Akshatha Vorkady

31 Jan 2025

Pic credit - Pintrest

ಈ ದೇಶಗಳಲ್ಲಿ ಪುರುಷ ಎಷ್ಟು ಬೇಕಾದರೂ ಮದುವೆಯಾಗಬಹುದು

ಕೆಲವು ದೇಶಗಳಲ್ಲಿ, ಧಾರ್ಮಿಕ ಅಥವಾ ಸಾಂಸ್ಕೃತಿಕ ಸಂಪ್ರದಾಯಗಳನ್ನು ಅವಲಂಬಿಸಿ, ಬಹುಪತ್ನಿತ್ವ ಪದ್ಧತಿ ಇಂದಿಗೂ ಚಾಲ್ತಿಯಲ್ಲಿದೆ.

Pic credit - Pintrest

ಹಿಂದೂ ವಿವಾಹ ಕಾಯಿದೆ (1955) ಮತ್ತು ಭಾರತೀಯ ದಂಡ ಸಂಹಿತೆಯ 494 ವಿಧಿಯ ಅನ್ವಯ ಪತಿ ಅಥವಾ ಪತ್ನಿ ಜೀವಂತವಾಗಿರುವಾಗ ಮತ್ತೊಂದು ಮದುವೆಗೆ ಅವಕಾಶವಿಲ್ಲ.

Pic credit - Pintrest

ಆದರೆ ಇಸ್ಲಾಮಿಕ್ ದೇಶಗಳೂ ಸೇರಿದಂತೆ ಕೆಲವು ದೇಶಗಳಲ್ಲಿ ಇಂದಿಗೂ ಕೂಡ ಬಹುಪತ್ನಿತ್ವ ವ್ಯವಸ್ಥೆ ಚಾಲ್ತಿಯಲ್ಲಿದೆ.

Pic credit - Pintrest

ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್, ಕತಾರ್, ಓಮನ್ ಮತ್ತು ಇತರ ಇಸ್ಲಾಮಿಕ್ ದೇಶಗಳಲ್ಲಿ ಒಬ್ಬ ಪುರುಷನಿಗೆ ನಾಲ್ಕು ಹೆಂಡತಿಯರನ್ನು ಹೊಂದಲು ಅವಕಾಶವಿದೆ. 

Pic credit - Pintrest

ಹೌಸಾ ಮತ್ತು ಫುಲಾನಿಯಂತಹ ನೈಜೀರಿಯಾದ ಕೆಲವು ಜನಾಂಗೀಯ ಗುಂಪುಗಳು ಕೂಡ ಬಹುಪತ್ನಿತ್ವವನ್ನು ಮುಂದುವರಿಸಿಕೊಂಡು ಬಂದಿವೆ.

Pic credit - Pintrest

ಪಶ್ಚಿಮ ಆಫ್ರಿಕಾದ ಘಾನಾದಲ್ಲಿಯೂ ಸಹ, ಕೆಲವು ಜನಾಂಗೀಯ ಗುಂಪುಗಳು ಒಂದಕ್ಕಿಂತ ಹೆಚ್ಚು ಹೆಂಡತಿಯನ್ನು ಹೊಂದುವ ಅಭ್ಯಾಸವನ್ನು ಹೊಂದಿವೆ.

Pic credit - Pintrest

ಮಲೇಷ್ಯಾ, ಕೀನ್ಯಾದಲ್ಲೂ ಕೂಡ ಇಸ್ಲಾಮಿಕ್ ಕಾನೂನಿನ ಪ್ರಕಾರ, ಪುರುಷರು ನಾಲ್ಕು ಹೆಂಡತಿಯರನ್ನು ಹೊಂದಲು ಹಕ್ಕಿದೆ.

Pic credit - Pintrest

ನಿಮ್ಮ ಅಂದ ದುಪ್ಪಟ್ಟುಗೊಳಿಸುವ ಸಂಪ್ರದಾಯಿಕ ಚಿನ್ನದ ಸರಗಳು ಇಲ್ಲಿವೆ