ರೋಸ್ ಡೇಯಿಂದ ಕಿಸ್ ಡೇವರೆಗೆ, ಪ್ರೇಮಿಗಳ ವಾರದ ವಿವರ ಇಲ್ಲಿದೆ
6 February 2025
Pic credit - Pintrest
Preethi Bhat
ಪ್ರೇಮಿಗಳು ಕಾತುರದಿಂದ ಕಾಯುವ ವ್ಯಾಲೆಂಟ್ಸ್ ಡೇ ಬಂದೇ ಬಿಡ್ತು. ಇದು ಕೇವಲ 1 ದಿನಕ್ಕೆ ಮಾತ್ರ ಸಮೀತವಾಗಿರುವುದಿಲ್ಲ. ಫೆಬ್ರವರಿ 7 ರಿಂದ ಪ್ರೇಮಿಗಳ ವಾರ ಆರಂಭವಾಗಿ ಫೆಬ್ರವರಿ 14 ರವರೆಗೆ ನಡೆಯುತ್ತದೆ.
Pic credit - Pintrest
ಪ್ರೇಮಿಗಳ ವಾರದ ಮೊದಲ ದಿನ ರೋಸ್ ಡೇ. ಗುಲಾಬಿ ಹೂ ಪ್ರೀತಿಗೆ ವಿಶೇಷ ಅರ್ಥ ನೀಡುತ್ತದೆ. ನೀವು ಪ್ರಪೋಸ್ ಮಾಡಲು ಬಯಸಿದಲ್ಲಿ ಹುಡುಗಿಗೆ ಕೆಂಪು ಗುಲಾಬಿ ನೀಡಿ ಪ್ರೇಮ ನಿವೇದನೆ ಮಾಡಿಕೊಳ್ಳಬಹುದು.
Pic credit - Pintrest
ಫೆ. 8 ಪ್ರಪೋಸ್ ಡೇ: ಈ ದಿನ ನಿಮ್ಮ ಮನಸ್ಸಿನ ಭಾವನೆಯನ್ನು ನೀವು ಇಷ್ಟಪಟ್ಟವರಿಗೆ ಹೇಳಿಕೊಳ್ಳುವ ದಿನ. ನಿಮ್ಮ ಪ್ರೀತಿ ಪಾತ್ರರಿಗೆ ಇಷ್ಟವಾದ ಗಿಫ್ಟ್ ನೀಡಿ ಅವರನ್ನುು ಪ್ರಪೋಸ್ ಮಾಡಬಹುದು.
Pic credit - Pintrest
ಫೆ. 9 ಚಾಕೊಲೇಟ್ ದಿನ: ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲಾ ವಯೋಮಾನದವರು ಇಷ್ಟ ಪಟ್ಟು ತಿನ್ನುವ ಸಿಹಿ ಎಂದರೆ ಅದು ಚಾಕೊಲೇಟ್. ಈ ವಿಶೇಷ ದಿನದಂದು ನಿಮ್ಮ ಪ್ರೀತಿ ಪಾತ್ರರಿಗೆ ಚಾಕೊಲೇಟ್ ನೀಡಬಹುುದು.
Pic credit - Pintrest
ಫೆ. 10 ಟೆಡ್ಡಿ ಡೇ: ಇದು ಮುಗ್ಧ ಪ್ರೀತಿಯ ಸಂಕೇತವಾಗಿದೆ. ನಿಮ್ಮ ಸಂಗಾತಿಗೆ ಟೆಡ್ಡಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ನೀವು ಪ್ರೀತಿಯನ್ನು ಸಂಭ್ರಮಿಸಬಹುದು. ವಿಶೇಷವಾಗಿ ಹುಡುಗಿಯರು ಟೆಡ್ಡಿಯನ್ನು ಇಷ್ಟಪಡುತ್ತಾರೆ.
Pic credit - Pintrest
ಫೆ. 11 ಪ್ರಾಮಿಸ್ ಡೇ: ಪ್ರಾಮಿಸ್ ದಿನದಂದು ನಿಮ್ಮ ಪ್ರೇಮಿಗಳಿಗೆ ನೀವು ವಾಗ್ದಾನ ನೀಡಬಹುದು. ಫೆ. 12ಅಪ್ಪುಗೆಯ ದಿನ: ಹಗ್ ಡೇ ಇಬ್ಬರಿಗೂ ಸುರಕ್ಷಿತ ಭಾವನೆಯನ್ನು ನೀಡುವ ದಿನವಾಗಿದೆ.
Pic credit - Pintrest
ಫೆ. 13 ಕಿಸ್ ಡೇ: ಕೆನ್ನೆ, ತುಟಿ ಅಥವಾ ಹಣೆಗೆ ಮುತ್ತಿಟ್ಟು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಫೆ. 14 ವ್ಯಾಲೆಂಟೈನ್ಸ್ ಡೇ: ಇದು ಪ್ರೇಮಿಗಳಿಗೆ ಬಹಳ ಪ್ರಮುಖವಾದ ದಿನ. ಇಷ್ಟು ದಿನದ ಪ್ರೀತಿಯನ್ನು ನೀವು ಒಟ್ಟಿಗೆ ಈ ದಿನದಂದು ಆಚರಿಸಬಹುದು.
Pic credit - Pintrest
ರೋಸ್ ಡೇ ಬರೀ ಪ್ರೇಮಿಗಳಿಗಷ್ಟೇ ಅಲ್ಲ; ಒಂದೊಂದು ಬಣ್ಣದ ಗುಲಾಬಿಯ ಅರ್ಥ ತಿಳಿಯಿರಿ