ಫ್ಯಾಷನ್ ಲೋಕದಲ್ಲಿ ಕಾಲ್ಗೆಜ್ಜೆಗಳು ಫ್ಯಾನ್ಸಿ ರೂಪವನ್ನು ಪಡೆದುಕೊಂಡು ಟ್ರೆಂಡ್ ಸೃಷ್ಟಿಸುತ್ತಿವೆ.
ಮಾರುಕಟ್ಟೆಯಲ್ಲಿ ಬೆಳ್ಳಿ, ಬಂಗಾರ ಕಾಲ್ಗೆಜ್ಜೆಯ ಜೊತೆಗೆ ಆಂಟಿಕ್, ಫ್ಯಾನ್ಸಿ ಹಾಗೂ ಹೊಸ ಶೈಲಿಯ ಗೆಜ್ಜೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ
ಯುವತಿಯರ ಉಡುಗೆಗೆ ಒಪ್ಪುವಂತಹ ಆರ್ಟಿಫಿಷಿಯಲ್ ಕಾಲ್ಗೆಜ್ಜೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಕ್ರಿಸ್ಟಲ್ ಆ್ಯಂಕ್ಲೆಟ್ಸ್ ಇದು ಸ್ಫಟಿಕ ಮತ್ತು ಇತರ ಹರಳುಗಳಿಂದ ತಯಾರಿಸಲಾಗಿದ್ದು ಹೊಳಪಿನಿಂದ ಕೂಡಿರುತ್ತದೆ. ಆದರೆ ಸ್ವಲ್ಪ ದುಬಾರಿಯಾಗಿದ್ದು, ಆತ್ಯಾಕರ್ಷಕ ಲುಕ್ ನೀಡುವುದರಲ್ಲಿ ಸಂದೇಹವೇ ಇಲ್ಲ.
ಕ್ಯೂಬನ್ ಲಿಂಕ್ ಕಾಲ್ಗೆಜ್ಜೆ ಗಳು ಕ್ಲಾಸಿಕ್ ಲುಕ್ ಹೊಂದಿದ್ದು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಬೆಳ್ಳಿಯ ಬಣ್ಣ ಹಾಗೂ ಬಂಗಾರದ ಬಣ್ಣದಲ್ಲಿ ಲಭ್ಯವಿದ್ದು, ಎಲ್ಲ ರೀತಿಯ ಉಡುಪಿಗೂ ಹೊಂದಿಕೆಯಾಗುತ್ತದೆ.
ಮಣಿಯ ಆ್ಯಂಕ್ಲೆಟ್ ನೋಡುವುದಕ್ಕೆ ಸರಳವಾಗಿದ್ದು, ದಿನಬಳಕೆಗೆ ಸೂಕ್ತವಾದ ಕಾಲ್ಗೆಜ್ಜೆ ಎನ್ನಬಹುದು. ವಿವಿಧ ಆಕಾರದ ಮಣಿಗಳನ್ನು ಹೊಂದಿರುವ ಆ್ಯಂಕ್ಲೆಟ್ ಗಳು ಲಭ್ಯವಿದೆ.
ನೈಸರ್ಗಿಕ ಕಪ್ಪೆ ಚಿಪ್ಪುಗಳು ಮತ್ತು ಬಳ್ಳಿಯಿಂದ ತಯಾರಿಸುವ ಕಾಲ್ಗೆಜ್ಜೆಗಳಿಗೆ ಬೇಡಿಕೆಯಿದ್ದು ಇದು ನೋಡಲು ಆಕರ್ಷಕವಾಗಿರುತ್ತದೆ.
ಪದರ ಕಾಲ್ಗೆಜ್ಜೆಗಳಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚಿನ ಪದರಗಳನ್ನು ಹೊಂದಿದ್ದು, ವಿವಿಧ ವಿನ್ಯಾಸಗಳಲ್ಲಿ ಲಭ್ಯವಿದೆ. ಈ ರೀತಿ ವಿನ್ಯಾಸದ ಆ್ಯಂಕ್ಲೆಟ್ ಎಲ್ಲರಿಗೂ ಇಷ್ಟವಾಗುತ್ತಿದೆ.