ತ್ವಚೆಯ ಅಂದ ಕಾಪಾಡುವ ವೇಳೆ ಈ ತಪ್ಪುಗಳನ್ನು ಮಾಡದಿರಿ

27 January 2025

Pic credit - Pintrest

Sainanda

ಹೆಣ್ಣು ಮಕ್ಕಳಿಗೆ ಸೌಂದರ್ಯದ ಮೇಲೆ ವಿಶೇಷ ಕಾಳಜಿ. ಹೀಗಾಗಿ ತ್ವಚೆಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಗಗಳನ್ನು ಮಾಡುತ್ತಾರೆ.

Pic credit - Pintrest

ಹೆಚ್ಚಿನವರು ತ್ವಚೆಯ ಅಂದ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಿಗುವ ಉತ್ಪನ್ನಗಳನ್ನು ಬಳಸುತ್ತಾರೆ.

Pic credit - Pintrest

ಆದರೆ, ಕಾಲಿನ ಚರ್ಮಕ್ಕಿಂತ ಮುಖದ ತ್ವಚೆ ಸೂಕ್ಷ್ಮವಾದದ್ದು. ಹಾಗಾಗಿ ಕಾಲಿನ ಕೂದಲು ತೆಗೆಯಲು ಬಳಸುವ ಕ್ರೀಮನ್ನು ಮುಖಕ್ಕೆ ಹಚ್ಚಬೇಡಿ.

Pic credit - Pintrest

ರಾಸಾಯನಿಕ ಪದಾರ್ಥ ಬಳಸಿ ತಯಾರಿಸಿದ ಕ್ರೀಮ್ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅವಶ್ಯಕ.

Pic credit - Pintrest

ಟೂತ್ ಪೇಸ್ಟ್ ನಲ್ಲಿರುವ ರಾಸಾಯನಿಕಗಳು ತ್ವಚೆಯನ್ನು ಒಣಗಿಸುತ್ತವೆ. ಹಾಗಾಗಿ ಮುಖದಲ್ಲಿ ಮೊಡವೆ ಆಗಿದ್ದಲ್ಲಿ ಪೇಸ್ಟ್ ಹಚ್ಚಬೇಡಿ.

Pic credit - Pintrest

ಟ್ಯಾಟೂವನ್ನು ಲೇಜರ್ ಮೂಲಕ ತೆಗೆಸಬಹುದಾದರೂ ಬಿಳಿ ಬಣ್ಣದ ಟ್ಯಾಟೂ ಹಾಕಬೇಡಿ. ಈ ಟ್ಯಾಟೂವನ್ನು ತೆಗೆದರೂ ಕೂಡ ತ್ವಚೆ ಕಪು ಬಣ್ಣಕ್ಕೆ ತಿರುಗುತ್ತದೆ.

Pic credit - Pintrest

ತ್ವಚೆಗೆ ರಾಸಾಯನಿಕಯುಕ್ತ ಕ್ರೀಮ್ ಹಾಗೂ ಫೇಸ್ ವಾಶ್ ಬಳಸುವುದನ್ನು ತಪ್ಪಿಸಿ. ಸ್ವತಃ ಮನೆಯಲ್ಲಿಯೇ ತಯಾರಿಸಿದ ಕ್ರೀಮ್ ಬಳಸುವುದು ಒಳ್ಳೆಯದು.

Pic credit - Pintrest

ಬಿಗ್ ಬಾಸ್ 11: ಕಿಚ್ಚನ ಹೇರ್ ಕಟಿಂಗ್ ಮಾಡುವುದು ಇವರೇ ನೋಡಿ