Author: Sushma Chakre

ಈ ವರ್ಷ ಇಂಟರ್ನೆಟ್​ನಲ್ಲಿ ಭಾರತೀಯರು ಅತಿ ಹೆಚ್ಚು ಹುಡುಕಿದ ಟಾಪ್ 9 ರೆಸಿಪಿಗಳಿವು

13 Dec 2023

Author: Sushma Chakre

ಧನಿಯಾ ಪಂಜಿರಿ ಎಂಬುದು ಜನ್ಮಾಷ್ಟಮಿಯಂತಹ ಹಿಂದೂ ಹಬ್ಬಗಳಲ್ಲಿ ಉಪವಾಸವನ್ನು ಮುರಿಯಲು ತಿನ್ನುವ ಪ್ರಸಾದವಾಗಿದೆ. ಇದು ಕೊತ್ತಂಬರಿ ಪುಡಿ, ತುಪ್ಪ ಮತ್ತು ಡ್ರೈಫ್ರೂಟ್​ಗಳನ್ನು ಒಳಗೊಂಡಿರುವ ಪೌಷ್ಟಿಕ ಭಕ್ಷ್ಯವಾಗಿದೆ.

ಧನಿಯಾ ಪಂಜಿರಿ

ತಿರುವತಿರೈ ಕಾಳಿ ಎಂಬುದು ತಮಿಳಿನ ಹಬ್ಬವಾದ ತಿರುವತ್ತಿರೈ ಸಮಯದಲ್ಲಿ ಮಾಡುವ ಸಿಹಿತಿಂಡಿ. ಇದು ಒರಟಾಗಿ ಅಕ್ಕಿ ಮತ್ತು ಬೆಲ್ಲದ ಪಾಕದೊಂದಿಗೆ ಕುದಿಸಿದ ದಾಲ್ ಆಗಿದೆ.

ತಿರುವತಿರೈ ಕಾಳಿ ರೆಸಿಪಿ

ಮಾವಿನ ಉಪ್ಪಿನಕಾಯಿ 2023ರಲ್ಲಿ ಭಾರತದಲ್ಲಿ ಹೆಚ್ಚು ಹುಡುಕಲ್ಪಟ್ಟ ಪಾಕವಿಧಾನವಾಗಿದೆ. ತೀರಾ ಎಳೆತೂ ಅಲ್ಲದ ಹೆಚ್ಚು ಬಲಿಯದ ಮಾವಿನಕಾಯಿಗೆ ಉಪ್ಪು, ಮಸಾಲೆಗಳು ಮತ್ತು ಎಣ್ಣೆಯನ್ನು ಹಾಕಿ ಉಪ್ಪಿನಕಾಯಿಯನ್ನು ಸಾಂಪ್ರದಾಯಿಕವಾಗಿ ತಯಾರಿಸಲಾಗುತ್ತದೆ. ಭಾರತೀಯ ಊಟದಲ್ಲಿ ಉಪ್ಪಿನಕಾಯಿಗೆ ವಿಶೇಷ ಸ್ಥಾನವಿದೆ.

ಮಾವಿನಕಾಯಿ ಉಪ್ಪಿನಕಾಯಿ

ರವೆ ಉಂಡೆಯನ್ನು ರವೆ, ತುಪ್ಪ, ತೆಂಗಿನಕಾಯಿ, ಸಕ್ಕರೆ ಮತ್ತು ಬೆಲ್ಲದಿಂದ ಮಾಡಲಾಗುತ್ತದೆ. ಈ ಸಿಹಿ ತಿಂಡಿ ಸಾಂಪ್ರದಾಯಿಕ ತಿನಿಸಾಗಿದೆ. ಸಾಮಾನ್ಯವಾಗಿ ನವರಾತ್ರಿ, ದೀಪಾವಳಿ ಮತ್ತು ಸಂಕ್ರಾಂತಿ ಸಮಯದಲ್ಲಿ ಇದನ್ನು ತಯಾರಿಸಲಾಗುತ್ತದೆ, ಈ ಲಡ್ಡುಗಳಿಗೆ ಏಲಕ್ಕಿ, ಗೋಡಂಬಿ ಮತ್ತು ಒಣದ್ರಾಕ್ಷಿಗಳನ್ನು ಹಾಕಿದರೆ ಇನ್ನಷ್ಟು ರುಚಿಯಾಗಿರುತ್ತದೆ.

ರವೆ ಉಂಡೆ

ಕರಂಜಿ ಮಹಾರಾಷ್ಟ್ರದ ಒಂದು ಬಗೆಯ ಸಿಹಿ ತಿಂಡಿಯಾಗಿದ್ದು, ಇದನ್ನು ಹೆಚ್ಚಾಗಿ ಹಬ್ಬಗಳ ಸಮಯದಲ್ಲಿ ಮಾಡಲಾಗುತ್ತದೆ. ಇವುಗಳು ಅರ್ಧ ಚಂದ್ರನ ಆಕಾರದಲ್ಲಿರುತ್ತದೆ. ತುರಿದ ತೆಂಗಿನಕಾಯಿ, ಡ್ರೈಫ್ರೂಟ್ಸ್​ ಮತ್ತು ಎಳ್ಳು ಕಾಳುಗಳಿಂದ ಇದು ತುಂಬಿರುತ್ತವೆ.

ಕರಂಜಿ ಪಾಕವಿಧಾನ

ಸೆಕ್ಸ್ ಆನ್ ದಿ ಬೀಚ್ ಎಂಬುದು ವೋಡ್ಕಾದ ಹೆಸರು. ಪೀಚ್ ಸ್ನ್ಯಾಪ್ಸ್, ಕಿತ್ತಳೆ ಜ್ಯೂಸ್ ಮತ್ತು ಕ್ರ್ಯಾನ್‌ಬೆರಿ ಜ್ಯೂಸ್​ನ ಮಿಶ್ರಣವಾಗಿರುವ ಕಾಕ್‌ಟೈಲ್ ಇದಾಗಿದೆ. ನೀವು ಇದನ್ನು ಐಸ್‌ನ ಜೊತೆ ಪಾನೀಯವಾಗಿ ಬಡಿಸಬಹುದು.

ಸೆಕ್ಸ್ ಆನ್ ದಿ ಬೀಚ್ ರೆಸಿಪಿ

ಹೆಸರೇ ಸೂಚಿಸುವಂತೆ ಪಂಚಾಮೃತ ಎಂಬುದು ಧಾರ್ಮಿಕ ಕಾರ್ಯಗಳಲ್ಲಿ ನೀಡಲಾಗುವ ಸಾಂಪ್ರದಾಯಿಕ ಪ್ರಸಾದವಾಗಿದೆ. ಇದು 5 ಪದಾರ್ಥಗಳನ್ನು ಒಳಗೊಂಡಿರುತ್ತದೆ. ಹಾಲು, ಮೊಸರು, ಸಕ್ಕರೆ, ಜೇನುತುಪ್ಪ ಮತ್ತು ತುಪ್ಪವನ್ನು ಸೇರಿಸಿ ಮಾಡುವುದರಿಂದ ಇದಕ್ಕೆ ಪಂಚಾಮೃತ ಎಂದು ಹೆಸರು.

ಪಂಚಾಮೃತ

ಯುಗಾದಿ ಪಚಡಿಯು ಹಿಂದೂ ಹೊಸ ವರ್ಷದ ಆರಂಭವನ್ನು ಗುರುತಿಸಲು ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಮಾಡುವ ಹಬ್ಬದ ಪಾಕವಿಧಾನವಾಗಿದೆ. ದೇವರಿಗೆ ಅರ್ಪಿಸಿದ ನಂತರ ಜನರು ಯುಗಾದಿಯಂದು ಸೇವಿಸುವ ಮೊದಲ ಆಹಾರ ಇದು.

ಯುಗಾದಿ ಪಚಡಿ

ಕೋಲುಕಟ್ಟೈ ಗಣೇಶ ಚತುರ್ಥಿಯ 10 ದಿನಗಳ ಅವಧಿಯ ಹಬ್ಬದ ಸಮಯದಲ್ಲಿ ಮಾಡುವ ಮೋದಕದ ಮತ್ತೊಂದು ರೂಪವಾಗಿದೆ. ಮೋದಕವನ್ನು ಎಣ್ಣೆಯಲ್ಲಿ ಕರಿಯುತ್ತಾರೆ. ಆದರೆ, ಇದನ್ನು ಹಬೆಯಲ್ಲಿ ಬೇಯಿಸುತ್ತಾರೆ. ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಕೋಲುಕಟ್ಟೈ ಅನ್ನು ಅಕ್ಕಿ ಹಿಟ್ಟಿನಲ್ಲಿ ತೆಂಗಿನಕಾಯಿ ಮತ್ತು ಬೆಲ್ಲವನ್ನು ತುಂಬಿ, ಆವಿಯಲ್ಲಿ ಬೇಯಿಸಲಾಗುತ್ತದೆ. ಕರ್ನಾಟಕದಲ್ಲಿ ಇದನ್ನು ಕಾಯಿ ಕಡುಬು ಎಂದು ಕೂಡ ಕರೆಯುತ್ತಾರೆ.

ಕೋಲುಕಟ್ಟೈ ರೆಸಿಪಿ