ಮೌನಾ ಗುಡ್ಡೆಮನೆ ಉಟ್ಟಿರುವ ಈ ಸೀರೆಗಳು ವಿವಾಹಿತ ಮಹಿಳೆಯರ ಅಂದ ಹೆಚ್ಚಿಸುತ್ತೆ

07 December 2024

Pic credit - instagram

Preethi Bhat

ಮೌನಾ ಗುಡ್ಡೆಮನೆ ಅವರ ಸೀರೆ ಸಂಗ್ರಹ ವಿವಾಹಿತ ಮಹಿಳೆಯರಿಗೆ ವಿಭಿನ್ನ ರೀತಿಯ ಸೊಬಗನ್ನು ನೀಡುವುದರಲ್ಲಿ ಎರಡು ಮಾತಿಲ್ಲ.

Pic credit - instagram

ಪಫ್ ಸ್ಲೀವ್ ಕುಪ್ಪಸ: ಕಿತ್ತಳೆ ಬಣ್ಣದ ರೇಷ್ಮೆ ಸೀರೆಗೆ ಅದರ ವ್ಯತಿರಿಕ್ತ ಬಿಳಿ ಬಣ್ಣದ ಕುಪ್ಪಸ ಅಥವಾ ಬ್ಲೌಸ್ ಅನ್ನು ಚಂದದ ಸೊಂಟದ ಪಟ್ಟಿಯ ಜೊತೆ ಧರಿಸಿದರೆ ನವ ವಿವಾಹಿತರಿಗೆ ಕ್ಲಾಸಿ ಲುಕ್ ನೀಡುತ್ತದೆ.

Pic credit - instagram

ಕೆಂಪು ಬಣ್ಣದ ರೇಷ್ಮೆ ಸೀರೆ: ಕೆಂಪು ಬಣ್ಣದ ಸೀರೆಗೆ, ಕೂದಲನ್ನು ಬನ್ ಮಾಡಿ, ಹಣೆಗೆ ಸಿಂಧೂರ ಇಡುವುದು ನವವಿವಾಹಿತರಿಗೆ ಸಾಂಪ್ರದಾಯಿಕ ಲುಕ್ ನೀಡುತ್ತದೆ.

Pic credit - instagram

ಕಡುಗೆಂಪು ಬಣ್ಣದ ಆರ್ಗನ್ಜಾ ಸೀರೆ: ಈ ಬಣ್ಣದ ಆರ್ಗನ್ಜಾ ಸೀರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಇದನ್ನು ಹೈ ವರ್ಕ್ ಮಾಡಿರುವ ಬ್ಲೌಸ್ ಜೊತೆಯಲ್ಲಿ ಧರಿಸಬಹುದು.

Pic credit - instagram

ತಿಳಿ ನೀಲಿ ಬಣ್ಣದ ಹೂವಿನ ಸೀರೆ: ಹಗಲಿನ ಸಮಯದಲ್ಲಿ ಸೂಕ್ಷ್ಮ ಬಣ್ಣದ ಸೀರೆಗಳನ್ನು ಉಟ್ಟರೆ ಅಂದ ಇಮ್ಮಡಿಗೊಳ್ಳುತ್ತದೆ. ಇದರ ಮೇಲಿರುವ ಹೂವಿನ ಚಿತ್ತಾರ ಮತ್ತಷ್ಟು ಸೊಬಗು ನೀಡುತ್ತದೆ.

Pic credit - instagram

ಬಿಳಿ ಸೀರೆ : ನವವಿವಾಹಿತರಿಗೆ ಬಿಳಿ ಬಣ್ಣದ ಸೀರೆ ಉತ್ತಮ ಆಯ್ಕೆಯಾಗಿದೆ. ಇದಕ್ಕೆ ವ್ಯತಿರಿಕ್ತ ಬಣ್ಣದ ಕುಪ್ಪಸವನ್ನು ತೊಟ್ಟರೆ ನಿಮ್ಮ ಅಂದ ಇಮ್ಮಡಿಗೊಳ್ಳುತ್ತದೆ.

Pic credit -instagram

ಟಿಶ್ಯೂ ಸಿಲ್ಕ್ ಸೀರೆ: ತಿಳಿ ಗುಲಾಬಿ ಬಣ್ಣದ ಟಿಶ್ಯೂ ಸಿಲ್ಕ್ ಸೀರೆಗೆ ಬಿಳಿ ಬಣ್ಣದ ಕುಪ್ಪಸವನ್ನು ಧರಿಸುವುದು ಆಕರ್ಷವಾಗಿ ಕಾಣುತ್ತದೆ. ಯಾವುದೇ ರೀತಿಯ ಕಾರ್ಯಕ್ರಮಕ್ಕೂ ಇದು ಒಳ್ಳೆಯ ಲುಕ್ ನೀಡುತ್ತದೆ.

Pic credit - instagram

ಸದ್ಗುರು ಊಟ ಮಾಡುವಾಗ ನೀರು ಕುಡಿಯುವ ಅಭ್ಯಾಸವನ್ನು ಬಿಟ್ಟುಬಿಡಿ ಎನ್ನುತ್ತಾರೆ ಏಕೆ?