24 June 2024
ನೀವು ತುಂಬಾನೇ ತೆಳ್ಳಗಿದ್ರೆ ನಿಮ್ಮ ಬಟ್ಟೆಯ ಆಯ್ಕೆ ಹೀಗಿರಲಿ
Pic Credit -Pintrest
Author :Sayinanda
ಹೆಣ್ಣು ಮಕ್ಕಳಿಗೆ ಸುಂದರವಾಗಿ ಕಾಣಬೇಕೆಂದು ಇರುತ್ತದೆ. ಹೀಗಾಗಿ ಉಡುಗೆಗಳ ಆಯ್ಕೆಯ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
Pic Credit -Pintrest
ತೆಳ್ಳಗೆ ಇರುವ ಹುಡುಗಿಯರಿಗೆ ಯಾವುದೇ ಉಡುಗೆಗಳನ್ನು ಆಯ್ಕೆ ಮಾಡಿಕೊಂಡರೂ ಮೈಗೆ ಒಪ್ಪುವುದಿಲ್ಲ.
Pic Credit -Pintrest
ಸ್ಲಿಮ್ ಇರುವ ಮಹಿಳೆಯರು ಹಾಗೂ ಹುಡುಗಿಯರು ಯಾವ ರೀತಿಯ ಉಡುಗೆಗಳನ್ನು ಧರಿಸುವುದು ಎನ್ನುವ ಗೊಂದಲದಲ್ಲಿರುತ್ತಾರೆ.
Pic Credit -Pintrest
ನೋಡಲು ತೆಳ್ಳಗೆ ಇರುವ ಮಹಿಳೆಯರು ಆದಷ್ಟು ಗಾಢವಾದ ಬಣ್ಣಗಳ ಬಟ್ಟೆಯನ್ನು ಆಯ್ಕೆ ಮಾಡಿಕೊಳ್ಳಿ. ಕಪ್ಪು ಬಟ್ಟೆಯನ್ನು ಧರಿಸುವುದು ಆದಷ್ಟು ಕಡಿಮೆ ಮಾಡಿ.
Pic Credit -Pintrest
ತೆಳ್ಳಗಿರುವವರು ಆದಷ್ಟು ಬಿಗಿಯಾದ ಬಟ್ಟೆಗಳನ್ನು ಧರಿಸಬಾರದು. ಈ ಬಟ್ಟೆಗಳು ನಿಮ್ಮನ್ನು ಇನ್ನಷ್ಟು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ.
Pic Credit -Pintrest
ಋತುವಿಗೆ ತಕ್ಕಂತಹ ಫ್ಯಾಷನ್ ಉಡುಗೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟರೂ, ತೆಳ್ಳಗಿರುವವರು ಈ ಟ್ರೆಂಡಿ ಫ್ಯಾಷನ್ ಗಳೊಂದಿಗೆ ದಪ್ಪವಾದ ಬಟ್ಟೆಗಳನ್ನೇ ಆಯ್ದುಕೊಳ್ಳಿ.
Pic Credit -Pintrest
ಸ್ಲಿಮ್ ಆಗಿರುವವರು ಆದಷ್ಟು ಉದ್ದವಾದ ಪಟ್ಟಿಗಳಿರುವ ಡ್ರೆಸ್ ಗಳನ್ನು ಧರಿಸಬೇಡಿ. ಇದು ನೀವು ಇನ್ನಷ್ಟು ಸ್ಲಿಮ್ ಆಗಿ ಕಾಣುವಂತೆ ಮಾಡುತ್ತದೆ.
Pic Credit -Pintrest
ತೆಳ್ಳಗಿರುವವರು ಬಿಗಿಯಾದ ಜೀನ್ಸ್ ಧರಿಸಬೇಡಿ. ಫ್ಯಾಷನ್ ನಲ್ಲಿರುವ ಬಾಯ್‌ಫ್ರೆಂಡ್ ಜೀನ್ಸ್ ಅಥವಾ ಲೂಸ್ ಪ್ಯಾಂಟ್ ಗಳ ಆಯ್ಕೆಯತ್ತ ಗಮನ ಕೊಡಿ.
Pic Credit -Pintrest
ತೆಳ್ಳಗಿರುವವರು ಹೆವಿ ಪ್ರಿಂಟೆಡ್ ಡ್ರೆಸ್ಗಳು, ಡಿಜಿಟಲ್ ಪ್ರಿಂಟ್ ಗಳು ಇರುವ ಗಾಢ ಬಣ್ಣದ ಉಡುಗೆಗಳ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
Pic Credit -Pintrest
ಭಾರತದಲ್ಲಿ ಅತಿ ಹೆಚ್ಚು ಹಲಸಿನ ಹಣ್ಣು ಬೆಳೆಯುವ ರಾಜ್ಯ ಯಾವುದು? ಇಲ್ಲಿದೆ ನೋಡಿ
Pic Credit -Pintrest