ಇದು ಪ್ರಪಂಚದ ಅತ್ಯಂತ ಚಿಕ್ಕ ದೇಶವಾಗಿದೆ. ಇದು ಕೇವಲ 110 ಎಕರೆ ಭೂ ಪ್ರದೇಶ ಹೊಂದಿದೆ ಕ್ರೈಸ್ತರ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು.
ವ್ಯಾಟಿಕನ್ ಸಿಟಿ
ಫ್ರೆಂಚ್ ರಿವಾಯದಲ್ಲಿರುವ ಐಷಾರಾಮಿ ದೇಶವಾಗಿದೆ. ಇಲ್ಲಿನ ಕಡಲ ತೀರಗಳು ಮನಮೋಹಕವಾಗಿವೆ. ಇಲ್ಲಿನ ಕ್ಯಾಸಿನೊಗಳು ಸಾಕಷ್ಟು ಪ್ರಸಿದ್ಧಿ.
ಮೊನಾಕೊ
ನೌರು ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ವಿಶ್ವದ ಮೂರನೇ ಚಿಕ್ಕ ದೇಶವಾಗಿದೆ. ಮೈಕ್ರೊನೇಷಿಯಾದ ಒಂದು ಸಣ್ಣ ದ್ವೀಪ ರಾಷ್ಟ್ರವಾಗಿದೆ.
ನೌರು
ಪೆಸಿಫಿಕ್ ಮಹಾಸಾಗರದ ತಗ್ಗು ದ್ವೀಪವಾಗಿದೆ. ಸಣ್ಣ-ಪುಟ್ಟ 6 ದ್ವೀಪಗಳು ಸೇರಿ ಟುವಾಲು ಒಂದು ದೇಶವಾಗಿದೆ. 017 ರ ಜನಗಣತಿಯ ಪ್ರಕಾರ 10,645 ಜನಸಂಖ್ಯೆಯನ್ನು ಹೊಂದಿದೆ.
ಟುವಾಲು
ಸ್ಯಾಬ್ ಮರಿನೋವು ಇಟಲಿಯಿಂದ ಸುತ್ತುವರೆದಿದೆ. 4ನೇ ಶತಮಾನದಷ್ಟು ಹಳೆಯದಾದ ದೇಶವಾಗಿದೆ. ಮಧ್ಯಕಾಲಿನ ವಾಸ್ತುಶಿಲ್ಪ ಮತ್ತು ಪರ್ವತ ಸಾಲುಗಳಿಗೆ ಹೆಸರುವಾಸಿ.
ಸ್ಯಾನ್ ಮರಿನೋ
ಸ್ವಿಜರ್ಲ್ಯಾಂಡ್ ಮತ್ತು ಆಸ್ಟ್ರಿಯಾ ದೇಶಗಳ ನಡುವೆ ಇದೆ. ಈ ದೇಶವು ಪರ್ವತ ಸಾಲುಗಳಿಂದ ಕೂಡಿದೆ. ಬ್ಯಾಂಕಿಂಗ್ ಕ್ಷೇತ್ರ ಮತ್ತು ಚಳಿಗಾಲದ ಕ್ರೀಡೆಗಳಿಗೆ ಹೆಸರುವಾಸಿ.
ಲಿಚ್ಟೆನ್ಸ್ಟೈನ್
29 ಸಣ್ಣಪುಟ್ಟ ದ್ವೀಪಗಳು ಸೇರಿ ಒಂದು ಮಾರ್ಷಲ್
ದ್ವೀಪವಾಗಿದೆ. ಈ ದ್ವೀಪವು ಶೇ 97.87 ರಷ್ಟು ನೀರಿನಿಂದ ಆವರಿಸಿದೆ. ಸಮುದ್ರಲ್ಲಿ ಉಂಟಾಗುವ ಏರಿಳಿತದಿಂದ ಈ ದ್ವೀಪಗಳು ಸಾಕಷ್ಟು ಪರಿಣಾಮ ಎದುರಿಸುತ್ತವೆ.
ಮಾರ್ಷಲ್ ದ್ವೀಪಗಳು
ಉಭಯ-ದ್ವೀಪ ರಾಷ್ಟ್ರವು ಅದರ ಪರ್ವತಗಳು, ಕಡಲತೀರಗಳು ಮತ್ತು ಸಕ್ಕರೆ ತೋಟಗಳೊಗೆ ಪ್ರಸಿದ್ಧವಾಗಿದೆ. ದೇಶದ ಆರ್ಥಿಕತೆಯುವ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ.