30ರ ಯುವಕನಂತೆ ಕಾಣುವ ಸುದೀಪ್ ಅವರ ವಯಸ್ಸು 50 ದಾಟಿದೆ. ಆದರೆ ಈ ನಟ ತನ್ನ ಯಂಗ್ ಸ್ಟೈಲಿಷ್ ಲುಕ್ ನಿಂದಲೇ ಎಲ್ಲರ ಗಮನ ಸೆಳೆಯುತ್ತಾರೆ.
Pic credit - pinterest
ಹೀಗಾಗಿ ಕಿಚ್ಚ ಸುದೀಪ್ ಅವರ ಫಿಟ್ ನೆಸ್ ಸೀಕ್ರೆಟ್ ಬಗ್ಗೆ ಸಹಜವಾಗಿ ಎಲ್ಲರಿಗೂ ಕುತೂಹಲವಿರುತ್ತದೆ. ಆದರೆ ಶಿಸ್ತು, ಆಹಾರ ಹಾಗೂ ಸ್ಥಿರತೆ ಇವರ ಫಿಟ್ನೆಸ್ ಗುಟ್ಟಂತೆ.
Pic credit - pinterest
ದಿನಕ್ಕೆ ನಾಲ್ಕು ಗಂಟೆಗಳ ಕಾಲ ನಿದ್ದೆ ಮಾಡುವ ಇವರು ಪ್ರತಿ ದಿನ 5 ಗಂಟೆಗೆ ಎದ್ದೇಳುತ್ತಾರೆ.
Pic credit - pinterest
ಜಿಮ್‌ಗೆ ಹೋಗಿ ಗಂಟೆ ಗಟ್ಟಲೆ ಟೈಮ್ ಕಳೆಯುವುದಿಲ್ಲವಂತೆ. ಫಿಟ್ ಆಗಿರಲು ದಿನಾಲೂ 2000 ಸ್ಕಿಪ್ಪಿಂಗ್, ಲೆಗ್ ಸ್ಟ್ರೆಚ್, ಸೈಕ್ಲಿಂಗ್ ಮಾಡುತ್ತಾರೆ.
Pic credit - pinterest
ಬೆಳಗ್ಗೆ ಆರು ಗಂಟೆಗೆ ಉಪಹಾರ ಮುಗಿಸುವ ಇವರು ದೋಸೆಯನ್ನು ತಿನ್ನುತ್ತಾರೆ. ಅದಲ್ಲದೇ ಫಿಲ್ಟರ್ ಕಾಫಿಯನ್ನು ಆಗಾಗ ಕುಡಿಯುತ್ತಾರಂತೆ.
Pic credit - pinterest
ರಾಗಿ ಮುದ್ದೆ ಜೊತೆಗೆ ಸಾಂಬರ್ ಜೊತೆಗೆ ತಾಜಾ ಹಣ್ಣಿನ ಜ್ಯೂಸ್ ದಿನನಿತ್ಯ ಇದ್ದೆ ಇರುತ್ತದೆ. ರಾತ್ರಿಯ ಊಟಕ್ಕೆ ರಾಗಿ ರೊಟ್ಟಿ ಅಥವಾ ಚಪಾತಿಯನ್ನು ತರಕಾರಿ ಪಲ್ಯದೊಂದಿಗೆ ಸೇವಿಸುತ್ತಾರಂತೆ.
Pic credit - pinterest
ಎಲ್ಲಾ ಆಹಾರವನ್ನು ಇತಿಮಿತಿಯಲ್ಲಿ ಸೇವಿಸುವ ಕಿಚ್ಚ ಸುದೀಪ್ ಜಂಕ್ ಫುಡ್ ಗಳನ್ನು ಮುಟ್ಟುವುದೇ ಇಲ್ಲವಂತೆ.