ಭಾರತದ ಈ ಕಡಲತೀರಗಳಿಗೆ ನೀವು ಒಮ್ಮೆಯಾದರೂ ಭೇಟಿ ನೀಡಲೇಬೇಕು!
29 Dec 2023
Author: Sushma Chakre
ಹ್ಯಾವ್ಲಾಕ್ ದ್ವೀಪದಲ್ಲಿರುವ ರಾಧಾನಗರ ಬೀಚ್ ಬೆರಗುಗೊಳಿಸುವ ಬಿಳಿ ಮರಳು ಮತ್ತು ತಿಳಿಯಾದ ನೀರನ್ನು ಒಳಗೊಂಡಿದೆ. ಇದು ಪ್ರಕೃತಿ ಪ್ರಿಯರಿಗೆ ಪ್ರಶಾಂತವಾದ ಸ್ವರ್ಗವನ್ನು ಸೃಷ್ಟಿಸುತ್ತದೆ. ಈ ಕಡಲ ತೀರದ ಸೌಂದರ್ಯವನ್ನು ಮೀರಿ ಸೊಂಪಾದ ಮರಗಳ ನಡುವೆ ಸೂರ್ಯಾಸ್ತವನ್ನು ವೀಕ್ಷಿಸಲು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.
ರಾಧಾನಗರ ಬೀಚ್, ಅಂಡಮಾನ್ ಮತ್ತು ನಿಕೋಬಾರ್
ಎಸ್ಕೇಪ್ ಟು ಟ್ರ್ಯಾಂಕ್ವಿಲಿಟಿ, ಗೋಲ್ಡನ್ ಸ್ಯಾಂಡ್ಸ್ ಮತ್ತು ಪಾಮ್ ಫ್ರಿಂಜ್ಡ್ ತೀರಗಳು ನಗರ ಜೀವನದಿಂದ ನಮಗೆ ರಿಲ್ಯಾಕ್ಸ್ ನೀಡುತ್ತವೆ.
ಮರಾರಿ ಬೀಚ್, ಕೇರಳ
ತೂಗಾಡುವ ತೆಂಗಿನ ಮರಗಳಿಂದ ಸುತ್ತುವರಿದ ಪಲೋಲೆಮ್ ಬೀಚ್ನ ಪ್ರಾಚೀನ ಮರಳಿನ ಕಡಲತೀರಗಳ ಶಾಂತ ಸೌಂದರ್ಯವನ್ನು ಎಂಜಾಯ್ ಮಾಡಬಹುದು.
ಪಲೋಲೆಮ್ ಬೀಚ್, ಗೋವಾ
ಅರಬ್ಬೀ ಸಮುದ್ರದ ಮೇಲಿರುವ ಗೋಕರ್ಣ ಬೀಚ್ ಪ್ರವಾಸಿಗರನ್ನು ಕಡಲತೀರದತ್ತ ಸೆಳೆಯುತ್ತದೆ. ಹೆಚ್ಚು ಜನಸಂದಣಿಯಿಲ್ಲದ ಈ ಬೀಚ್ನಲ್ಲಿ ಮನಸಿಗೆ ಹಾಯೆನಿಸುವಂತೆ ಎಂಜಾಯ್ ಮಾಡಬಹುದು.
ಗೋಕರ್ಣ ಬೀಚ್, ಕರ್ನಾಟಕ
ದಕ್ಷಿಣ ಗೋವಾದ ಅಗೋಂಡಾ ಕಡಲ ತೀರ ಇನ್ನೂ ಪ್ರವಾಸಿಗರಿಗೆ ಹೆಚ್ಚು ತೆರೆದುಕೊಂಡಿಲ್ಲ. ಹೀಗಾಗಿ, ಇಲ್ಲಿ ನೆಮ್ಮದಿಯಾಗಿ ಕಾಲ ಕಳೆಯಬಹುದು. ಇದರ ದಡದಲ್ಲಿ ಯಾವುದೇ ಮಾಲಿನ್ಯಗಳೂ ಇಲ್ಲ. ಸ್ವಚ್ಛತೆಯಿಂದ ಇರುವ ಈ ಕಡಲತೀರದಲ್ಲಿ ಸಂಜೆಯನ್ನು ಕಳೆಯಲು ಚೆನ್ನಾಗಿರುತ್ತದೆ.
ಅಗೋಂಡಾ ಬೀಚ್, ಗೋವಾ
ಅರೇಬಿಯನ್ ಸಮುದ್ರದ ಮೇಲಿರುವ ಎತ್ತರದ ಬಂಡೆಗಳನ್ನು ಹೊಂದಿರುವ ಸಾಂಪ್ರದಾಯಿಕ ಬೀಚ್ ಇದು. ನೀವು ಕಡಲತೀರದಲ್ಲಿ ಸಮಯ ಕಳೆಯಲು ಬಯಸಿದರೆ ಅಥವಾ ಸಮುದ್ರದ ತೀರದ ಉದ್ದಕ್ಕೂ ನಿಧಾನವಾಗಿ ಅಡ್ಡಾಡಲು ಬಯಸಿದರೆ ಈ ಸ್ಥಳವು ನಿಮಗೆ ಬೆಸ್ಟ್.