ದಕ್ಷಿಣ ಭಾರತದ ಈ ಆಹಾರ ಸೇವಿಸಿ ತೂಕ ಇಳಿಸಿಕೊಳ್ಳಿ

30 December 2024

Pic credit - Pintrest

Sainanda

ತೂಕ ಇಳಿಸಬೇಕೆನ್ನುವವರು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದರೊಂದಿಗೆ ದಕ್ಷಿಣ ಭಾರತದ ಈ ಆಹಾರಗಳನ್ನು ಸೇವಿಸಿದ್ರೆ ತೂಕ ಇಳಿಸೋದು ಕಷ್ಟವೇನಲ್ಲ.

Pic credit - Pintrest

ಎಲ್ಲರ ಫೇವರಿಟ್ ತಿಂಡಿ ದೋಸೆ ತೂಕ ಇಳಿಸೋರಿಗೆ ಬೆಸ್ಟ್ ಆಯ್ಕೆಯಾಗಿದೆ. ಸುಲಭ ಹಾಗೂ ತ್ವರಿತವಾಗಿ ಮಾಡಬಹುದಾದ ದೋಸೆಯು ಕಡಿಮೆ ಕ್ಯಾಲೋರಿಯನ್ನು ಹೊಂದಿದೆ.

Pic credit - Pintrest

ಇಡ್ಲಿ ಕೂಡ ಕಡಿಮೆ ಕ್ಯಾಲೋರಿ ಹೊಂದಿದ್ದು, ಫೈಬರ್‌ ನಿಂದ ಸಮೃದ್ಧವಾಗಿವೆ. ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಸವಿಯಬಹುದು.

Pic credit - Pintrest

ರವೆ ಮತ್ತು ತರಕಾರಿಗಳಿಂದ ತಯಾರಿಸುವ ತಿಂಡಿಯಾದ ಉಪ್ಮಾ ಹೆಚ್ಚಿನ ಫೈಬರ್ ಅನ್ನು ಹೊಂದಿದ್ದು, ತೂಕ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

Pic credit - Pintrest

ನೋಡುವುದಕ್ಕೆ ಪ್ಯಾನ್ ಕೇಕ್ ನಂತೆ ಇರುವ ಉತ್ತಪ್ಪ ತೂಕ ನಿರ್ವಹಣೆ ಮಾಡುವವರು ತಿನ್ನಬಹುದು. ತೆಂಗಿನಕಾಯಿ ಚಟ್ನಿಯೊಂದಿಗೆ ಈ ತಿನಿಸನ್ನು ಸವಿಯಬಹುದು.

Pic credit - Pintrest

ದಿನನಿತ್ಯ ಮೊಸರನ್ನ ಸೇವಿಸುವುದು ತೂಕ ಇಳಿಕೆಗೆ ಸಹಕಾರಿಯಾಗಿದೆ. ಮೊಸರು ವಿವಿಧ ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

Pic credit - Pintrest

ರಾಗಿ, ತರಕಾರಿ ಸಾಂಬಾರ್, ರಸಂ, ಅನ್ನ ಮತ್ತು ಮೊಳಕೆ ಕಾಳುಗಳ ಸಲಾಡ್  ಸೇವನೆ ಜೀರ್ಣ ಕ್ರಿಯೆಯನ್ನು ಸುಧಾರಿಸಿ ತೂಕ ನಷ್ಟಕ್ಕೆ ಕಾರಣವಾಗುತ್ತದೆ.

Pic credit - Pintrest

ಕೆಲಸ ಸ್ಥಳದಲ್ಲಿ ಈ ರೀತಿ ವರ್ತಿಸಿದರೆ ಗೌರವ ಕಳೆದುಕೊಳ್ತೀರಾ