ಭಾರತದ ಪ್ರಮುಖ ಅದ್ಭುತ ಸೇತುವೆಗಳ ಬಗ್ಗೆ ಮಾಹಿತಿ ಇಲ್ಲಿದೆ

 25 July 2024

Author : Akshatha Vorkady

Pic credit - Twitter 

ಮಹಾರಾಷ್ಟ್ರದಲ್ಲಿರುವ ಬಾಂದ್ರಾ ವರ್ಲಿ ಸೀ ಲಿಂಕ್‌ ಭಾರತದ ಜನಪ್ರಿಯ ಸೇತುವೆಗಳಲ್ಲಿ ಒಂದಾಗಿದೆ.

ಬಾಂದ್ರಾ ವರ್ಲಿ ಸೀ ಲಿಂಕ್‌

Pic credit - Twitter 

ಕೋಲ್ಕತ್ತಾದ ಹೌರಾ ಸೇತುವೆ ಹೂಗ್ಲಿ ನದಿಯ ಮೇಲಿದ್ದು, ಇದು ವಿಶ್ವದ ಅತಿ ಉದ್ದದ ಉಕ್ಕಿನ ಸೇತುವೆಗಳಲ್ಲಿ ಒಂದಾಗಿದೆ. 

ಹೌರಾ ಸೇತುವೆ

Pic credit - Twitter 

ತಮಿಳುನಾಡಿನ ಪಂಬನ್ ಸೇತುವೆ ದೇಶದ ಮೊದಲ ಸಮುದ್ರ ಸೇತುವೆಯಾಗಿದೆ ಮತ್ತು ಭಾರತದ ಉದ್ದದ ಸೇತುವೆಗಳಲ್ಲಿ ಒಂದಾಗಿದೆ.

ಪಂಬನ್ ಸೇತುವೆ

Pic credit - Twitter 

ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಸಮುದ್ರ ಮಟ್ಟದಿಂದ 4500 ಮೀ ಎತ್ತರದಲ್ಲಿರುವ ಚಿಚಾಮ್ ಸೇತುವೆ ವಿಶ್ವದ ಅತಿ ಎತ್ತರದ ತೂಗು ಸೇತುವೆ.

ಚಿಚಾಮ್ ಸೇತುವೆ

Pic credit - Twitter 

ಗೋದಾವರಿ ಸೇತುವೆ ಭಾರತದ ರಾಜಮಂಡ್ರಿಯಲ್ಲಿ ಗೋದಾವರಿ ನದಿಯನ್ನು ವ್ಯಾಪಿಸಿರುವ ಸೇತುವೆಯಾಗಿದೆ . ಇದು ಭಾರತದ ನಾಲ್ಕನೇ ಅತಿ ಉದ್ದದ ಸೇತುವೆ.

ಗೋದಾವರಿ ಸೇತುವೆ 

Pic credit - Twitter 

ಕೇರಳದ ಕೊಚ್ಚಿಯಲ್ಲಿರುವ ವೆಂಬನಾಡ್ ರೈಲು ಸೇತುವೆಯು ಒಟ್ಟು 4,620 ಮೀಟರ್ ಉದ್ದವಿದ್ದು, ಇದು ಎರಡನೇ ಅತಿ ಉದ್ದದ ರೈಲುಮಾರ್ಗವಾಗಿದೆ.

ವೆಂಬನಾಡ್ ರೈಲು ಸೇತುವೆ

Pic credit - Twitter 

ಅಸ್ಸಾಂನಲ್ಲಿರುವ  ಬೋಗಿಬೀಲ್ ಸೇತುವೆ ಏಷ್ಯಾದ ಎರಡನೇ ಅತಿ ಉದ್ದದ ರೈಲು-ರಸ್ತೆ ಸೇತುವೆ ಎಂಬ ಖ್ಯಾತಿಯನ್ನು ಪಡೆದುಕೊಂಡಿದೆ. 

ಬೋಗಿಬೀಲ್ ಸೇತುವೆ

Pic credit - Twitter