ಅಡುಗೆ ಎಣ್ಣೆ ಬಳಸದೇನೇ ಈ ರೀತಿ ರುಚಿಕರ ಸಾಂಬಾರ್ ಮಾಡಿ
2 November 2024
Pic credit - Pinterest
Sainanda
ಅಡುಗೆಗೆ ಎಣ್ಣೆಯಿಲ್ಲದೇ ಹೋದರೆ ಅಡುಗೆ ಮಾಡುವುದು ಹೇಗೆ ಅಲ್ಲವೇ, ಎಲ್ಲದಕ್ಕೂ ಎಣ್ಣೆ ಬೇಕೇ ಬೇಕು.
Pic credit - Pinterest
ಎಣ್ಣೆ ಸ್ವಲ್ಪ ಕಡಿಮೆಯಾದರು ಕೂಡ ಅಡುಗೆ ರುಚಿಸುವುದೇ ಇಲ್ಲ. ಆದರೆ ಒಂದು ಹನಿ ಎಣ್ಣೆ ಬಳಸದೇನೇ ರುಚಿ ರುಚಿಕರವಾದ ಸಾಂಬಾರು ಮಾಡಬಹುದು.
Pic credit - Pinterest
ಮೊದಲಿಗೆ ತರಕಾರಿಗಳನ್ನು ಕತ್ತರಿಸಿಟ್ಟುಕೊಳ್ಳಿ, ಈ ತರಕಾರಿಗಳು ಪಾತ್ರೆಗೆ ಅಂಟಿಕೊಳ್ಳದಿರಲು ನಾನ್ ಸ್ಟಿಕ್ ಪಾತ್ರೆಗಳನ್ನು ಬಳಸಿ.
Pic credit - Pinterest
ಬಾಣಲೆಯೂ ಬಿಸಿಯಾಗುತ್ತಿದ್ದಂತೆ ಜೀರಿಗೆ ಹಾಕಿ ಪರಿಮಳ ಬರುವವರೆಗೆ ಫ್ರೈ ಮಾಡಿಕೊಳ್ಳಿ. ಇದಕ್ಕೆ ಈಗಾಗಲೇ ಕತ್ತರಿಸಿಟ್ಟ ತರಕಾರಿಗಳನ್ನು ಸೇರಿಸಿಕೊಳ್ಳಿ.
Pic credit - Pinterest
ಸ್ವಲ್ಪ ಫ್ರೈ ಆಗುತ್ತಿದ್ದಂತೆ ನೀರು ಅಥವಾ ಟೊಮೊಟೊ ರಸವನ್ನು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.
Pic credit - Pinterest
ಆ ಬಳಿಕ ಅರಶಿನ, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಇನ್ನಿತ್ತರ ಮಸಾಲೆ ಪದಾರ್ಥಗಳನ್ನು ಸೇರಿಸಿ.
Pic credit - Pinterest
ಕಡಿಮೆ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಕರವಾದ ತರಕಾರಿ ಸಾಂಬಾರ್ ರೆಡಿ.
Pic credit - Pinterest
Next: ನಮಗೆ ನಾವೇ ಕಚಗುಳಿಯಿಟ್ಟಾಗ ನಗು ಬರಲ್ಲ ಯಾಕೆ? ಇದೇ ಕಾರಣವಂತೆ