ಈ ಬಿಸ್ಕೆಟ್​​​ನಲ್ಲಿ ರಂಧ್ರಗಳು ಇರುವುದು ಇದೇ ಕಾರಣಕ್ಕಂತೆ

12 September 2024

Pic credit - pinterest

Sayinanda

ಕಾಫಿ ಹಾಗೂ ಟೀ ಜೊತೆಗೆ  ಬಿಸ್ಕೆಟ್​​ ಸವಿಯಲು ಇದ್ದರೆ ಅದರ ಮಜಾನೇ ಬೇರೆ.

Pic credit - pinterest

ಮಾರುಕಟ್ಟೆಯಲ್ಲಿ ಚಾಕೋಲೇಟ್ ಸೇರಿದಂತೆ ವಿವಿಧ ಫ್ಲೆವರ್ ವಿರುವ ಬಿಸ್ಕೆಟ್ ಗಳು ಲಭ್ಯವಿದೆ.

Pic credit - pinterest

ನೀವು ಬಿಸ್ಕೆಟ್ ನಲ್ಲಿ ರಂಧ್ರವಿರುವುದನ್ನು ಗಮನಿಸಿದ್ದೀರಬಹುದು. ಆದರೆ ಈ ರಂಧ್ರಗಳು ಯಾಕೆ ಇವೆ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ.

Pic credit - pinterest

ಬಿಸ್ಕೆಟ್ ಗಳು ಚೆನ್ನಾಗಿ ಕಾಣಲು ಈ ರಂಧ್ರಗಳನ್ನು ಮಾಡಲಾಗುತ್ತದೆ ಎಂದು ಹೆಚ್ಚಿನವರು ಅಂದುಕೊಂಡಿದ್ದಾರೆ.

Pic credit - pinterest

ಆದರೆ ಈ ಕೆಲವು ಸಿಹಿ ಮತ್ತು ಉಪ್ಪು ಬಿಸ್ಕೆಟ್ ಗಳ ಮೇಲೆ ಈ ರಂಧ್ರಗಳನ್ನು ಕಾಣಬಹುದು. ಈ ರಂಧ್ರಗಳನ್ನು ಡಾಕರ್ಸ್ ಎಂದು ಕರೆಯಲಾಗುತ್ತದೆ.

Pic credit - pinterest

ಬಿಸ್ಕೆಟ್ ಗಳನ್ನು ಬೇಯಿಸುವಾಗ ಗಾಳಿಯು ಈ ರಂಧ್ರಗಳ ಮೂಲಕ ಹಾದುಹೋಗಲು ಈ ರಂಧ್ರಗಳನ್ನು ಮಾಡಲಾಗಿದೆ.

Pic credit - pinterest

ಬಿಸ್ಕೆಟ್ ನಲ್ಲಿ ರಂಧ್ರಗಳನ್ನು ಮಾಡದಿದ್ದರೆ, ಬೇಯಿಸುವ ಸಮಯದಲ್ಲಿ  ಗಾಳಿಯು ಅದರಲ್ಲಿ ತುಂಬಿ ಊದಿಕೊಂಡು ಆಕಾರವು ಹಾಳಾಗುತ್ತದೆ.

Pic credit - pinterest