ವಯಸ್ಸು 60 ದಾಟಿದವರ ಜೀವನಶೈಲಿ ಹೇಗಿರಬೇಕು?
09 Dec 2024
Pic credit - Pintrest
Sainanda
ಯಾವಾಗಲೂ ಕ್ರಿಯಾಶೀಲರಾಗಿ ಚಟುವಟಿಕೆಯಿಂದಿರಿ. ಮನಸ್ಸಿನಲ್ಲಿ ಸಕಾರಾತ್ಮಕ ಯೋಚನೆಗಳೇ ತುಂಬಿರಲಿ.
Pic credit - Pintrest
ಪ್ರೀತಿಪಾತ್ರರು ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಮರೆಯದಿರಿ. ವಯಸ್ಸಾದ ಸಮಯದಲ್ಲಿ ಈ ವ್ಯಕ್ತಿಗಳೇ ನಿಮಗೆ ಮಾನಸಿಕವಾಗಿ ಆಸರೆಯಾಗಿ ನಿಲ್ಲುವವರು.
Pic credit - Pintrest
ನಿಮ್ಮ ಆರೋಗ್ಯ ಮತ್ತು ಮನರಂಜನೆಗಾಗಿ ಹಣ ಮತ್ತು ಸಮಯವನ್ನು ವಿನಿಯೋಗಿಸಿ.
Pic credit - Pintrest
ಉಸಿರು ನಿಂತಾಗ ಇಲ್ಲಿಂದ ಏನನ್ನೂ ನಮ್ಮೊಂದಿಗೆ ತೆಗೆದುಕೊಂಡು ಹೋಗಲಾಗುವುದಿಲ್ಲ ಎನ್ನುವ ಸತ್ಯದ ಅರಿವಿರಲಿ.
Pic credit - Pintrest
ವೃದ್ಧಾಪ್ಯದಲ್ಲಿ ಮಿತವ್ಯಯ ಮಾಡುವುದನ್ನು ಕಡಿಮೆ ಮಾಡಿ, ಬೇಕಾದಾಗ ಹಣ ಖರ್ಚು ಮಾಡಿ. ನಿಮಗೆ ಸಂತೋಷ ನೀಡುವ ಕೆಲಸಗಳನ್ನು ಮಾಡುತ್ತಿರಿ.
Pic credit - Pintrest
ನನ್ನ ಮರಣದ ಬಳಿಕ ಏನಾಗುತ್ತದೆ ಎಂಬುದರ ಕುರಿತು ಚಿಂತಿಸಬೇಡಿ. ಸಮಯವು ಯಾರಿಗಾಗಿಯೂ ಕಾಯುವುದಿಲ್ಲ, ಯಾರು ಕೂಡ ಯಾರ ಮೇಲೂ ಅವಲಂಬಿತವಾಗಿಲ್ಲ.
Pic credit - Pintrest
ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಚಿಂತಿಸಬೇಡಿ. ಅವರಿಗೆ ಬೇಕಾದ ಜೀವನವನ್ನು ಸ್ವತಃ ಅವರೇ ಆರಿಸಿಕೊಳ್ಳಲಿ.
Pic credit - Pintrest
ಸುಖನಿದ್ರೆಗೆ ಜಾರಲು ಈ ನಿಯಮ ತಪ್ಪದೇ ಪಾಲಿಸಿ
ಇದನ್ನೂ ಓದಿ