ಮುಖದ ಮೇಲಿನ ಕೂದಲನ್ನು ತೆಗೆದುಹಾಕಲು ಸಹಕಾರಿ ಈ ಆಯುರ್ವೇದಿಕ್ ಸ್ಕ್ರಬ್

05-December-2023

Author: Malashree Anchan

ಆಯುರ್ವೇದಿಕ್ ಸ್ಕ್ರಬ್ ಬಳಕೆ ಮಾಡುವ ಮೂಲಕ ಮುಖದ ಮೇಲಿನ ಅನಗತ್ಯ ಕೂದಲುಗಳನ್ನು ತೆಗೆದುಹಾಕುವುದಲ್ಲದೆ, ತ್ವಚೆಯ ಕಾಂತಿ ಮತ್ತು ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು.

ಸ್ವಲ್ಪ ಕಡ್ಲೆಹಿಟ್ಟು, ಅರಶಿನ,  ಆಲಿವ್ ಅಥವಾ ಬಾದಮಿ ಎಣ್ಣೆ, ಹಾಲಿನ ಕನೆ, ಎರಡು ಹನಿ ನಿಂಬೆ ರಸ. ಈ ಎಲ್ಲಾ ಪದಾರ್ಥಗಳನ್ನು ಒಂದು ಸಣ್ಣ ಪಾತ್ರೆಯಲ್ಲಿ ಸೇರಿಸಿ ಸ್ಕ್ರಬ್ ತಯಾರಿಸಿ.

ಆಯುರ್ವೇದ ಸ್ಕ್ರಬ್ ಬೇಕಾಗುವ ಪದಾರ್ಥ

ಕಡ್ಲೆ ಹಿಟ್ಟಿನ ಈ ಸ್ಕ್ರಬ್ ತಯಾರಿಸಿ, ಪೂರ್ತಿ ಮುಖದ ಮೇಲೆ ಸಮಾನವಾಗಿ ಈ ಪೇಸ್ಟ್ ಅನ್ನು ಹಚ್ಚಿ, 10 ನಿಮಿಷಗಳ ಬಳಿಕ ಸ್ಕ್ರಬ್ ಒಣಗಲು ಪ್ರಾರಂಭಿಸಿದಾಗ ಕೈಗಳ ಸಹಾಯದಿಂದ ವೃತ್ತಾಕಾರದ ಚಲನೆಯಲ್ಲಿ ಮೃದುವಾಗಿ ಸ್ಕ್ರಬ್ ಮಾಡುತ್ತಾ ತಣ್ಣೀರಿನಿಂದ ಮುಖವನ್ನು ತೊಳೆಯಿರಿ.

ಸ್ಕ್ರಬ್ ಹಚ್ಚುವ ವಿಧಾನ

ಉತ್ತಮ ಮತ್ತು ತ್ವರಿತ ಫಲಿತಾಂಶಗಳಿಗಾಗಿ ವಾರದಲ್ಲಿ ಎರಡು ಬಾರಿ ಈ ಕಡ್ಲೆಹಿಟ್ಟಿನ ಸ್ಕ್ರಬ್ ಹಚ್ಚುವುದು ಉತ್ತಮ.

ಎಷ್ಟು ಬಾರಿ ಸ್ಕ್ರಬ್ ಹಚ್ಚಬೇಕು

ಈ ಆಯುರ್ವೇದ ಸ್ಕ್ರಬ್ ಮುಖದಲ್ಲಿನ ಅನಗತ್ಯ ಕೂದಲುಗಳನ್ನು ತೆಗೆದುಹಾಕುವುದು ಮಾತ್ರವಲ್ಲದೆ ಸತ್ತ ಚರ್ಮವನ್ನು ತೆಗೆದುಹಾಕುವ ಮೂಲಕ ತ್ವಚೆಯನ್ನು  ಮೃದುಗೊಳಿಸುತ್ತದೆ.  

ಈ ಸ್ಕ್ರಬ್ನ ಪ್ರಯೋಜನ:

ಕಡ್ಲೆ ಹಿಟ್ಟಿನ ಈ ಸ್ಕ್ರಬ್ ಒಣ ತ್ವಚೆ, ಎಣ್ಣೆಯುಕ್ತ ತ್ವಚೆ, ಕಪ್ಪು  ವರ್ತುಲಗಳು, ಮೊಡವೆಗಳ ಸಮಸ್ಯೆಯನ್ನು ತೊಡೆದುಹಾಕುವ ಮೂಲಕ ತ್ವಚೆಯನ್ನು ಹೊಳೆಯುವಂತೆ ಮಾಡಲು ಸಹಕಾರಿಯಾಗಿದೆ.

ಅಲ್ಲದೆ ಕಡ್ಲೆಹಿಟ್ಟಿನ ಸ್ಕ್ರಬ್ ಮುಖದ ಮೇಲೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಬ್ಲಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.