ಶೋಭಾ ಕರಂದ್ಲಾಜೆ ಆಯ್ತು ಇದೀಗ ಜಗದೀಶ್​ ಶೆಟ್ಟರ್​ಗೆ ಗೋಬ್ಯಾಕ್ ಬಿಸಿ

20-March-2024

Author: Gangadhar saboji

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ. 

ಬೆಳಗಾವಿ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಶುರುವಾಗಿದೆ. 

ಬೆಳಗಾವಿಯಲ್ಲಿ ಹೊರಗಿನವರು ನಾಯಕರಾಗುವುದು ಇಷ್ಟವಿಲ್ಲವೆನ್ನುತ್ತಿರುವ ಕಾರ್ಯಕರ್ತರು.

ಶೆಟ್ಟರ್ ಉಸ್ತುವಾರಿ ಸಚಿವರಿದ್ದಾಗ ಮಾಡಿದ ಅನ್ಯಾಯ ಮರೆತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸ್ವಕ್ಷೇತ್ರದಲ್ಲಿಯೇ ಸಲ್ಲದವರು ಬೆಳಗಾವಿಯಲ್ಲಿ ಸಲ್ಲುವರೇ’ ಎಂದು ಶೆಟ್ಟರ್​ ವಿರುದ್ಧ ಕಿಡಿಕಾರಲಾಗಿದೆ.

ನಮ್ಮಲ್ಲಿ ಸಾಕಷ್ಟು ನಾಯಕರಿದ್ದಾರೆ ನಿಮ್ಮ ಅವಶ್ಯಕತೆ ಇಲ್ಲ ಎಂದು ವಾಗ್ದಾಳಿ ಮಾಡಲಾಗಿದೆ.

ಒಂದು ಕಡೆ ಸ್ಥಳೀಯ ನಾಯಕರ ವಿರೋಧವಾದರೆ ಇನ್ನೊಂದಡೆ ಗೋ ಬ್ಯಾಕ್ ಶೆಟ್ಟರ್ ಅಭಿಯಾನ ಮಾಡಲಾಗುತ್ತಿದೆ.