ಕೆಲಸ ಸ್ಥಳದಲ್ಲಿ ಈ ರೀತಿ ವರ್ತಿಸಿದರೆ ಗೌರವ ಕಳೆದುಕೊಳ್ತೀರಾ

26 December 2024

Pic credit - Pintrest

Sainanda

ಕೆಲಸ ಸ್ಥಳದಲ್ಲಿ ವದಂತಿಗಳನ್ನು ಹಬ್ಬಿಸುವುದು ಸಹೋದ್ಯೋಗಿಗಳ ನಡುವಿನ ನಂಬಿಕೆಗೆ ಪೆಟ್ಟು ಬೀಳುತ್ತದೆ. ಇದು ಕೂಡ ವೃತ್ತಿಪರ ಇಮೇಜನ್ನು ಹಾಳು ಮಾಡುತ್ತದೆ.

Pic credit - Pintrest

ಕೆಲಸವನ್ನು ಸರಿಯಾಗಿ ನಿರ್ವಹಿಸದೆ ಇರುವುದು, ಕಳಪೆ ಸಮಯ ನಿರ್ವಹಣೆ, ಹೊಣೆಗಾರಿಕೆಯ ಕೊರತೆಯೂ ಗೌರವಕ್ಕೆ ಧಕ್ಕೆ ತರುತ್ತದೆ.

Pic credit - Pintrest

ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಜೊತೆಗೆ ಪರಿಣಾಮಕಾರಿವಲ್ಲದ ಸಂವಹನವು ತಪ್ಪುಗ್ರಹಿಕೆಗೆ ಕಾರಣವಾಗುತ್ತದೆ. ಇದು ನಿಮ್ಮ ಗೌರವಕ್ಕೆ ಚ್ಯುತಿ ಬರುತ್ತದೆ.

Pic credit - Pintrest

ಇತರರ ಕೆಲಸಕ್ಕೆ ಅಡ್ಡಿಪಡಿಸುವುದು, ಅಭಿಪ್ರಾಯಗಳನ್ನು ಕಡೆಗಣಿಸುವಂತಹ ನಡವಳಿಕೆಗಳಿಂದ ನಿಮ್ಮ ಗೌರವವು ಹಾಳಾಗುತ್ತದೆ.

Pic credit - Pintrest

ಸರಿಯಾದ ಸಮಯಕ್ಕೆ ಕೆಲಸಕ್ಕೆ ಬರದೇ ಇರುವುದು, ಬೇಗನೇ ಹೊರಡುವುದು. ಕೊಟ್ಟ ಕೆಲಸವನ್ನು ಮಾಡದೇ ಇರುವುದರಿಂದ ಗೌರವವನ್ನು ಕಳೆದುಕೊಳ್ಳುತ್ತೀರಿ.

Pic credit - Pintrest

ಕೆಲಸ ಮಾಡುವ ಸ್ಥಳಗಳಲ್ಲಿ ನಕಾರಾತ್ಮಕ ಮನೋಭಾವವನ್ನು ಪ್ರದರ್ಶಿಸುವುದು ಕೂಡ ಗೌರವಕ್ಕೆ ಧಕ್ಕೆ ತರುತ್ತದೆ.

Pic credit - Pintrest

ಸಂಪನ್ಮೂಲಗಳ ದುರಪಯೋಗ, ಅನುಚಿತ ವರ್ತನೆಗಳು ಹಾಗೂ ನಿಯಮಗಳನ್ನು ಗಾಳಿಗೆ ತೂರುವುದು ನಿಮ್ಮ ಗೌರವವು ಹಾಳಾಗಲು ಕಾರಣವಾಗಿದೆ.

Pic credit - Pintrest

ಶೇಂಗಾ ಚಿಕ್ಕಿಯಲ್ಲಿದೆ ಈ ಶಕ್ತಿ, ಇಲ್ಲಿದೆ ಸಿಂಪಲ್ ರೆಸಿಪಿ