ನರೇಶ್ -ಪವಿತ್ರಾ ಲೋಕೇಶ್ ಸಿನಿಮಾದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಗೊತ್ತಾ?

ನರೇಶ್​ ಹಾಗೂ ಪವಿತ್ರಾ ಲೋಕೇಶ್ ಅವರ ನೈಜ ಘಟನೆ ಆಧಾರಿತ ಮತ್ತೆ ಮದುವೆ ಸಿನಿಮಾ ಎಲ್ಲೆಡೆ ಬಾರೀ ಸುದ್ದಿಯಲ್ಲಿದೆ.

ಈ ಹಿಂದೆ ರಿಲೀಸ್ ಆಗಿದ್ದ ಮತ್ತೆ ಮದುವೆ ಸಿನಿಮಾ ಟೀಸರ್ ಬಹಳ ಸದ್ದು ಮಾಡಿತ್ತು.

ಇದೀಗಾ ಈ ಚಿತ್ರದಲ್ಲಿ ಯಾರೆಲ್ಲಾ ನಟಿಸುತ್ತಿದ್ದಾರೆ ಪಾತ್ರಧಾರಿಗಳ ಪಟ್ಟಿ ಬಯಲಾಗಿದೆ.

ವಿಜಯ ಕೃಷ್ಣ ಮೂವೀಸ್ ಬ್ಯಾನರ್ ಮೂಲಕ ಸ್ವತಃ ನರೇಶ್ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಜಯಸುಧ ಮತ್ತು ಶರತ್ ಬಾಬು ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಿದ್ದಾರೆ.

ವನಿತ ವಿಜಯಕುಮಾರ್, ರೋಶನ್, ಅನ್ನಪೂರ್ಣ, ಭದ್ರಂ, ಬಹು ದೊಡ್ಡ ತಾರಾಬಳಗ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ.