ಸಂಬಂಧಗಳು ಪ್ರತಿಯೊಬ್ಬರ ಜೀವನದಲ್ಲೂ ಬಹಳ ಮುಖ್ಯ. ಅದು ಯಾವ ರೀತಿಯ ಸಂಬಂಧವೇ ಆಗಿರಲಿ ಅದನ್ನು ಜೀವಂತವಾಗಿಡುವುದು ನಮ್ಮ ಕೈಯಲ್ಲೇ ಇರುತ್ತದೆ. ಅದರಲ್ಲೂ ಗಂಡ-ಹೆಂಡತಿಯ ಸಂಬಂಧದಲ್ಲಿ ಆ ಸಂಬಂಧ ಗಟ್ಟಿಯಾಗಿರುವಂತೆ ನೋಡಿಕೊಳ್ಳಬೇಕು. ಪ್ರತಿಯೊಂದು ಸಂಬಂಧವು ವಿಶಿಷ್ಟವಾಗಿದ್ದರೂ, ನಿಮ್ಮ ಬಂಧವನ್ನು ಬಲಪಡಿಸಲು ನೀವು ಪ್ರಯತ್ನಿಸಬಹುದಾದ ಕೆಲವು ವಿಧಾನಗಳು ಇಲ್ಲಿವೆ.
ನಿಮ್ಮ ಸಂಬಂಧವನ್ನು ಬಲಗೊಳಿಸಿ
ಇದು ನಿಮಗೆ ಸರಳವಾಗಿ ಕಾಣಿಸಬಹುದು. ಆದರೆ ಈ ವೇಗದ ಜೀವನದಲ್ಲಿ ಅನೇಕ ದಂಪತಿಗಳಿಗೆ ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯುವುದು ಅತ್ಯಂತ ಸವಾಲಿದ್ದಾಗಿದೆ. ಹೀಗಾಗಿ, ಇಬ್ಬರೂ ಒಟ್ಟಿಗೇ ಒಳ್ಳೆಯ ಸಮಯ ಕಳೆಯಿರಿ.
ಗುಣಮಟ್ಟದ ಸಮಯವನ್ನು ಕಳೆಯಿರಿ
ಕೆಲಸದ ಕಾರಣದಿಂದ ಅಥವಾ ಇನ್ಯಾವುದೋ ಕಾರಣದಿಂದ ಇಬ್ಬರೂ ಬೇರೆ ಬೇರೆ ಸಮಯದಲ್ಲಿ ಮಲಗಬೇಡಿ. ಇಬ್ಬರೂ ಬೇರೆ ಬೇರೆ ಸಮಯಗಳಲ್ಲಿ ಮಲಗುವುದು ನಿಮ್ಮ ಮತ್ತು ನಿಮ್ಮ ಸಂಗಾತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಒಟ್ಟಿಗೆ ಮಲಗಿ
ನಿಮ್ಮ ಸಂಗಾತಿಗೆ ಪ್ರೀತಿಯಿಂದ ನೀವು ಏನನ್ನಾದರೂ ಹೇಳುವುದು ಪ್ರೀತಿಯ ಅತ್ಯುತ್ತಮ ಅಭಿವ್ಯಕ್ತಿಗಳಲ್ಲಿ ಒಂದಾಗಿದೆ. ಅವರು ನಿಮಗೆ ಎಷ್ಟು ಅರ್ಥವಾಗಿದ್ದಾರೆಂದು ಅವರಿಗೆ ತಿಳಿಸಿ ಮತ್ತು ಅವರ ಎಲ್ಲಾ ರೀತಿಯ ವರ್ತನೆಗಳನ್ನು ಇದ್ದ ಹಾಗೇ ಸ್ವೀಕರಿಸಿ. ಅವರ ಪ್ರತಿ ಸಂತೋಷವನ್ನೂ ನೀವು ಸಂಭ್ರಮಿಸಿ.
ಪರಸ್ಪರ ಗೌರವಿಸಿ, ಸಂಭ್ರಮಿಸಿ
ಮಕ್ಕಳಾದ ಮೇಲೆ ದಂಪತಿಗೆ ರಾತ್ರಿ ಒಟ್ಟಿಗೇ ಹೊರಗೆ ಊಟಕ್ಕೆ ಹೋಗಲು, ಡೇಟಿಂಗ್ ಮಾಡಲು ಸಮಯವೇ ಸಿಗುವುದಿಲ್ಲ. ಇದರಿಂದ ಅವರಿಬ್ಬರ ನಡುವೆ ಅವರಿಗೇ ಗೊತ್ತಿಲ್ಲದೆ ಒಂದು ಅಂತರ ಸೃಷ್ಟಿಯಾಗುತ್ತದೆ. ಹೀಗಾಗಿ, ಮದುವೆಯಾಗಿ ಎಷ್ಟೇ ವರ್ಷವಾದರೂ ಇಬ್ಬರೂ ಆಗಾಗ ಡೇಟಿಂಗ್ ಹೋಗಿ, ರಾತ್ರಿ ಡಿನ್ನರ್ ಮಾಡಿ.
ಡೇಟ್ ನೈಟ್ ಹೋಗಿ
ನಿಮ್ಮ ಸಂಗಾತಿಗೆ ಆಗಾಗ ಸರ್ಪ್ರೈಸ್ಗಳನ್ನು ನೀಡುತ್ತಿರಿ. ಇದು ಖಂಡಿತವಾಗಿಯೂ ಅವರಿಗೆ ಇಷ್ಟವಾಗುತ್ತದೆ. ಅವರು ಇಷ್ಟಪಡುವ ಸಣ್ಣ ವಿಷಯಗಳೊಂದಿಗೆ, ಸಣ್ಣಪುಟ್ಟ ವಸ್ತುಗಳನ್ನ ನೀಡಿ ಅವರನ್ನು ಆಶ್ಚರ್ಯಗೊಳಿಸಿ.
ಸರ್ಪ್ರೈಸ್ಗಳನ್ನು ಕೊಡುತ್ತಿರಿ
ನಿಮ್ಮ ಸಂಗಾತಿಯ ಪ್ರೀತಿಯ ಭಾಷೆಯನ್ನು ತಿಳಿದುಕೊಳ್ಳುವುದು ಮತ್ತು ನಿಮ್ಮ ಪ್ರೀತಿಯ ಭಾಷೆಯನ್ನು ಅವರಿಗೆ ತಿಳಿಸುವುದು ಅಗತ್ಯ. ಇದು ನಿಮ್ಮಿಬ್ಬರಿಗೂ ಮೆಚ್ಚುಗೆ ಮತ್ತು ಪ್ರೀತಿಯನ್ನು ಅನುಭವಿಸಲು ಸಹಾಯ ಮಾಡುವ ಒಂದು ಮಾರ್ಗವಾಗಿದೆ.
ಪರಸ್ಪರ ಪ್ರೀತಿಯ ಭಾಷೆಯನ್ನು ಅಭ್ಯಾಸ ಮಾಡಿ
ಸಂವಹನವು ಪ್ರತಿ ಸಂಬಂಧದ ಯಶಸ್ಸಿನ ಅತ್ಯಂತ ನಿರ್ಣಾಯಕ ಅಂಶವಾಗಿದೆ. ನಿಮ್ಮ ಸಂಗಾತಿಯ ಜೊತೆ ಮನಸು ಬಿಚ್ಚಿ ಮಾತನಾಡುವುದರಿಂದ ಇಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡಿಕೊಳ್ಳಬಹುದು.
ಮನ ಬಿಚ್ಚಿ ಮಾತನಾಡಿ
ನಿಮ್ಮ ಸಂಗಾತಿಯ ಅಗತ್ಯಗಳು ನಿಮ್ಮ ಅಗತ್ಯಕ್ಕಿಂತ ಭಿನ್ನವಾಗಿರುತ್ತವೆ. ಆದ್ದರಿಂದ, ಅವರ ಗಡಿಗಳನ್ನು ತಿಳಿದುಕೊಳ್ಳುವುದು ಮತ್ತು ಅವರನ್ನು ಗೌರವಿಸುವುದು ಸಂಬಂಧವನ್ನು ಉಳಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ.