26 June 2024

ಮಾನ್ಸೂನ್ ಟ್ರಿಪ್ ಹೋಗ್ತೀರಾ, ಖಂಡಿತ ಈ ವಿಷಯ ನೆನಪಿರಲಿ

Pic Credit -Pintrest

Author :Sayinanda

ನೀವೇನಾದರೂ ಪ್ರಕೃತಿ ಪ್ರಿಯರಾಗಿದ್ದು ಮಳೆಯನ್ನು ಇಷ್ಟಪಡುತ್ತಿದ್ದರೆ, ಪ್ರಕೃತಿಯನ್ನು ಹತ್ತಿರದಿಂದ ನೋಡಲು ಮಾನ್ಸೂನ್ ನಲ್ಲಿ ಟ್ರಿಪ್ ಗೆ ತೆರಳಲೇಬೇಕು.

Pic Credit -Pintrest

ಬೇರೆ ಋತುಗಳಿಗೆ ಹೋಲಿಸಿದರೆ ಮಾನ್ಸೂನ್‌ನಲ್ಲಿ ಪ್ರಯಾಣಿಸಲು ಮಾಡಬೇಕಾದ ಸಿದ್ಧತೆಗಳ ಕಡೆಗೆ ಹೆಚ್ಚು ಗಮನ ನೀಡಬೇಕು.

Pic Credit -Pintrest

ಮಾನ್ಸೂನ್ ಟ್ರಿಪ್ ಎಂಜಾಯ್ ಮಾಡಬೇಕೆಂದು ಕೊಂಡವರು ಈ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲೇ ಬೇಕು.

Pic Credit -Pintrest

ಮಳೆಗಾಲದಲ್ಲಿ ಟ್ರಿಪ್ ಗೆ ತೆರಳುವವರು ಈ ಋತುವಿನಲ್ಲಿ ಸುಲಭವಾಗಿ ಒಣಗಿಸಬಹುದಾದ ಬಟ್ಟೆಗಳನ್ನು ಇಟ್ಟುಕೊಳ್ಳಿ. ಜೀನ್ಸ್ ಸೇರಿದಂತೆ ಭಾರವಾದ ಬಟ್ಟೆಗಳನ್ನು ಆದಷ್ಟು ತಪ್ಪಿಸಿ.

Pic Credit -Pintrest

ಮಳೆಗಾಲದಲ್ಲಿ ಬಾಯಾರಿಕೆ ಕಡಿಮೆಯೆಂದು ಬಾಟಲನ್ನು ತೆಗೆದುಕೊಳ್ಳದೇ ಹೋಗಬೇಡಿ. ದೇಹವು ನಿರ್ಜಲೀಕರಣಕ್ಕೆ ಒಳಗಾಗಬಾರದೆಂದರೆ ನೀರಿನ ಬಾಟಲ್ ನಿಮ್ಮ ಬ್ಯಾಗ್​​​ನಲ್ಲಿರಲಿ.

Pic Credit -Pintrest

ಮಳೆಗಾಲದಲ್ಲಿ ಬಟ್ಟೆ ಹಾಗೂ ಲೆದರ್ ಶೂಗಳ ಬದಲಿಗೆ ವಾಟರ್ ಪ್ರೂಫ್  ಹಾಗೂ ಜಾರದ ಪಾದರಕ್ಷೆಗಳನ್ನು ಬಳಸಿದರೆ ಉತ್ತಮ.

Pic Credit -Pintrest

ಟ್ರಿಪ್ ವೇಳೆಯಲ್ಲಿ ಹೊರಗಡೆ ಸೇವಿಸುವ ಆಹಾರ ಬಗ್ಗೆ ಎಚ್ಚರ ವಹಿಸಿ, ಈಗಾಗಲೇ ಪ್ಯಾಕ್ ಮಾಡಿದ ಆಹಾರಗಳ ಸೇವನೆಯನ್ನು ಆದಷ್ಟು ತಪ್ಪಿಸಿ.

Pic Credit -Pintrest

 ಛತ್ರಿ, ರೇನ್ ಕೋಟ್ ಸೇರಿದಂತೆ ಮಾನ್ಸೂನ್ ಗೆ ಅಗತ್ಯ ವಾದ ವಸ್ತುಗಳು ನಿಮ್ಮ ಬ್ಯಾಗ್ ನಲ್ಲಿಟ್ಟುಕೊಳ್ಳಿ.

Pic Credit -Pintrest

ಮೊಬೈಲ್, ಕ್ಯಾಮೆರಾ, ಚಾರ್ಜರ್ ಸೇರಿದಂತೆತೆ ಇನ್ನಿತ್ತರ ಗ್ಯಾಜೆಟ್ ಗಳನ್ನು ಇಡಲು ಜಿಪ್ ಇರುವ ಪೌಚನ್ನು ಬಳಸುವುದು ಉತ್ತಮ.

Pic Credit -Pintrest