ಮುಳುಗದ ಟೈಟಾನಿಕ್ ಈ ಶೆಟ್ಟಿ ಹಳ್ಳಿ ಚರ್ಚ್, ಕರ್ನಾಟಕದಲ್ಲಿ ಎಲ್ಲಿದೆ ಗೊತ್ತಾ?

10  JULY 2024

Pic credit - pinterestk

Sayinanda

ಕರ್ನಾಟಕದಲ್ಲಿರುವ ಹಲವಾರು ವಿಸ್ಮಯಕಾರಿ ತಾಣಗಳು ಈಗಾಗಲೇ ಪ್ರವಾಸಿಗರ ಮನಸ್ಸನ್ನು ಗೆದ್ದುಕೊಂಡಿದೆ.

Pic credit - pinterest

ಕರ್ನಾಟಕದ ಹಾಸನದಿಂದ 13 ಕೀ ಮಿ ದೂರದಲ್ಲಿರುವ ಈ ಶೆಟ್ಟಿ ಹಳ್ಳಿ ಚರ್ಚ್ ಕೂಡ ವಿಸ್ಮಯಕಾರಿ ಪ್ರವಾಸಿಗರ ಆಕರ್ಷಣೀಯ ತಾಣಗಳಲ್ಲಿ ಒಂದು.

Pic credit - pinterest

1860 ರಲ್ಲಿ  ಈ ಚರ್ಚನ್ನು ಕಟ್ಟಲಾಗಿದ್ದು, ಇದರ ವಿಶೇಷತೆವೆಂದರೆ ಮಳೆಗಾಲದಲ್ಲಿ ಮುಳುಗಿದ್ದು, ನೀರು ಕಡಿಮೆಯಾದಂತೆ ಪೂರ್ಣ ಪ್ರಮಾಣದಲ್ಲಿ ಕಾಣಿಸುತ್ತದೆ.

Pic credit - pinterest

ಮಳೆಗಾದಲ್ಲಿ ಹೇಮಾವತಿ ಅಣೆಕಟ್ಟು ತುಂಬುವುದರಿಂದ ಹಿನ್ನೀರಿನಲ್ಲಿದ್ದ  ಈ ಚರ್ಚ್ ನೀರಿನಲ್ಲಿ ಮುಳುಗಿ, ಉಳಿದ ಭಾಗವು ಹಡಗು ತೇಲುವಂತೆ ಕಾಣುತ್ತದೆ.

Pic credit - pinterest

ಇಲ್ಲಿ ಸುತ್ತಲೂ ನೀರಿನಿಂದ ಆವರಿಸಿಕೊಂಡಿರುವ ಕಾರಣ ಮುಳುಗದ ಟೈಟಾನಿಕ್ ಎಂದೇ ಇದನ್ನು ಕರೆಯಲಾಗುತ್ತದೆ.

Pic credit - pinterest

ಹಾಸನ ಭಾಗದಲ್ಲಿ ವಾಸವಾಗಿದ್ದ ಕ್ರೈಸ್ತ ಧರ್ಮೀಯರ ಕೇಂದ್ರವಾಗಿದ್ದ ಈ ಚರ್ಚ್, ಇಂದು ಪಳೆಯುಳಿಕೆಯಂತೆಯೇ ತನ್ನ ಕುರುಹನ್ನು ಉಳಿಸಿಕೊಂಡಿದೆ.

Pic credit - pinterest

ಸುಣ್ಣ-ಮರಳಿನ ಗಾರೆ ಮೂಲಕ ಗೋಥಿಕ್ ವಾಸ್ತುಶಿಲ್ಪದ ಮಾದರಿಯಲ್ಲಿ ಈ ಚರ್ಚ್ ಅನ್ನು ನಿರ್ಮಿಸಲಾಗಿದ್ದು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.

Pic credit - pinterest