್ಕ ಅಂಜಲಿ ಮರ್ಚೆಂಟ್ 2020ರಲ್ಲಿ ತನ್ನ ಮದುವೆಗೆ ಧರಿಸಿದ್ದರು.
Pic credit - Instagram
ಇದೇ ನೆಕ್ಲೇಸ್ ಅನ್ನು ರಾಧಿಕಾ ಅವರ ತಾಯಿ ಮತ್ತು ಅಜ್ಜಿ ಕೂಡ ತಮ್ಮ ಮದುವೆ ಸಮಾರಂಭದಲ್ಲಿ ಧರಿಸಿದ್ದರು ಎಂಬುದು ವಿಶೇಷ. ತನ್ನ ಮದುವೆಗೆ ರಾಧಿಕಾ ಅವರು ಅಕ್ಕ ಅಂಜಲಿಯ ಪೋಲ್ಕಿ ಕಿವಿಯೋಲೆಗಳು, ಮಾಂಗ್ ಟಿಕಾ ಮತ್ತು ಹಾಥ್ ಫೂಲ್ ಅನ್ನು ಸಹ ಧರಿಸಿದ್ದರು.
Pic credit - Instagram
ಇವಿಷ್ಟು ರಾಧಿಕಾ ಅವರ ಕುಟುಂಬದ ಆಭರಣಗಳಾದರೆ ಇದರ ಜೊತೆಗೆ ರಾಧಿಕಾ ಅದ್ಭುತವಾದ ವಜ್ರ ಮತ್ತು ಪಚ್ಚೆಯ ನೆಕ್ಲೇಸ್, ಕದಾಸ್, ಬಳೆಗಳು ಮತ್ತು ಕಲೀರಸ್ಗಳನ್ನು ಮದುವೆ ವೇಳೆ ಧರಿಸಿದ್ದರು.
Pic credit - Instagram
ರಾಧಿಕಾ ಧರಿಸಿದ್ದ ಘಾಗ್ರಾವನ್ನು ಕೆಂಪು ಬಣ್ಣದ ಮೂರು ಅಂಚುಗಳಿಂದ ಅಲಂಕರಿಸಲಾಗಿದೆ. ಇದರ ಕೆಲಸವು ನಕ್ಷಿ, ಸಾದಿ ಮತ್ತು ಜರ್ದೋಜಿಗಳ ಅತ್ಯುತ್ತಮ ಸಂಯೋಜನೆಯಾಗಿದೆ, ಕಲ್ಲುಗಳು, ಟಿಕ್ಕಿಗಳು ಮತ್ತು ಕೆಂಪು ರೇಷ್ಮೆ ಎಳೆಗಳಿಂದ ಈ ಡ್ರೆಸ್ ಡಿಸೈನ್ ಮಾಡಲಾಗಿದೆ.
Pic credit - Instagram
ಹಳದಿ ಶಾಸ್ತ್ರದ ವೇಳೆ ಮಿಂಚಿದ ರಾಧಿಕಾ ಮರ್ಚಂಟ್
Pic credit - Instagram
ಹಳದಿ ಶಾಸ್ತ್ರದ ವೇಳೆ ಮಿಂಚಿದ ರಾಧಿಕಾ ಮರ್ಚಂಟ್
Pic credit - Instagram
ಶುಕ್ರವಾರ ರಾತ್ರಿ ವಿವಾಹ ಸಮಾರಂಭ ನೆರವೇರಿದ್ದು, ಜುಲೈ 13 ರಂದು ಆಯ್ದ ಅತಿಥಿಗಳಿಗೆ ಆತ್ಮೀಯ ಭೋಜನವನ್ನು ಆಯೋಜಿಸಲಾಗಿದೆ. ನಂತರ ಜುಲೈ 14 ಮತ್ತು 15ರಂದು ಅದ್ಧೂರಿ ರಿಸೆಪ್ಷನ್ ಇರಲಿದೆ.
Pic credit - Instagram