relationship 7

ಹೆಂಗಸರಿಗೆ ತಮ್ಮ ಸಂಗಾತಿಯಲ್ಲಿ ಇಷ್ಟವಾಗದ 4 ಸಂಗತಿಗಳಿವು

07 Dec 2023

TV9 Kannada Logo For Webstory First Slide

Author: Sushma Chakre

ಇಬ್ಬರ ನಡುವೆ ಯಾವಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಆ ಸಂಬಂಧವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಕೂಡ ಬಹಳ ಮುಖ್ಯ.

ಇಬ್ಬರ ನಡುವೆ ಯಾವಾಗ ಪ್ರೀತಿ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಆ ಸಂಬಂಧವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಕೂಡ ಬಹಳ ಮುಖ್ಯ.

ಪ್ರೀತಿಯೇ ಸಂಬಂಧದ ಆಧಾರ

ಮನುಷ್ಯರು ಒಂದೇ ರೀತಿ ಇರಲು ಸಾಧ್ಯವಿಲ್ಲ. ಎಲ್ಲರ ಅಭಿಪ್ರಾಯಗಳು, ಅಭಿರುಚಿಗಳು ಭಿನ್ನವಾಗಿರುತ್ತದೆ. ಸಂಗಾತಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಭಿನ್ನಾಭಿಪ್ರಾಯಗಳೇ ಸಂಬಂಧ ಹಾಳಾಗಲು ಕಾರಣವಾಗದಂತೆ ಎಚ್ಚರ ವಹಿಸುವುದು ಅಗತ್ಯ.

ಮನುಷ್ಯರು ಒಂದೇ ರೀತಿ ಇರಲು ಸಾಧ್ಯವಿಲ್ಲ. ಎಲ್ಲರ ಅಭಿಪ್ರಾಯಗಳು, ಅಭಿರುಚಿಗಳು ಭಿನ್ನವಾಗಿರುತ್ತದೆ. ಸಂಗಾತಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ಭಿನ್ನಾಭಿಪ್ರಾಯಗಳೇ ಸಂಬಂಧ ಹಾಳಾಗಲು ಕಾರಣವಾಗದಂತೆ ಎಚ್ಚರ ವಹಿಸುವುದು ಅಗತ್ಯ.

ಭಿನ್ನಾಭಿಪ್ರಾಯಗಳು ಸಹಜ

ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಸಂಗಾತಿಯಲ್ಲಿ ಇಷ್ಟವಾಗದ 4 ಸಂಗತಿಗಳು ಇಲ್ಲಿವೆ. ಪುರುಷರಲ್ಲಿ ಮಹಿಳೆಯರು ಇಷ್ಟಪಡದ ವಿಷಯಗಳು ಯಾವುವು ಎಂಬ ಕುತೂಹಲ ನಿಮಗೂ ಇದೆಯಾ?

ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಸಂಗಾತಿಯಲ್ಲಿ ಇಷ್ಟವಾಗದ 4 ಸಂಗತಿಗಳು ಇಲ್ಲಿವೆ. ಪುರುಷರಲ್ಲಿ ಮಹಿಳೆಯರು ಇಷ್ಟಪಡದ ವಿಷಯಗಳು ಯಾವುವು ಎಂಬ ಕುತೂಹಲ ನಿಮಗೂ ಇದೆಯಾ?

ಮಹಿಳೆಯರಿಗೆ ಇಷ್ಟವಾಗದ ವಿಷಯಗಳಿವು

ತಮ್ಮ ಸಂಗಾತಿ ಯಾವುದರ ಬಗ್ಗೆಯೂ ಸುಳ್ಳು ಹೇಳುವುದನ್ನು ಮಹಿಳೆಯರು ಇಷ್ಟಪಡುವುದಿಲ್ಲ. ನೀವು ತಪ್ಪು ಮಾಡಿದ್ದರೆ, ನೀವು ಸತ್ಯವನ್ನು ಹೇಳಬಹುದು. ಇದರಿಂದ ನಿಮ್ಮ ಸಂಬಂಧವು ಸುಧಾರಿಸುವ ಸಾಧ್ಯತೆಯೂ ಇರುತ್ತದೆ.

ಸುಳ್ಳು ಹೇಳಬೇಡಿ

ಮಹಿಳೆಯರು ಇಷ್ಟಪಡದ ಪುರುಷರ ಮತ್ತೊಂದು ಅಭ್ಯಾಸವೆಂದರೆ ಅತಿಯಾದ ಸಿಗರೇಟ್ ಸೇವನೆ ಮತ್ತು ಮದ್ಯಪಾನ. ನೀವು ಎಂದಾದರೂ ವಿಶೇಷ ಸಂದರ್ಭದಲ್ಲಿ, ಪಾರ್ಟಿಯಲ್ಲಿ ಅಥವಾ ಮನೆಯಲ್ಲಿ ಮೋಜಿಗಾಗಿ ಇದನ್ನೆಲ್ಲ ಮಾಡಿದರೆ ನಿಮ್ಮ ಸಂಗಾತಿಯ ಬಳಿ ಒಪ್ಪಿಗೆ ಪಡೆಯಿರಿ. ಅದು ದೊಡ್ಡ ವಿಷಯವಾಗದಂತೆ ನೋಡಿಕೊಳ್ಳಿ. ಆದರೆ ಪ್ರತಿದಿನ ಹೀಗೆ ಮಾಡಿದರೆ ನಿಮ್ಮ ಸಂಗಾತಿ ನಿಮ್ಮನ್ನು ಬಿಟ್ಟು ಹೋಗಬಹುದು, ಅಥವಾ ನಿಮ್ಮ ಸಂಬಂಧ ಮುರಿದುಬೀಳಬಹುದು.

ಧೂಮಪಾನ, ಮದ್ಯಪಾನ

ಮಹಿಳೆ ತನ್ನ ಸಂಗಾತಿ ಬೇರೊಬ್ಬರೊಂದಿಗೆ ಸಂಬಂಧ ಹೊಂದಿದ್ದರೆ ಅದನ್ನು ಸಂಪೂರ್ಣವಾಗಿ ಸಹಿಸುವುದಿಲ್ಲ. ನೀವು ಈ ರೀತಿ ಮಾಡಿದರೆ ಅದು ನಿಮ್ಮ ಸಂಬಂಧ ಹಾಳಾಗಲು ಕಾರಣವಾಗಬಹುದು.

ಅನೈತಿಕ ಸಂಬಂಧ

ಪ್ರತಿ ಸಂಬಂಧದ ಅಡಿಪಾಯವು ಪ್ರೀತಿ ಮತ್ತು ನಂಬಿಕೆಯ ಮೇಲೆ ಇರುತ್ತದೆ. ಕಾಲಾನಂತರದಲ್ಲಿ ನೀವು ನಿಮ್ಮ ಸಂಗಾತಿಗೆ ಪ್ರಾಮುಖ್ಯತೆ ನೀಡದಿದ್ದರೆ, ಅವರನ್ನು ಪ್ರೀತಿಸದಿದ್ದರೆ, ಅವರನ್ನು ಗೌರವಿಸದಿರುವುದಿದ್ದರೆ ಆ ನಿರ್ಲಕ್ಷ್ಯವನ್ನು ಅವರು ಸಹಿಸುವುದಿಲ್ಲ.

ನಿರ್ಲಕ್ಷ್ಯಿಸಬೇಡಿ