Author: Sushma Chakre

ಆಲ್ಕೋಹಾಲ್ ಸೇವಿಸಿದ ಬಳಿಕ ಹ್ಯಾಂಗೋವರ್ ಉಂಟಾಗುವುದೇಕೆ?

ಆಲ್ಕೋಹಾಲ್ ಸೇವಿಸಿದ ಬಳಿಕ ಹ್ಯಾಂಗೋವರ್ ಉಂಟಾಗುವುದೇಕೆ?

08 ಜನವರಿ 2024

Author: Sushma Chakre

ಆಲ್ಕೋಹಾಲ್ ಡಿಹೈಡ್ರೋಜಿನೇಸ್ ಕಿಣ್ವದಿಂದ ಲಿವರ್​ನಲ್ಲಿ ಆಲ್ಕೋಹಾಲ್ ಚಯಾಪಚಯಗೊಳ್ಳುತ್ತದೆ. ಇದು ಅಸೆಟಾಲ್ಡಿಹೈಡ್ ಅನ್ನು ರೂಪಿಸುತ್ತದೆ. ಇದು ವಿಷಕಾರಿ ರಾಸಾಯನಿಕವಾಗಿದ್ದು ದೇಹಕ್ಕೆ ಆಂತರಿಕ ಹಾನಿಯನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.

ಎಲ್ಲ ಆಲ್ಕೋಹಾಲ್ ಅಸೆಟಾಲ್ಡಿಹೈಡ್ ಆಗಿ ಪರಿವರ್ತನೆಗೊಂಡಾಗ ಹ್ಯಾಂಗೊವರ್ ರೋಗಲಕ್ಷಣಗಳು ಉತ್ತುಂಗಕ್ಕೇರುತ್ತವೆ ಎಂದು ಅಧ್ಯಯನಗಳು ತೋರಿಸುತ್ತವೆ. 

ಆಲ್ಕೋಹಾಲ್ ಜೊತೆಗೆ, ಪಾನೀಯಗಳಲ್ಲಿನ ಕಾಂಜೆನರ್ ಮತ್ತು ಸಲ್ಫೈಟ್‌ಗಳಂತಹ ಸಂಯುಕ್ತಗಳು ಅದರಲ್ಲೂ ವಿಶೇಷವಾಗಿ ಕೆಂಪು ವೈನ್ ಮತ್ತು ವಿಸ್ಕಿಗಳಂತಹ ಗಾಢವಾದ ಡ್ರಿಂಕ್​ಗಳಿಂದ ಹ್ಯಾಂಗೊವರ್‌ ಹೆಚ್ಚಾಗುತ್ತದೆ.

ಆಲ್ಕೋಹಾಲ್​ನ ಮೂತ್ರವರ್ಧಕ ಪರಿಣಾಮ ಮತ್ತು ವಾಸೊಪ್ರೆಸಿನ್‌ನ ನಿಗ್ರಹವು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಆಗ ಮೆದುಳಿನ ಕುಗ್ಗುವಿಕೆ ಮತ್ತು ಮೈಗ್ರೇನ್‌ ಅನ್ನು ಪ್ರಚೋದಿಸುವ ವಾಸೋಡಿಲೇಷನ್‌ನಿಂದ ತಲೆನೋವು ಉಂಟಾಗುತ್ತದೆ.

ಆಲ್ಕೋಹಾಲ್ ಹೊಟ್ಟೆಯ ಒಳಪದರವನ್ನು ಕೆರಳಿಸುತ್ತದೆ ಮತ್ತು ಹೊಟ್ಟೆಯ ಆಮ್ಲ ಬಿಡುಗಡೆಯನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವಾಗಿ ವಾಕರಿಕೆ ಮತ್ತು ಹೊಟ್ಟೆ ನೋವು ಉಂಟಾಗುತ್ತದೆ.

ಆಲ್ಕೊಹಾಲ್ ಸೇವನೆಯು ಆಯಾಸವನ್ನು ಉಂಟುಮಾಡುತ್ತದೆ. ಆಲ್ಕೋಹಾಲ್​ನಿಂದ ಉಂಟಾಗುವ ಸಾಮಾನ್ಯ ಉರಿಯೂತ, ಹ್ಯಾಂಗೋವರ್ ನಮ್ಮ ಆರೋಗ್ಯ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಅನುವಂಶಿಕ ವ್ಯತ್ಯಾಸಗಳಿಂದಾಗಿ ಹ್ಯಾಂಗೊವರ್ ಸಂವೇದನೆಯು ಸಾಮಾನ್ಯವಾಗಿದೆ. ವಿಶೇಷವಾಗಿ ಏಷ್ಯನ್ ಮೂಲದ ಜನರಲ್ಲಿ ಇದು ಹೆಚ್ಚಾಗಿರುತ್ತದೆ. ಸುಮಾರು ಶೇ. 10-20ರಷ್ಟು ಜನರು ಮಾತ್ರ ಆಲ್ಕೊಹಾಲ್ ಸೇವನೆಯ ನಂತರ ಹ್ಯಾಂಗೊವರ್‌ ಅನುಭವಿಸುವುದಿಲ್ಲ.

ಹಸಿ ಮೊಟ್ಟೆ, ಕಾಫಿ ಅಥವಾ ಐಸೊಟೋನಿಕ್ ಮಿಶ್ರಣಗಳಂತಹ ವಿವಿಧ ಪಾನೀಯಗಳ ಹೊರತಾಗಿಯೂ ಹ್ಯಾಂಗೊವರ್‌ಗಳಿಗೆ ಯಾವುದೇ ನಿರ್ಣಾಯಕ ಚಿಕಿತ್ಸೆಗಳಿಲ್ಲ. 

ಆಲ್ಕೋಹಾಲ್ ಸೇವನೆಯ ಬಳಿಕ ಈ ಪಾನೀಯಗಳನ್ನು ಕುಡಿದರೆ ನಮ್ಮ ದೇಹದಲ್ಲಿ ಕಳೆದುಹೋದ ಪೋಷಕಾಂಶಗಳು, ದ್ರವಗಳು ಮತ್ತು ಎಂಡಾರ್ಫಿನ್​ಗಳನ್ನು ಪುನಃ ತುಂಬಿಸುತ್ತವೆ.